ಮುನಿದ ಮನ

/
0 Comments
ಮುನಿದ ಮನವೇ ಸ್ವಲ್ಪ ನನ್ನ ಮಾತು ಕೇಳೆಯಾ?
ನಿಜವಾಗ್ಲೂ ಮನಸ್ಸಿರಲಿಲ್ಲ ನಿನ್ನ ಮನ ನೋಯಿಸಲಿಕ್ಕೆ..
ಈಗ ಹೇಳುವ ಕಾರಣವ ನೀನು ಕೇಳಬೇಕೆಂದೇನಿಲ್ಲ್ಲ..
ಸ್ವಲ್ಪ ನನ್ನ ಮಾತು ಕೇಳೆಯಾ?....


ಸಮಯದ ಪರಧಿಯ ದಾಟಿ ನೆಡೆಯಲಿಕ್ಕಾಗಲಿಲ್ಲ
ಕೆಲಸದ ಮಧ್ಯೆ ಎಲ್ಲರೂ ಕಳೆದೇ ಹೋಗಿದ್ದರಲ್ಲಿ...
ಇಲ್ಲೂ ಇಲ್ಲದ, ಅಲ್ಲೂ ಇಲ್ಲದ ತ್ರಿಶಂಕುವಿನಲ್ಲಿ ನಾನು
ಸ್ವಲ್ಪ ನನ್ನ ಮಾತು ಕೇಳೆಯಾ?....


ತಪ್ಪು ಒಪ್ಪುಗಳ ಮಾತೇ ಇಲ್ಲ...
ತಪ್ಪಾಗಿದೆ ಇಂದು, ಕೊಂಚ ಮರೆತು 
ನನ್ನ ಮಾತ ಕೇಳೆಯಾ?
ಸ್ವಲ್ಪ ನನ್ನ ಮಾತು ಕೇಳೆಯಾ?....

You may also like

ನನ್‌ಮನ © ೨೦೧೩. Powered by Blogger.