ವನಸಿರಿಬಂಡೀಪುರದ ಗೊಂಡಾರಣ್ಯದಲಿ 
ರವಿಯ ರಂಗಿನಾಟ!
ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದು
ಚಿತ್ರವಿಚಿತ್ರ ಲೋಕ!

ಚರಾಚರ ಪಕ್ಷಿ ಸಂಕುಲಗಳ ಜೊತೆ
ವನ್ಯ ಮೃಗಗಳ ವಾಸ
ಜುಳು ಜುಳು ಹರಿವ ನೀರಿನ ಸೆಲೆ
ಅದರೊಡನಾಡು ನೀ ಬೆಳಕಿನಾಟ!

ನಿರ್ಮಲವಾಗಿರುವ ನೀರಲ್ಲೆಸಯಲಿಲ್ಲ ತಾನೆ
ನೀ ಕಲ್ಲು ಚಪ್ಪಡಿಯನ್ನು.
ಖುಷಿಯ ಕೊಟ್ಟರೂ ಹೆದರಿಸುವುದದು
ಬೆಚ್ಚನೆ ಮಲಗಿರುವ ಮೊಸಳೆಯನ್ನು!

ಜೋಕೆ! ವನ್ಯಸಿರಿ ನಿನ್ನ ಕ್ಯಾಮೆರಾದಲ್ಲಿ
ಸೆರೆಯಿಡಿಯಲಿಕ್ಕೆ ಮಾತ್ರ..
ಕಡಿದು ತಂದೆಯೋ ವನವ ಮಾನವ
ಕಾದಿದೆ ನಿನಗೆ ಶಾಪ!

ಚಿತ್ರ: ಅನಿಲ್ ರಮೇಶ್

ಕಾಮೆಂಟ್‌ಗಳು

  1. ನೈಜ ಚಿತ್ರಣ ತುಂಬ ಚೇನ್ನಾಗಿದೆ....
    ಮನುಷ್ಯನ ಆಸೆಯಲ್ಲಿ ಒಂದು ಕಾಲಕ್ಕೆ ಹಸಿರು ಗಿಡಗಳು ಕಪ್ಪು ಬಿಳುಪಾದರೂ ತಪ್ಪೇನಿಲ್ಲ...
    ಹಸಿರ ಕಂಡು ಆನಂದಿಸುವ ಕಣ್ಣು ನಮ್ಮದೆ, ಅದನ್ನುಳಿಸುವ ಕೆಲಸವೂ ನಮ್ಮದೆ...
    ಕಾಪಾಡುವ ಹಸಿರ ನಮ್ಮ ಉಸಿರ..

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ