ಮುಗ್ದ ಮನಸ್ಸುಗಳು.....
ಉದ್ಯಾನದೊಳಗೊಂದು ಸುಂದರ ದಿನ
ಅಣ್ಣ ಹೇಳುತ್ತಿರುವನೊಂದು ಕಥೆಯ
ರೆಡಿ ಇಲ್ಲ ಕೇಳಲಿಕ್ಕೆ ತಂಗ್ಯವ್ವಾ, ಹೇಳ್ತಾಳೆ...
ಬಿಡಲೇ ಬಿಡ್ತೀಯಾ ಬರೆ ಬುರುಡೆಯಾ....
ಅಣ್ಣಾ ಹೇಳ್ತಾನೆ:
ನಿಜ ಹೇಳ್ತೀನಿ ಕೇಳವ್ವಾ ನೀನು
ಬುರುಡೆ ಬಿಡ್ಲಿಕ್ಕೆ ಬರಾಂಗಿಲ್ಲ ನನ್ಗೆ
ಕೇಳಿದೀನಿ ಇಲ್ಲಿನ ಕಥೆಯಾ ಶ್ಯಾಲ್ಯಾಗೆ
ವಸಿ ಓಡಿ ಹೋಗ್ದೆ ಕೇಳಿದ್ರಾಯ್ತು ನೀನು...
ಅಯ್ಯೋ ಬಿಡ್ಲೇ ಮುಗ್ಯಾಂಗಿಲ್ಲ ನಿಂದು
ಆಟ ಆಡ್ಲಿಕ್ಕೊತ್ತಾಯ್ತು.. ಕಾಯ್ತಾವ್ರ್ ನನ್ ಗೆಳತೀರು..
ಕಥೆ ಹೇಳಾಗಿಂದ್ರೆ ಕೇಳು, ರಾತ್ರಿ ಹೇಳೋವಂತೆ ನೀನು
ಬರಿಸ್ತೀಯಾ ನಿದ್ದೆ ನನ್ಗೆ, ತಲೆ ನೋವಾಂಗಿಲ್ಲ ಕೇಳು..
ಅಣ್ಣ:
ಬಿಡಾಂಗಿಲ್ಲ ನಿನ್ನ ಇವತ್ತು, ಕೂಡಿ ನನ್ನೊಡನಾಡು
ಬಾಳ ಮಾತಾಡ್ತೀ ನೀನು, ಸ್ವಲ್ಪ ನನ್ದೊಸಿ ಕೇಳು
ನಾ ನಿಂಜೋಡಿ ಆಡ್ಬೇಕಾದ್ರೆ ಬೇರೆವ್ರ್ಯಾಕೆ ಹೇಳು..
ಚಿನ್ನ ಅಲ್ವಾ, ಕೇಳು ಮಾತ್ನಾ ನನ್ಕೂಡಾ ನೀನು ಆಡು
ಚಿತ್ರಗಳು: ಹಳ್ಳಿ ಮನೆ ಅರವಿಂದ
I really loved this.... the words n the pictures compliment each other :)
ಪ್ರತ್ಯುತ್ತರಅಳಿಸಿ