ಕಾಲ ಚಕ್ರದ ಮುಂದೆ..

/
5 Commentsಕಾಲ ಚಕ್ರದ ಮುಂದೆ ನನ್ನದೇನಿದೆ ಇಲ್ಲಿ?
ಯುವಕನ ಪರಿ ತಿರುಗಿ
ನನ್ನ ಜೀವನದ ಕೊನೆಯ ದಿನಗಳ
ನೆನಪಿಸುತಿಹುದು...

ಎದ್ದು ಕೂರಲೂ ಕಷ್ಟ, ಓಡುವುದೆಲ್ಲಿಯ ಮಾತು?
ಇಷ್ಟು ದಿನ ಕಾಲಚಕ್ರವನಿಡಿದು ಕಲಿತದ್ದಷ್ಟೇ ಗೊತ್ತು..
ಈಗಿಲ್ಲಿ ಕೂತು, ಮೊಮ್ಮಗನಿಗೆ ಕೇಳಿಸುವೆ
ಇದ್ದು, ಈಸಿ ಜಯಿಸುವ ಕಥೆಯ

ಅಗೋ ಕಾಣುತ್ತಿವೆ ಅಲ್ಲಿ, ನನ್ನ ಚಿತ್ರಪಟದಲ್ಲಿ
ಕಂಗೊಳಿಸುವ ಆ ಎರಡು ಕಣ್ಣುಗಳು
ಕಾಣದ ಆ ಕೊನೆ ಎರಡು ದಿನಗಳ
ಆಶ್ಚರ್ಯದಿಂದೆದುರುಗಾಣುತ್ತಾ...

ಸುತ್ತಿ ಸುತ್ತಿ ತಿರುಗುವ ಕಾಲ ಚಕ್ರಕೆ ನಾನು
ನಾಲ್ಕು ದಿನದ ಸಹಪಯಣಿಗನು
ಸುಸ್ತಾದರೂ ವಿರಮಿಸುವ ಪ್ರಶ್ನೆಯಿಲ್ಲ..
ನಾಳೆಯ ಬದುಕಿನ ಉತ್ತರಕ್ಕೀ ಓಟ..
ಕಾಲಚಕ್ರದ ಮುಂದೆ ನಾನೇನೂ ಅಲ್ಲ....


You may also like

ನನ್‌ಮನ © ೨೦೧೩. Powered by Blogger.