ಸಮಯ

ಸಮಯವು ಜಾರುತಿಹುದಲ್ಲ
ಕೈಯಲ್ಲಿಟ್ಟ ಬೆಣ್ಣೆ ನೀರಾಗಿ ಸೋರುವ ತೆರದಿ

ನೆನ್ನೆ ತಾನೇ ಶುರುವಾದ ಹೊಸ ವರ್ಷ
ಅದರಲ್ಲಿ ಮುಗಿದ ದಿನಗಳು ಏಳು...
ವಾರ ಮುಗಿಯುವ ವೇಳೆ,
ಮುಗಿಯುತ್ತಿರುವ ಮಾಸದ ನೆರಳು...

ಕೆಲಸವಿಲ್ಲದೆ ಕಳೆದ ರಜೆಯ ನಡುವೆ
ಯೋಚಿಸಿರಲೇ ಇಲ್ಲ ನಾನು..
ಕೆಲಸ ಮಾಡಬೇಕೀಗ ಮತ್ತೆ
ಸಮಯದ ಪರಿವೆಯಿಲ್ಲದೆ, ಅಲ್ವೇನು??

ಅಯ್ಯೋ, ಸಮಯ
ಸರಿದೇ ಹೋಗುತ್ತಿದೆ
ಸೋರಿ ಹೋಗುತ್ತಿದೆ...
ಜಾರಿ ಹೋಗುತ್ತಿದೆ....
ಎಂದು ಮತ್ತೆ ಅವಸರಿಸುತ್ತಿದೆ ಈ "ನನ್ ಮನ"

ಕಾಮೆಂಟ್‌ಗಳು

 1. 2009ರ ಬಗ್ಗೆ ಇನ್ನು ಚಿ೦ತಿಸುತಿರುವವರಿಗೆ ಅಥ್ಯುತ್ತಮ ಸಾಲುಗಳು....
  ಸಮಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಕನಿಸ್ಟ ಅರ್ಥವಾದರು ಕಲ್ಪಿಸೋಣ!!!
  ಸಮಯ = ಸ + ಮ + ಯ
  ಅದರ ಬಗ್ಗೆ ಆಆಆ ಅ೦ತ ಯೋಚಿಸುತ್ತ ಕು೦ತರೆ ಅದು
  ಸಮಯ = ಸಆ + ಮಆ + ಯಆ
  ಅ೦ದ್ರೆ
  ಸಮಯ = (ಸಆ = ಸ = "ಸ೦ಮ್ಥಿಗ್") + ಮಾಯ ;
  ಅ೦ದ್ರೆ ಅದರ ಬಗ್ಗೆ ಯೋಚಿಸಿದರೆ ಜೇವನದಲ್ಲಿ ಸ೦ಮ್ಥಿಗ್ ಮಾಯ..
  ಅದಕ್ಕೆ ಅನ್ಸುತ್ತೆ ನಮ್ಮ FMನಲ್ಲಿ ದೋಡ್ಡ ನಟರೊಬ್ಬ್ರು ಹೇಳ್ಥಿದ್ರು "ನೀವೇನಾದ್ರು ಸಾಧನೆ ಮಾಡ್ಬೇಕಾದ್ರೆ ಮೊದ್ಲು ಸಮಯದ ಬಗ್ಗೆ ಯೋಚನೆ ಮಾಡೊದು ಬಿಟ್ಬಿಡಿ "...
  ಓ ಸಮಯ ಆಗಬೇಡ ನೀ ಮಾಯ!!!

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ