ಪೋಸ್ಟ್‌ಗಳು

‌Mozilla ವೆಬ್‌ಸೈಟ್ ಈಗ ಸಂಪೂರ್ಣವಾಗಿ ಕನ್ನಡದಲ್ಲಿ

ಇಮೇಜ್
‍‍‍‍
ಅತ್ಯಂತ ಸುರಕ್ಷಿತ ಬ್ರೌಸರ್ ‌Firefox ಅನ್ನು ಅಭಿವೃದ್ಧಿ ಪಡಿಸುವ ಮೊಜಿಲ್ಲಾ ಫೌಂಡೇಶನ್‌ನ ವೆಬ್‌ಸೈಟ್ ‍- http://mozilla.org ಅನ್ನು ಈಗ ಕನ್ನಡದಲ್ಲೂ ನೊಡಬಹುದು. ‍ಕನ್ನಡ ಆವೃತ್ತಿ ಇಲ್ಲಿ ಲಭ್ಯವಿದೆ. ಫೈರ್‌ಫಾಕ್ಸ್ (F‌irefox) ಅನ್ನು ಕನ್ನಡೀಕರಿಸುವ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಅನುವಾದ ತಂಡ ಈ ವೆಬ್‌ಪಾರ್ಟ್‌ನ ಲೋಕಲೈಸೇಷನ್ (ಕನ್ನಡ ಅನುವಾದ)ದ ಕೆಲಸದ ಹಿಂದಿದೆ.
ನಿಮಗೆ ಈಗಾಗಲೇ ತಿಳಿದಿರುವಂತೆ ‌F‌irefox ಬ್ರೌಸರ್ ಡೆಸ್ಕ್ತಾಪ್ ಹಾಗೂ ಆಂಡ್ರಾಯ್ಡ್‌ನಲಿ ಕನ್ನಡ ಇಂಟರ್‌ಫೇಸ್‌ನೊಂದಿಗೆ ಲಭ್ಯವಿದೆ. ಫೈರ್‌ಫಾಕ್ಸ್ ಕನ್ನಡ ಆವೃತ್ತಿ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
‍ಮೊಜಿಲ್ಲಾ ಲೋಕಲೈಸೇಷನ್ ತಂಡದ ಜೊತೆಗೆ ಕೈಜೋಡಿಸಲು ಇಲ್ಲಿ ಕ್ಲಿಕ್ಕಿಸಿ. ಕನ್ನಡದಲ್ಲಿ ನಿಮ್ಮ ನೆ‌‌ಚ್ಚಿನ ಬ್ರೌಸರ್ ನೋಡುವುದರ ಜೊತೆಗೆ ಅದನ್ನು ಯಾವಾಗಲೂ ಕನ್ನಡದಲ್ಲಿರುವಂತೆ ಮಾಡಲು ನಿಮ್ಮ ಸಹಾಯ ಯಾವಾಗಲೂ ಬೇಕಿರುತ್ತದೆ. ನಮ್ಮೊಡನೆ ಕೆಲಸ ಮಾಡಲು ಜೊತೆಯಾಗಬಹುದು. ಕನ್ನಡೀಕರಿಸಬಹುದಾದ ಮೊಜಿಲ್ಲಾದ ಇತರೆ ಯೋಜನೆಗಳು
ಬ್ರೌಸರ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಷನ್‌ನ ಲೋಕಲೈಸೇಷನ್ ಸ್ಥಿತಿಗತಿ: ‍
ಲೋಕಲೈಸೇಷನ್‌ ತಂಡ ಮತ್ತು ಯೋಜನೆಗಳನ್ನು ಈ ಕೆಳಕಂಡ ಕೊಂಡಿಗಳಲ್ಲಿ ಕಾಣಬಹುದು:

Mozilla l10n Dashboard - https://l10n.mozilla.org/teams/knMozilla Locamotion - https://mozilla.locamotion.org/kn/ (ಬ್ರೌಸರ್ ಮತ್ತು …

ಕನ್ನಡ ವಿಕಿಸೋರ್ಸ್‍‍ನಲ್ಲೀಗ ಗ್ಯಾಜೆಟ್‍‍ಗಳು ಲಭ್ಯ

ಇಮೇಜ್
ಕನ್ನಡ ವಿಕಿಸೋರ್ಸ್‍‍ನಲ್ಲಿ ಇದುವರೆಗೆ ಯಾವುದೇ ಗ್ಯಾಜೆಟ್‍‍ಗಳು ಇರಲಿಲ್ಲ. ಈ ಕೆಳಗಿನ ಗ್ಯಾಜೆಟ್‍‍ಗಳನ್ನು ಈಗ ವಿಕಿಸೋರ್ಸ್‍‍ನಲ್ಲಿ ಅನುಸ್ಥಾಪಿಸಲಾಗಿದೆ. ಸಂಪಾದಕರು ಇವನ್ನು ತಮ್ಮ ಪ್ರಾಶಸ್ತ್ಯಗಳಲ್ಲಿ ಕಾಣುವ ಗ್ಯಾಜೆಟ್ ಟ್ಯಾಬ್ ಮೂಲಕ ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.
ಗ್ಯಾಜೆಟ್‌ಗಳ ಪಟ್ಟಿ ಹೀಗಿದೆ: Popup ಪಾಪ್-ಅಪ್ ಮೂಲಕ ವಿಕಿಪೀಡಿಯದ ಬಹುತೇಕ ಕ್ರಿಯೆಗಳನ್ನು ಮಾಡಲು ಸಹಕರಿಸುವ ಗ್ಯಾಜೆಟ್ReferenceTooltips ಲೇಖನಗಳಲ್ಲಿರುವ ಉಲ್ಲೇಖಗಳ ಸಂಖ್ಯೆಗಳ ಮೇಲೆ ನಿಮ್ಮ ಮೌಸ್ ಸರಿಸಿ, ಆಯಾ ಉಲ್ಲೇಖದ ಪುಟವನ್ನು ಮೌಸ್‌ಟೂಲ್‌ಟಿಪ್ ನಲ್ಲಿಯೇ ಓದಲು ಸಾಧ್ಯವಾಗಿಸುವ ಗ್ಯಾಜೆಟ್.Syntax highlighter: Make syntax stand out colourfully in the edit box.HotCat ಸುಲಭವಾಗಿ ವಿಕಿಪೀಡಿಯದ ಲೇಖನಗಳ ವರ್ಗ ನಿರ್ವಹಣೆ ಮಾಡಬಹುದು.Prove-It! ಉಲ್ಲೇಖಗಳನ್ನು ಸುಲಭವಾಗಿ ಸೇರಿಸಿ.RefToolbar


Syntax highlighter: ಗ್ಯಾಜೆಟ್ ಈಗ ಕನ್ನಡ ವಿಕಿಪೀಡಿಯದಲ್ಲಿ ಲಭ್ಯ

ಇಮೇಜ್
ಕನ್ನಡ ವಿಕಿಯಲ್ಲಿ ಟೆಂಪ್ಲೇಟುಗಳು ಮತ್ತು ಮಾಡ್ಯೂಲುಗಳಲ್ಲಿನ ತೊಂದರೆಗಳನ್ನು ನಿವಾರಿಸುವುದು ಕಷ್ಟಕರವಾದ ಕೆಲಸವಾಗಿತ್ತು. ಪ್ರತಿ ಸಾಲಿನಲ್ಲಿ ಬಳಸುವ ಬ್ರಾಕೆಟ್ಟು, ವೇರಿಯಬಲ್ಲುಗಳು ಇತ್ಯಾದಿಗಳ ಪ್ರಾರಂಭ ಮತ್ತು ಕೊನೆ ಹುಡುಕುವುದರಲ್ಲೇ ಹೈರಾಣಾಗುತ್ತಿತ್ತು. ಇದಕ್ಕೆ ಪ್ರೋಗಾಮರುಗಳ ಭಾಷೆಯಲ್ಲಿ "ಇಂಡೆಂಟೇಷನ್" ಸರಿ ಇದ್ದಿದ್ದರೆ ಎಂದು ಅನೇಕರಿಗೆ ಅನಿಸಿರಬಹುದು. ದಿನಾಂಕಗಳಿಗೆ ಸಂಬಂಧಿಸಿದ ಟೆಂಪ್ಲೇಟುಗಳನ್ನು ಸರಿಪಡಿಸುವಾಗ ಹಲವಾರು ಗಂಟೆ ಸಮಯ ವ್ಯಯಿಸಿದ್ದನ್ನು ಇಲ್ಲಿ ನೆನಪಿಸಕೊಳ್ಳಬಯಸುತ್ತೇನೆ. 
ಮೊನ್ನೆ ಇದೇ ರೀತಿ ಯೋಗೇಶ್ ಜೊತೆ ಫಿಲ್ಮ್ ಸಂಬಂಧಿತ ಟೆಂಪ್ಲೇಟು ಸರಿಪಡಿಸುವಾಗ ಕಣ್ಣಿಗೆ ಬಿದ್ದ ಸಿಂಟ್ಯಾಕ್ಸ್ ಹೈಲೈಟರ್ ಬಳಸಿ ನೋಡಿ ಅದನ್ನು ಇತರರಿಗೂ ಲಭ್ಯವಾಗುವ ಆಲೋಚನೆ ಹೊಳೆಯಿತು. ಇಂದು ಇದು ಕನ್ನಡ ವಿಕಿಪೀಡಿಯದಲ್ಲಿ ಹಾಗೂ ಕನ್ನಡ ವಿಕಿಸೋರ್ಸ್ ಎರಡರಲ್ಲೂ ಲಭ್ಯವಿದೆ. 

ನಿಮ್ಮಖಾತೆಯಲ್ಲಿ ಸಿಂಟ್ಯಾಕ್ಸ್ ಹೈಲೈಟರ್ ಇದ್ದಲ್ಲಿ, ಟೆಂಪ್ಲೇಟುಗಳು ಮೇಲ್ಕಂಡಂತೆ ಕಾಣುತ್ತವೆ.
ನಿಮ್ಮ ಖಾತೆಯಲ್ಲಿ ಈ ಗ್ಯಾಜೆಟ್ ಸಕ್ರಿಯಗೊಳಿಸಲು ಪ್ರಾಶಸ್ತ್ಯಗಳಲ್ಲಿನ ಗ್ಯಾಜೆಟ್ ಟ್ಯಾಬ್ ನೋಡಿ.  ‍

ಮಾತೃಭಾಷಾ - ತಂತ್ರಜ್ಞಾನದಲ್ಲಿ ಕನ್ನಡ - ವಿಚಾರ ಮಂಡನೆ

ಇಮೇಜ್
- ವಿಚಾರ ಮಂಡನೆ - ಮಾತೃಭಾಷಾ - ತಂತ್ರಜ್ಞಾನದಲ್ಲಿ ಕನ್ನಡ 
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜುಲೈ, ೨೦೧೬ರ ಶನಿವಾರ ಸೆಂಟ್ರಲ್ ಕಾಲೇಜು ಆವರಣದ 'ಸೆನೆಟ್ ಸಭಾಂಗಣದಲ್ಲಿ' ಆಯೋಜಿಸಿದ್ದ "ಮಾತೃಭಾಷಾ" ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಾನು "ತಂತ್ರಜ್ಞಾನದಲ್ಲಿ ಕನ್ನಡ" ಎನ್ನುವ ವಿಚಾರವಾಗಿ ವಿಷಯವನ್ನು ಮಂಡಿಸಿದ್ದೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಎಚ್. ಎಸ್. ರಾಘವೇಂದ್ರರಾವ್ ವಹಿಸಿಕೊಂಡಿದರು. ನನ್ನ ವಿಚಾರ ಮಂಡನೆಯ ಮುಖ್ಯ ವಿಷಯಗಳನ್ನು ದಾಖಲಿಸುವ ಪ್ರಯತ್ನ ಈ ಬ್ಲಾಗ್ :- 
ಪ್ರಾಥಮಿಕ ಬಳಕೆಗೆ ಬೇಕಿರುವ ತಂತ್ರಾಂಶಗಳು ಕನ್ನಡಕ್ಕೆ ಲಭ್ಯವಿವೆ. ಕೀಬೋರ್ಡ್ ಇತ್ಯಾದಿ - ಇದರಿಂದಾಗಿ ಕನ್ನಡವನ್ನು ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಲ್ಲಿ ಬಳಸಲು (ಓದಲು/ಬರೆಯಲು) ಸಾಧ್ಯವಿದೆ.  ಸರ್ಕಾರ ಮತ್ತು ಸಂಬಂಧಿತ ಸರ್ಕಾರೀ ಸಂಸ್ಥೆಗಳು ಹಾಗೂ ಪ್ರಾಧಿಕಾರ ತಂತ್ರಾಂಶಗಳ ಅಭಿವೃದ್ಧಿಯ ಕಡೆ ಗಮನ ಹರಿಸುವ ಬದಲು - ಭಾಷಾ ತಂತ್ರಜ್ಞಾನದ ಸಂಶೋಧನೆ, ಅದಕ್ಕೆ ಅವಶ್ಯವಿರುವ ನೀತಿ/ನಿಯಮಗಳನ್ನು, ಶಿಷ್ಟತೆಗಳನ್ನು (‌Standards), ‍ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳೊಂದಿಗಿನ ಸಹಯೋಗಗಳತ್ತ ಗಮನ ಹರಿಸಬೇಕಿದೆ. ಇದರಿಂದ ಇನ್ನೂ ಕಗ್ಗಂಟಿನ ಗೂಡಾಗಿರುವ ತಂತ್ರಜ್ಞಾನ/ತಂತ್ರಾಂಶಗಳಲ್ಲಿನ ಭಾಷಾ ಬೆಂಬಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಉದಾ: ಆಡೋಬ್ ಕಂಪೆನಿಯ ಫೋಟೋಶಾಪ್ ಇತ್ಯಾದಿಗಳಲ್ಲಿ ಇಂದಿಗ…

ಪುಸ್ತಕ ಸಂಚಯದ ಪುಸ್ತಕಗಳನ್ನು ವಿಕಿಯಲ್ಲಿ ಪರಿಚಯಿಸಲು ಸಹಕರಿಸಿ

ಮೊದಲ ಹಂತ:
ಸಂಚಯದ ಪುಸ್ತಕ ಸಂಚಯ (‌http://pustaka.sanchaya.net) ಯೋಜನೆಯ ಮೂಲಕ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನು ಸುಲಭವಾಗಿ ಕನ್ನಡದಲ್ಲಿ ಹುಡುಕಲು ಸಾಧ್ಯವಾಗುವಂತೆ ನಮ್ಮ ತಂಡ ಕೆಲಸ ಮಾಡಿದ್ದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಸಾಹಿತ್ಯದ ಜೊತೆಗೆ, ಕಲೆ, ವಿಜ್ಞಾನ, ತಂತ್ರಜ್ಞಾನ ಇತರೆ ೧೦೦ಕ್ಕೂ ಹೆಚ್ಚು ವರ್ಗಗಳಿಗೆ ಸೇರಿದ ಪುಸ್ತಕಗಳಿವೆ. ಪುಸ್ತಕ ಸಂಚಯದಲ್ಲಿ ವರ್ಗಗಳ ಪಟ್ಟಿಯನ್ನೂ, ಅವುಗಳನ್ನು ಬಳಸಿ ಪುಸ್ತಕ ಹುಡುಕುವ ಸೌಲಭ್ಯವನ್ನೂ ನೀಡಲಾಗಿದೆ. 

ಈ ಪುಸ್ತಕಗಳಲ್ಲಿ ಅತ್ಯುತ್ತಮವಾದ ಪುಸ್ತಕಗಳ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಲು ಕೆಲಸ ಮಾಡುತ್ತಿದ್ದೇವೆ. ಈ ಪುಸ್ತಕಗಳಲ್ಲಿ ಯಾವುವು ವಿಕಿಯಲ್ಲಿ ಪುಸ್ತಕ ಪುಟ ಹೊಂದಬಹುದು ಎಂಬುದನ್ನು ನೀವುಗಳು ನಮಗೆ ತಿಳಿಸಲು ಸಾಧ್ಯವಿದೆ. ಇದು ನಮ್ಮ ಯೋಜನೆಯನ್ನು ಮತ್ತೊಂದು ಹಂತಕ್ಕೆ ಒಯ್ಯಲು ಸಹಾಯ ಮಾಡುತ್ತದೆ. ಪುಸ್ತಕದ ಹೆಸರುಗಳನ್ನು ‌pustaka.sancaya.netನಲ್ಲಿ ಹುಡುಕಿ, ಆಯಾ ಲೈಬ್ರರಿಯ ಪುಸ್ತಕಗಳನ್ನು ಹುಡುಕಿ ಓದುವ ಅವಕಾಶ ಕೂಡ ಇದರಿಂದ ನಿಮಗೆ ಲಭ್ಯವಾಗಲಿದೆ. 

ಈ ತಿಂಗಳ ೨೨ರ ಒಳಗೆ ಈ ಕೆಲಸವನ್ನು ಮುಗಿಸುವ ಆಲೋಚನೆ ಇದ್ದು, ನಿಮ್ಮ ಕೈಲಾದಷ್ತು ಸಹಾಯ ಮಾಡುವಿರೆಂದು ನಂಬಿದ್ದೇವೆ. ನಮ್ಮ ಜೊತೆಗೆ ಸೇರಿ ಕೆಲಸ ಮಾಡಲು ಈ ಪೋಸ್ಟಿಗೆ ಒಂದು ಕಾಮೆಂಟ್ ಹಾಕಿ. 


ಬೀದರ್ ಫೋಟೋಗ್ರಫಿ ಸೊಸೈಟಿಯ ಜೊತೆ ವಿಕಿಪೀಡಿಯ ಸುತ್ತ

ಇಮೇಜ್
ವಾರಾಂತ್ಯದಲ್ಲಿ ಬೀದರ್‌ನಲ್ಲಿದ್ದಾಗ ಅಲ್ಲಿನ ಯುವ ಫೋಟೋಗ್ರಫಿ ಸೊಸೈಟಿಯ ಸದಸ್ಯರೊಡನೆ ಮಾತನಾಡುವ ಅವಕಾಶ ಸಿಕ್ಕಿತು. ಅವರಲ್ಲಿ ಕೆಲವರು ಈಗಾಗಲೇ ವಿಕಿಪೀಡಿಯ, ವಿಕಿಮೀಡಿಯ ಕಾಮನ್ಸ್‌ಗೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವುದನ್ನು ಕೇಳಿ ಖುಷಿಯೂ ಆಯಿತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಬೀದರ್ ವಿಕಿಪೀಡಿಯ ಗುಂಪಿನಲ್ಲಿ ಒಂದಾಗುವಂತೆ ಹೇಳುತ್ತಿದ್ದಾಗ ರಿಷಿಕೇಷ್ ಬಹಾದ್ದೂರ್ ದೇಸಾಯಿ ಅವರು ತೆಗೆದ ಚಿತ್ರ. ಬೀದರ್ ಇತಿಹಾಸ, ಕಲೆ, ಪರಿಸರ ಇತ್ಯಾದಿಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ವಿಕಿ ಕಾಮನ್ಸ್‌ನಲ್ಲಿ ಈ ತಂಡ ಇನ್ಮುಂದೆ ತಮ್ಮ ಕೊಡುಗೆಗಳನ್ನು ನೀಡಲಿದೆ. ಪ್ರಜಾವಾಣಿಯಲ್ಲಿ ಭಾನುವಾರ ೬, ಡಿಸೆಂಬರ್ ೨೦೧೫ ರಂದು ಪ್ರಕಟಗೊಂಡ ಲೇಖನ‘ಕನ್ನಡದಲ್ಲೇ ಮಾಹಿತಿ ಹಂಚಿಕೊಳ್ಳಿ’ Sun, 12/06/2015 - 15:29 ಬೀದರ್: ಪ್ರತಿಯೊಬ್ಬರು ಇಂದು ತುರ್ತು ಹಾಗೂ ಅಗತ್ಯ ಮಾಹಿತಿಗೆ ವಿಕಿಪಿಡಿಯಾದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಲಭಿಸುವಂತಾಗಲು ಸ್ಥಳೀಯರು ವಿಕಿಪಿಡಿಯಾದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂದು ವಿಕಿಪಿಡಿಯಾದ ಸಂಚಾಲಕ ಓಂಶಿವಪ್ರಕಾಶ ಹೇಳಿದರು. ಶನಿವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಹಿಂದಿ ಹಾಗೂ ಮಳಿಯಾಳಿಯಲ್ಲಿ ಮಾತ್ರ ಹೆಚ್ಚು ಮಾಹಿತಿ ಲಭ್ಯ ಇದೆ. ಕನ್ನಡದಲ್…

ಸಿಂಗಾಪುರ - ನ್ಯಾಷನಲ್ ಲೈಬ್ರರಿ - ಕುವೆಂಪು ಮತ್ತು ಬೇಂದ್ರೆ

ಇಮೇಜ್
ಸಿಂಗಾಪುರದ ನ್ಯಾಷನಲ್ ಲೈಬ್ರರಿ ಒಳಹೊಕ್ಕು ನೋಡುವುದೇ ಪುಸ್ತಕ ಪ್ರಿಯರಿಗೆ ಒಂದು ರೀತಿಯ ರೋಮಾಂಚನ. ನಾವು ಇಲ್ಲಿಗೆ ಬಂದಿಳಿದ ದಿನ, ಮಕ್ಕಳಿಗೆಂದೇ ಪುಸ್ತಕ ಓದಿ ಹೇಳುವ ಕಾರ್ಯಕ್ರಮವಿತ್ತು. ಮಕ್ಕಳು ಸಿದ್ಧಪಡಿಸಿದ ಚಿತ್ರಗಳು, ಮಾಡೆಲ್ ಇತ್ಯಾದಿ, ಅವರು ನೆಡೆಸಿಕೊಟ್ಟ ಕಥೆ ಹೇಳುವ ಕಾರ್ಯಕ್ರಮ ಇತ್ಯಾದಿಗಳ ಜೊತೆಗೆ ಅಲ್ಲಿದ್ದ ವ್ಯವಸ್ಥಿತ ಪುಸ್ತಕ ಬಂಡಾರವನ್ನು ನೋಡುತ್ತಾ ಸಮಯ ಕಳೆದಿದ್ದೆವು. ಏರ್‌ಕಂಡೀಷನ್ ಕಟ್ಟದ ಪೂರಾ ಪುಸ್ತಕಗಳು, ಡ್ರಾಮಾ ವೇದಿಕೆ ಇತ್ಯಾದಿಗಳು. ಜೊತೆಗೆ ಬೆಳಗ್ಗೆ ಇಂದ ರಾತ್ರಿ ೯:೩೦ ವರೆಗೆ ಕಾಲ ಕಳೆಯಲು ಅದರ ಜೊತೆಗೇ ಬೆಸೆದಿರುವ ಕ್ಯಾಫಿಟೇರಿಯ ಇತ್ಯಾದಿಗಳು ಓದುಗರನ್ನು ಆಲ್ಲೇ ಸೆರೆ ಹಿಡಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. 
ಇದೆಲ್ಲಕ್ಕಿಂತ ತುಂಬಾ ಮೆಚ್ಚುಗೆ ಆದದ್ದು, ಬುಕ್ ಎಕ್ಸ್ಚೇಂಜ್ ಸೌಲಭ್ಯ. ನೀವು ಓದಿ ಮುಗಿಸಿದ ಪುಸ್ತಕವನ್ನು (ಲೈಬ್ರರಿ ಇಂದ ಪಡೆದದ್ದನ್ನಲ್ಲ!) ಬೇರೆಯವರಿಗೆ ಓದಲು ಉಚಿತವಾಗಿ ನೀಡುವ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಕ್ರಮ. ಪ್ರತಿ ದಿನವೂ ಅನೇಕರು ಇಲ್ಲಿ ಪುಸ್ತಕಗಳನ್ನು ಪೇರಿಸಿದರೆ, ಅದನ್ನು ತೆಗೆದುಕೊಂಡು ಓದುವ ಜನರೂ ಅಷ್ಟೇ ಮಂದಿ. ನೂಕು ನುಗ್ಗಲಿಲ್ಲ. ವ್ಯವಸ್ಥಿತವಾದ ೬x4 ರ ಪುಟ್ಟ ಕಪಾಟು ಪುಸ್ತಕಗಳನ್ನು ಜೋಡಿಸಿಡಲು ಹೇಳಿ ಮಾಡಿಸಿದ್ದಂತ್ತಿದೆ.  ಲೈಬ್ರರಿಯಿಂದ ಪಡೆದ ಪುಸ್ತಕಗಳನ್ನು ಹಿಂಪಡೆಯಲು ದಿನದ ೨೪ ತಾಸೂ ಅದಕ್ಕೇ ಮೀಸಲಾದ ಕಲೆಕ್ಷನ್ ಬಾಕ್ಸುಗಳಿವೆ. ಆಡಿಯೋ/ವಿಡಿಯೋ, ಮಕ…