ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ ಬೆಳಕಿನ ಕಡೆಗೆ..

ದಿನ ದಿನವೂ ಯಂತ್ರಗಳ ನಡುವೆ
ಯಾಂತ್ರಿಕವಾಗಿ ಪಯಣಿಸುತಿರುವಾಗ
ಮಬ್ಬಾಗಿ ಉರಿಯುತಿರುವ ಆ ಎಲ್ಲಾ
ಕೊಳವೆ ದೀಪಗಳ ಬಿಟ್ಟು
ಜಗವನ್ನೇ ತನ್ನ ಸ್ವರ್ಣ ಕಿರಣಗಳ
ಕಾಂತಿಯಿಂದ ಬೆಳಗಿ
ಹೊಸ ದಿನದ ಹೊಸತನವ
ಹೊಸ ಜೀವಗಳಿಗೆ ಅರಿವೀಯ್ವ
ನೇಸರನ ಉದಯವನು
ಅವನು ಅಸ್ತಂಗತನಾಗುವುದನ್ನೂ
ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಾ
ಅದೆಲ್ಲೋ ಸಮುದ್ರದ ದಂಡೆಯ ಮೇಲೆ
ದೂರದ ನವ ನಾವಿಕನ ನಿರೀಕ್ಷೆಯಲ್ಲಿಯೋ ಎಂಬಂತೆ
ಹೊಸ ಬೆಳಕಿನೆಡೆಗೆ...

ಮಳೆಯ ಜೊತೆ...

ಮಳೆರಾಯ ನಿನಗೆ ನಮೋನಮ:
ತಣ್ಣನೆ ಗಾಳಿಗೆ ಮೈಯ್ಯೊಡ್ಡಿ ಕುಳಿತಿದ್ದೆ


ಮೇಘರಾಯನ ಕೃಪೆಗೆ ನಾ ಪಾತ್ರನಾದೆ
ಎದ್ದು ಹೊರಡುವ ಹೊತ್ತಿಗೆ ಸರಿಯಾಗಿ
ಧೋ! ಎಂದು ಮಳೆ...ಕಣ್ಣಂಚಲೊಂದು ಮುತ್ತು...

ಅಂತರಾಳದಲಿ ಹೊಕ್ಕು
ಹಳೆಯ ನೆನಪುಗಳ ಕೆದಡಿ
ಅಲ್ಲೆಲ್ಲೋ ಮರೆತಿದ್ದ ಫ್ರೇಮುಗಳ ನೆನೆದು
ಹನಿದಿತ್ತು ಕಣ್ಣಂಚಲೊಂದು ಮುತ್ತು...
- ಆ ಸಣ್ಣ ಹನಿಯು

ಶೂನ್ಯದ ಸೆರಗಲ್ಲಿ...

ನೀರವ ರಾತ್ರಿಯ ಶೂನ್ಯದ ಸೆರಗಲ್ಲಿ
ಹೊಸ ಬೆಳಕನ್ನು ಹುಡುಕುತ್ತ
ಸವೆಸಿದ ದಾರಿಯ ಮರೆತು
ಹೊಸ ದಿನದ ಕದವ ತಟ್ಟಿರುವೆ..

ಚಿಣ್ಣನ ನೆನಪು...

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಎದ್ದು ಬಿದ್ದು ಅಡ್ಡಾದಿಡ್ಡಿ
ನಕ್ಕುನಲಿದು ಅತ್ತು ಕರೆದು
ಅಮ್ಮನ ಬಳಿಗೆ ನೆಡೆದ ಪುಟ್ಟು..

ಹಾಲುಹಲ್ಲಿನ ನಗುವ ಚೆಂದ
ಕೋಪ ಬಂದರೆ ಮುಖದ ಬಿಗುವು
ಪಪ್ಪರಮೆಂಟಿಗೆ ಹಾಕಿದ ಸೋಗು
ಎಲ್ಲಕೂ ಮಿಗಿಲು ನಾಚಿದ ಮೊಗವು..

ಶಾಲೆಗೆ ನೆಡೆಯೋ ಎಂದರೆ ಅಮ್ಮಾ!
ಬಂದಿತು ನೋಡೋ ಹೊಟ್ಟೆಯ ನೋವು..
ಕೊಬ್ಬರಿ ಮಿಠಾಯಿ ಜೇಬಿಗೆ ತುಂಬೇ...
ಸರಸರ ನೆಡೆದನು ತುಂಟನೊ ತಿಮ್ಮ!!

ನೆಹರು ಚಾಚಾ ದಿರಿಸನು ಧರಿಸಿ
ಜೇಬಿಗೆ ರೋಜಾ ಹೂವನು ಮುಡಿಸಿ
ಠೀವಿಲಿ ಹಾಕಿದ ಹೆಜ್ಜೆಯ ಕಂಡು
ಕೆನ್ನೆಗೆ ಕೊಟ್ಟಳು ಅಮ್ಮನು ಮುದ್ದು...

ದುಸ್ತರದ ಬದುಕು

ಬದುಕು ದುಸ್ತರವಾಗಿದೆ ಇಂದು
ಬೇಡದ ಗೋಜಲುಗಳ ಮಧ್ಯೆ ಸಿಲುಕಿ
ಬಿಡಿಸಲೆತ್ನಿಸೆ ಸುತ್ತಿ ಸುರಳಿಯಾಗುತಿಹುದಿನ್ನೂ
ಹರ ಹರ ಬಿಡುಗಡೆ ಎಂದಿಗೆ ಎನಗೆ?

ಗೂಗಲ್ ವೇವ್ ಎಂಬ ಹೊಸ ಕಿಂಡಿ

ಇದರಲ್ಲಿ ಜಗತ್ತನ್ನೇ ಮಾತನಾಡಿಸಬಹುದು
ಹತ್ತುಹಲವು ಕಿಂಡಿಗಳ ಮೆರೆತು ಬದುಕಬಹುದು
ಮತ್ತೇನೋ ತಲೆಗೆ ಹತ್ತಿದರದನ್ನೂ ಇಲ್ಲೇ ಮಾಡುಬಹುದು
ಹೌದು.. ಇದೊಂತರ ಮಾಯಾಕಿಂಡಿ...

ಇದು ಪ್ರವಾಹವೇ?

ಹರಿವ ನೀರಿಗೆ ತಡೆಯಿಲ್ಲವಂತೆ
ಬರೆವ ಕವಿತೆಗೆಂತ ತಡೆ?
ನೀವ್ ಬರೆಯ ಬೇಡವೆಂದರೂ ಬರೆವೆ...
ನಿಮಗದು ತಲೆಯ ಕೊರೆಯಲೆಂದೇ....

ಮುಗುಳ್ನಗೆಯ ಮಾಯೆ...

ಬರಿ ಸಪ್ಪೆ ಎನಿಸಿದ ಕ್ಷಣಗಳ ನಡುವೆ ಸುಂದರ ಮುಗುಳ್ನಗೆಯೊಂದನ್ನು ಕಂಡು  ನಾಗಾಲೋಟದ ಹಾದಿಯಲ್ಲಿ ಬದುಕು ಹೊಸ ದಿಕ್ಕಿನತ್ತ ಹರಿವಂತೆ.... ...

ನಾನ್ ಏನ್ಮಾಡ್ಲಿ?

ಎಸ್ಸೆಮೆಸ್ ಮಾಡ್ಕಳ್ಳೊ ಮೈಲ್ ಮಾಡ್ಕಳ್ಳೊ..
ಆಫ್ಲೈನ್ ಹೋಗ್ಬಿಟ್ಟು ಚಾಟನ್ನೇ ಮಾಡ್ಕಳ್ಳೊ
ಫೇಸ್ ಬುಕ್ ನೋಡ್ಕಳೊ ಪಿಕಾಸ ನೋಡ್ಕಳೊ..
ಬರ್ದಿದ್ರೂನೂ ನೀ ಬ್ಲಾಗ್ ಬರ್ಕಳೋ

ಮೈಮರೆತ ಮಾಡ್ಮನಿಗೆ..

ಮಹಾಕಾವ್ಯದ ರಸದೌತಣವೀವ
ಮಹಾಕವಿಯ ನೆನಪಿಸುತ್ತಾ
ಮತ್ತೊಂದು ಮಹಾಕಾವ್ಯ ಸೃಷ್ಟಿಯಲಿ
ಮೈಮರೆತ ಮಾಡ್ಮನಿ :)

ಕಾರಣ??

ಸಂತೆಯೋಳ್ ಮನೆಮಾಡಿ ಆಗಾಗ ಸದ್ದುಗದ್ದಲವಾದೊಡೆ
ಏನೋ ಘಟಿಸಿತೆಂದರ್ಥವೇ?
ನನ್ನ ಮನದಾಳದ ಮಾತುಗಳ ಕವಿತೆಯೋಳ್
ಪಿಸುಗಿಟ್ಟಿದೊಡೆ - ಯಾರೋ ಸಿಕ್ಕಂತಾಯಿತೇ?

ಜೀರ್ಜಿಂಬೆ

ಬದುಕು ಅನುಭವಗಳ ಕಣಜ
ನಾನಿಲ್ಲಿ ಜೀರ್ಜಿಂಬೆ...
ಕಷ್ಟ ಸುಖಗಳ ಮಧ್ಯೆ ಹುಡುಕಿ
ಸವಿಯುಣುವ ತವಕದಲಿ
ಸಾಗಿಹುದೆನ್ನ ಜೀವನ ರಥ..

ಬದಲಾಗದವರು

ತರತರದ ಅನುಭವಗಳ ಮಧ್ಯೆ
ತರಾವರಿ ಪ್ರಶ್ನೆ ಉತ್ತರಗಳು
ಬದುಕು ಬದಲಾದರೂ
ನಾವು ಬದಲಾದೇವೆಯೇ...

ಅನಾಮಿಕನ ಮನಸ್ಸು ಹ್ಯಾಕ್ ಆದಾಗ...

ಮನಸ್ಸು ಹ್ಯಾಕ್ ಆದಾಗ..
ಹಕ್ಕಿಯಂತೆ ಪಟಪಟ ರೆಕ್ಕೆ ಬಡಿಯುತ್ತಾ
ಹಾರುತ್ತ, ಕುಣಿಯುತ್ತಾ, ಏನೋ ಕಳೆದು ಕೊಂಡಂತೆ
ಎಲ್ಲಿ ಏನಾಯ್ತೋ ಎಂದು ಸುಸ್ತಾಗಿ ಕುಳಿತದ್ದಿದೆ.

ಹ್ಯಾಕ್ ಹಾಗದ ಹಾಗೆ ತಡೀಲಿಕ್ಕೆ....
ಕಂಪ್ಯೂಟರ್ಗೇ ಗೂಡ್ ಕಟ್ಲಾ,
ಇಲ್ಲಾ ಬೇಲಿ ಹಾಕ್ಲಾ ಅಂದ್ರೆ..
ಅದೇನು ಬರೀ ಹಕ್ಕೀನಾ?

ಹ್ಯಾಕ್ ಆದ್ಮೇಲೆ, ಯಾರು ಹ್ಯಾಕ್ ಮಾಡಿದ್ರು?
ಹೆಂಗೆ ಹ್ಯಾಕ್ ಮಾಡಿದ್ರು? ಅವರ ಉದ್ದೇಶ ಏನು?
ಅವರಿಗೇನು ಲಾಭ? ನನಗೆ ಆದ ನಷ್ಟ ಏನು?
ಯೋಚಿಸಿ ಯೋಚಿಸಿ ಮನಸ್ಸೇ ಕಾಣೆಯಾದದ್ದು - ನನಗಾದ ನಷ್ಟ

ಮನಸ್ಸನ್ನು ಹೀಗೆ ಹ್ಯಾಕ್ ಮಾಡಿ ಕದ್ದೊರ್ ಸಿಕ್ರೆ,
ಏನ್ ಶಿಕ್ಷೆ ಕೊಡೋದು...
ಮನಸ್ಸಿಗೆ ತೊಂದ್ರೆ ಕೊಟ್ರೆ ಅವರು ಕ್ರಾಕರ್ ಆಗ್ತಾರಲ್ವಾ?
ಆಗ ತೊಂದ್ರೆ ಇನ್ನೂ ನನಗೇ ಜ್ಯಾಸ್ತಿ ಅಲ್ವಾ?

ಕೊಸರು- ಹ್ಯಾಕ್ ಮಾಡೊದ್ ಯಾಕ್ ಬೇಕಿತ್ತು... ಡೈರೆಕ್ಟಾಗೇ ಹೇಳ್ಬಹುದಿತ್ತಲ್ವಾ - ಅವರ ಮನಸ್ಸಿಗೆ ನನ್ನಿಂದೇನಾಗ್ಬೇಕಿತ್ತಂತ...

ಹೀಗೇ ಯೋಚಿಸಿದ್ದು

ಯೋಚನೆ ಮಾಡ್ಬಾರ್ದಂತಿದ್ದೆ...
ಯೋಚನೆ ಮಾಡ್ಲೇ ಬೇಕಿದೆ..
ಯೋಚನೆ ಯಾಕೆ ಮಾಡ್ದೆ ಅಂತ..
ಯೋಚನೆ ಮಾಡಿ ಹೇಳ್ಬಿಡಿ ತಪ್ಪೇನಿದೆ ಅಂತ..

ಛಾಯೆ ಹಾಗು ಮಾಯೆ

ಮನಸು ಕನಸುಗಳ ಹೊತ್ತ ಮರುಕ್ಷಣವೆ ನಾನಾದೆ ಕವಿ...
ಕವಿಯ ಸ್ಪೂರ್ತಿಯ ಸೆಲೆ ಉಕ್ಕಿ ಹರಿಯಲು ಬೇಕು
ಆ "ಸ್ಪೂರ್ತಿ" ಎಂಬ ಮಾಯೆ.. ಇಲ್ಲೇ ಎಲ್ಲೋ ಇರುವ
ಅದರ ಛಾಯೆಯಲ್ಲೇ ಸಾಗಿದೆ ನನ್ನ ಕವನಗಳ ಧಾರೆ...

ನಾನಂದುಕೊಂಡಂತೆ

ಮನಸ್ಸು ಹಗುರಾದಾಗ ಸ್ವಚ್ಚಂದವಾಗಿ ಹರಿದಾಡಿದ ಪದಗಳ ಮೇಳ - ಕಾವ್ಯಾಯಣ
ಪದಗಳ ಬಳಗದೊಳಗಣ ಆಟ ಸಧ್ಯಕ್ಕೆ ನನ್ನ ಮನಸ್ಸಿನ ಸ್ವಚ್ಚಂದ ಪರಿಪಾಟ...

ದನಿ

ಕರಣ ಕೇಳಿದ ದನಿ ನನ್ನ ಸ್ಥಬ್ದನನ್ನಾಗಿಸಿತ್ತು
ಕಾರಣವನ್ನು ಮಾತ್ರ ಕೇಳ ಬೇಡಿ..
ಶ್ರಾವಣದ ಕೋಗಿಲೆಯ ದನಿಯಂತೆ ಇಂಪು
ನನ್ನೆದಲ್ಲಿ ತುಂಬಿತ್ತದು ತಂಪು!!

ಸೆಲೆಬ್ರೇಟಿಂಗ್ ಲೈಫ್

ಹಬ್ಬಗಳ ರಾಶಿಯಿದೆ, ಭಕ್ಷ್ಯ ಭೋಜ್ಯಗಳ ಟಿಪ್ಪಣಿಯಿದೆ...
ನಳಮಹಾರಾಜನ ಆಮಂತ್ರಣವಿದೆ..
ಜೊತೆಗೆ ಜೀವನದಕಪ್ಪುಬಿಳುಪಿನ ಹಾಗು ರಂಗುರಂಗಿನ
ಚಿತ್ರಗಳ ಮಿಶ್ರಣ.. ಸಾಕಲ್ಲವೇ ಆಚರಣೆಗೆ?

ಮೈ ಹೆಡ್ ಇಸ್ ಬ್ಲಾಂಕ್

my head is blank.. m not able to think :( ಎಂದ ಗೆಳತಿಗೆ....
----------
ಯೋಚಿಸಿ ಯೋಚಿಸಿ ಖಾಲಿಯಾಗಿರಬೇಕು.. ತಲೆ...
ನಿಮ್ಮ ತಲೆ... ಒಂದ್ಚೂರು ಕಾಫಿ, ಇಲ್ಲಾ ಚಹಾ, ಅದೂ ಬೇಡವೆಂದರೆ
ಸಿ.ಸಿ.ಡಿ ಯ ಹಾಟ್ ಚಾಕೋಲೇಟ್ ಕುಡಿದು ಬಿಡಿ...
ನಾಲಗೆಗೆ ರುಚಿ ಹತ್ತುವುದರೊಳಗೆ ತಲೆಗೂ ಹತ್ತೀತು ಸ್ವಲ್ಪ ಕಿಕ್ಕು....
ಅಮೇಲೆ ಅದರೊಳಗೆ ಹೊಸ ಯೋಚನೆಗಳೇ...

ನಿದ್ರೆ ಬರ್ಲಿಲ್ಲಾಂದ್ರೆ....

ನಿದ್ದೆ ಬಂದಾಗ ನಿದ್ರಾದೇವಿಯ ತೆಕ್ಕೆಗೆ ಜಾರಿ,
ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ!..
ಜ್ಯಾಸ್ತಿ ಮಾತಾಡಿದ್ರೆ ಅದೇ ಜೋಗುಳ
ನಿದ್ದೆ ಬರ್ಲಿಲ್ಲಾಂದ್ರೆ ಇನ್ನೊಂದೆರಡು ಲಿನಕ್ಸ್ ಕಮ್ಯಾಂಡ ಗಳ ಮೇಳ :)

ಹುಟ್ಟು ಹಬ್ಬದ ಮರುದಿನ

ನಾನು ಹುಟ್ಟಿದ ಹಬ್ಬದ ನಂತರದ ದಿನ ಪ್ರೇಮಿಗಳ ದಿನ..
ಅದು ಈಗಲೇ ಇದ್ದಿದ್ದರೆ ಎಂದಿತೀ ಮನ...
ನನೆಪಿಸಿ ಬಿಟ್ಟಿರಿ ನೀವದನ್ನು... ಈಗ
ಅದೇ ದಿನಕ್ಕೆ ಕಾಯುತ್ತಿದೆ ಈ ನನ್ನ ಪುಟ್ಟ ಮನ

ಮರೆವು

ಅಯ್ಯೋ ನನ್ನ ಮರೆವಿಗೇನನ್ನೋಣ?
ಮರೆವೆ ನಿನ್ನೀ ಮರೆವಿನ ಕಾಲಿಗೆ ಬುದ್ದಿ ಹೇಳು - ಎಂದು ಹೇಳಿ ಬಿಡಿ....
ನಿಮ್ಮ ಡೈಲಾಗಿನ ಮುಂದೆ ನೆಡೆದೀತೇ ಅದರಾಟ...
ಇಲ್ಲದಿದ್ದರೆ ಮುಂದೊಂದು ದಿನ ಪರೀಕ್ಷೆಯ ಕಾಟ...

ನನ್ನ ವಿಸ್ಮಯ ಲೋಕ

ನಾಲ್ಕು ಗೋಡೆಗಳ ಮಧ್ಯೆ ನಮ್ಮ ವಿಸ್ಮಯ ಲೋಕ!
ಕಿಟಕಿ ಗಾಜುಗಳ ಒಡೆದು ಒಡೆಯದೆಯೂ,
ಲೋಕದ ಆಗುಹೋಗುಗಳ ನಡುವೆ ನಮ್ಮ ಒಡನಾಟ..
ಅಡೆತಡೆಯಿಲ್ಲದ ಸ್ವಚ್ಚಂದ ಉಸಿರಾಟ!!!

ಹೆದರಬೇಡಿ...
ಅದು ನಮಗೆ ನಾವೇ ವಿಧಿಸಿಕೊಂಡಿರುವ
ತಂತ್ರಜ್ಞಾನದ ಹಸಿವಿನ ದಿಗ್ಬಂಧನ...
ಅದರ ಸುತ್ತೇ ಸಧ್ಯ ನಮ್ಮೀ ಜೀವನ

ಅದೇ ಕವನವಾದದ್ದು

ಬರೆಯ ಹೊರಟ ನಾಲ್ಕು ಸಾಲುಗಳ
ನಾಲ್ಕಾರು ಕಾರಣಗಳಿಂದ ಬರೆಯದಾಯ್ತು...
ಕೊನೆಗೆ ಗೀಚಿದ ಪದಗಳ ಸೇರಿಸೆ
ಅದೇ ಒಂದು ಕವನವಾಯ್ತು...

ಲಿನಕ್ಸು ಬಳಸಿ

ಅಂಜಿಕೆ ಏಕೆ, ಹೆದರಿಕೆ ಏಕೆ ಲಿನಕ್ಸು ಬಳಸೋಕೆ....
ಕೇಳಿರಿ, ಕಲಿಯಿರಿ, ಬಳಸಿ ನೋಡಿರಿ ಹೊಸ ಲೋಕವ ನೋಡೋಕೆ..
ಸುಲಭವು ಕಲಿಯಲು, ಸುಲಭವು ಬಳಸಲು ನೀವೇ ಅರಿಯುವಿರಿ
ಪೈರಸಿ/ವೈರಸ್ ಭೂತವು ಕಾಡದೆ ಇರಲು ಮನದಲಿ ಹಿಗ್ಗುವಿರಿ..

ಉತ್ತರಕ್ಕೆ..

ಹಾಗೇ ಸುಮ್ಮನೆ ಕೇಳಿದ ಪ್ರಶ್ನೆಗಳು
ಹೊಸ ಪ್ರಶ್ನೆಗಳ ಹುಟ್ಟು ಹಾಕ್ತಿವೆ...
ಉತ್ತರ ನಾನೇ ಹುಡುಕ್ಲೋ ... ಇಲ್ಲಾ
ಚೀಟ್ ಶೀಟ್ ಕಳಿಸ್ತೀರೋ???

ಯಾವುದು ಕವಿತೆ?

ಮನದ ಅಂಚಿನಲ್ಲಿರುವ ನಾಲ್ಕಕ್ಷರವ
ಅಂಜಿಕೆ ಇಲ್ಲದೆ, ಕಾಗದದ ಅಂಚಿಗೆ
ಸರಾಗವಾಗಿ ಬಟ್ಟಿ ಇಳಿಸಿ.....
ಮುಂದೊಂದು ದಿನ ಅದೇ ಕವಿತೆಯಾದೀತು....

ದೀಪಗಳ ಹಾವಳಿ

ಎಲ್ಲಿ ನೋಡಲ್ಲಿ ದೀಪಗಳ ಹಾವಳಿ
ನಿಂತಲ್ಲಿ ಕೂತಲ್ಲಿ ಪಟಾಕಿಗಳು ಸಿಡಿಯುತಲಿ
ಹೊರಗೆ ಕಾಲಿಡಲು ಪೂರಾ ಗಲಿಬಿಲಿ
ಬೆಳಗುತ ಎಲ್ಲರ ಜೀವನವ ಪ್ರತಿಸಲಿ - ದೀಪಾವಳಿಯು ಶುಭತರಲಿ

ನಾನೂ ಕುಕ್ ಆದಾಗ

ನಾನು ಕುಕ್ ಆಗಿ ಅಡುಗೆ ಕುಕ್ ಮಾಡಿದಾಗ
ಅದನ್ನು ಕುಕ್ಕಿ ಕುಕ್ಕಿ ತಿನ್ನುವವರು ಬೇಡವೇ?
ಅವರು ಅದನ್ನು ಕುಕ್ಕಿ ಕುಕ್ಕಿ ತಿಂದ ಮೇಲೆ
ತಾನೇ .. ನಾನು ತಿಂದು ಸೇಫ್ ಆಗಿರಲು ಸಾಧ್ಯ...!!! :)

ಚಿಲಿ ಪಿಲಿ ಹಕ್ಕಿಗಳ ಮಧ್ಯೆ

ಹಕ್ಕಿಗಳೇ ಹಕ್ಕಿಗಳ ಹಿಡಿದು
ಚಿಲಿ ಪಿಲಿಯ ದನಿಯ ಬದಲು
ಕ್ಲಿಕ್ ಕ್ಲಿಕ್ ಕ್ಕಿಕ್ಕಿಸಿದಾಗ
ಯಕ್ಕಾ ಬಿಕ್ಕಿಯಾದ ಹಕ್ಕಿ
ಪಿಳಿ ಪಿಳಿ ಕಣ್ಣ ಬಿಡುತ್ತಿರುವುದ ನೋಡಿದಿರಾ?!!!!

ಮನದ ಹುಚ್ಚು...

ಹುಚ್ಚು ಮನಸ್ಸಿನ ಬಯಕೆಗಳ ಸುತ್ತ
ನೂರಾರು ಕನಸಿನ ಗೋಡೆಗಳ ಕಟ್ಟಿ
ಹುಚ್ಚು ಚಿಂತೆಯ ಮಾಡುತ್ತ....
ಮತ್ತೊಂದು ಹುಚ್ಚು ಮನಸ್ಸ ಹುಡುಕಾಟದಲ್ಲಿ

ನಾಳೆಯ ಚಿಂತೆಯಲಿ...

ರವಿವಾರದ ದಿನ ಮನೆಯಲ್ಲೇ ಕಳೆದೆನಲ್ಲ
ಹೊರಗೆ ಸುಡು ಬಿಸಿಲು, ಜೊತೆಯಾರೂ ಇಲ್ಲ
ಸಧ್ಯಕ್ಕೆ ಸೋಮಾರಿ ಪಟ್ಟಿಗೆಯ ಜೊತೆ ಸಂಗ
ನಾಳಿನ ಬ್ಯುಸಿ ದಿನಚರಿಗೆ ಮುಖ ಸಿಂಡರಿಸುತ್ತ...

ಅಕ್ವೇರಿಯನ್ ಗಳಿಗೆ

ನಿಮ್ಮಲ್ಲಿ ನಾನೂ ಒಬ್ಬ...
ನಾನೂ ನಿಮ್ಮಂತೆಯೇ..
ಜೊತೆಗೂಡಿ ನಾವೆಲ್ಲ,
ಹೊಸತನ್ನು ಹುಡುಕೋಣ...

ಅರವಿಂದನ ಹೊಸ ಬೆಳಕಿಗೆ...

ಮನದಲ್ಲಿ ಹೊಳೆದ ಬೆಳಕು
ಸುತ್ತಮುತ್ತಲು ಹರಿದು
ಹೊಸ ಬೆಳಕು ಚೆಲ್ಲುತ
ಹೊಸ ದಾರಿ ತೋರಲಿ
ಕತ್ತಲೆಯ ಸರಿಸಲಿ....

ಗುಳಿಗೆಯ ನುಂಗಿದ ಗಳಿಗೆ

ಗುಳಿಗೆಯ ನುಂಗಿದ ಗಳಿಗೆ
ಶುರುವಾಯ್ತು... ತಲೆಯ ತೂಗುಯ್ಯಾಲೆ...
ಸರಿ ನಾ ಸರಿದೆ ನಿದ್ರಾದೇವಿಯ ತೆಕ್ಕೆಗೆ....
ಶುಭರಾತ್ರಿ :)

ಹಾಡು ಮನವೇ

ಸುಮ್ಮನಿದ್ದ ಮನಕ್ಕೆ ಹಾಡು ಎಂದಾಗಲೇ
ನಾಲ್ಕು ಸಾಲುಗಳ ಬರೆದು, ಪದಗಳು
ಸರಾಗವಾಗಿ ಹರಿದಿವೆಯೇ ಎಂದು
ಸಾಲ ಗುನುಗಲು - ಹಾಡಿತೆನ್ನ ಮನ...