ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸುತ್ತಿರುವ ಕನ್ನಡ ಜಾಗೃತಿ ಪತ್ರಿಕೆಗೆ ನವೆಂಬರ್ ೨೦೨೦ ರಲ್ಲಿ ಬರೆದ ಲೇಖನ: ಡಿಜಿಟಲ್ ಪ್ರತಿ ಇಲ್ಲಿದೆ. ಕನ್ನಡ ಭಾಷೆಯ ಸುತ್ತಲಿನ ಪ್ರೀತಿಯ ಅಭಿವ್ಯಕ್ತಿಗೆ ಮೊದಲ ಕೊಂಡಿ ಪುಸ್ತಕ. ಅವುಗಳಲ್ಲಿ ಅಡಗಿರುವ ಸಾಹಿತ್ಯ, ಅದನ್ನು ಸೃಷ್ಟಿಸಿದ ಕನ್ನಡದ ಲೇಖಕ/ಲೇಖಕಿಯರು ಮತ್ತು ಅವರನ್ನು ಕನ್ನಡ ಓದುಗರಿಗೆ ಪರಿಚಯಿಸಿದ ಪ್ರಕಾಶಕರಿಂದ ಮೊದಲುಗೊಂಡು, ಅದರಲ್ಲಿನ ಚಿತ್ರಕಲೆ, ಮುಖಪುಟ, ಅದರ ಸಂಪಾದನೆ, ಮುದ್ರಣ ಹೀಗೆ ಹತ್ತು ಹಲವು ಪ್ರಯೋಗಗಳನ್ನು ನಮ್ಮ ಭಾಷೆಯ ಬೆಳವಣಿಗೆಯ ಭಾಗವಾಗಿ ನಾವು ನೋಡಬಹುದು, ಅಭ್ಯಸಿಸಬಹುದು. ಕಾಲಕ್ಕೆ ತಕ್ಕಂತೆ ಭಾಷೆಯ ಉಳಿವಿಗೆ ಆಯಾ ಕಾಲದ ವಿಜ್ಞಾನ, ತಂತ್ರಜ್ಞಾನದ ಲಭ್ಯತೆಗಳನ್ನು ಭಾಷಾ ತಂತ್ರಜ್ಞಾನದ ಬೆಳೆವಣಿಗೆಯ ಆಯಾಮದ ಮೂಲಕ ಒಗ್ಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಕನ್ನಡದ ಭಾಷೆ ಕಂಪ್ಯೂಟರಿನ ಪರದೆಯ ಜೊತೆಗೆ ಇತರೆ ಬಹುಮಾಧ್ಯಮಗಳಲ್ಲೂ, ತಂತ್ರಜ್ಞಾನ ಪ್ರೇರಿತ ಅನ್ವಯಗಳಲ್ಲೂ ಸಿಗುವಂತಾಗಿರುವುದು ಈ ಬೆಳವಣಿಗೆಯ ಭಾಗವೇ ಆಗಿದೆ. ಇಂಟರ್ನೆಟ್ ಲಭ್ಯತೆ ಹಾಗೂ ಯುನಿಕೋಡ್ ಶಿಷ್ಟತೆಗಳ ಬಳಕೆ ಹೆಚ್ಚುತ್ತಿದ್ದಂತೆ ಇಂಗ್ಲೀಷ್ ಜೊತೆಗೆ ಜನ ತಮ್ಮ ಭಾಷೆಗಳಲ್ಲೇ ಮಾಹಿತಿ ಸಂವಹನಕ್ಕೆ ಮುಂದಾದರು. ಜ್ಞಾನ ಪ್ರಸರಣೆ ಹಾಗೂ ಮಾಹಿತಿಯ ಆಗರ ಕೈಬೆರಳಿನ ಅಂಚಿಗೆ ಸರಿದಾಗ, ಪುಸ್ತಕಗಳಿಗೂ ಇದರ ಡಿಜಿಟಲ್ ಟಚ್ ಒದಗಿಬಂತು. ಕಿಂಡಲ್, ಆಪಲ್ ಬುಕ್, ಲುಲು, ಗೂಗಲ್ ಪ್ಲೇ ಬುಕ್ ಹೀಗೆ ಹತ್ತು ಹ
maate illa.kavana chennagide:)
ಪ್ರತ್ಯುತ್ತರಅಳಿಸಿ