ಹೂ-ದುಂಬಿ ಜೊತೆಯಾಟ

/
0 Comments

ಹೂವ ಕಂಡೊಡನೆ ದುಂಬಿ
ತಾ ಬಂದು ಎದೆ ತುಂಬಿ
ಗುಯ್ ಗುಟ್ಟು ತೇಲಾಡಿ
ಮುತ್ತನಿಟ್ಟಿದೆ ನೋಡಿ

ನಾಚಿಕೆಯು ಇದಕಿಲ್ಲ
ನಮ್ಮಂತಲ್ಲವೇ ಅಲ್ಲ
ತನ್ನ  ಜೀವನದ ಜೊತೆಗೆ
ಪರಾಗಸ್ಪರ್ಶದ ಕೊಡುಗೆ

ಹೂವಿಗೂ ಗೆಲುವು, 
ತನ್ನನ್ನಾರೋ ಸ್ವರ್ಶಿಸಿ
ಪೋಷಿಸಿ ಮುತ್ತನಿಟ್ಟಾಗ
ಖುಷಿಯಿಂದರಳಿದೆ ನೋಡಿ

ನಗುಮುಖದ ಚಲುವೆ
ಇದ ಮುಡಿಯೆ ಕೊನೆಗೆ
ಅವಳ ಚಂದಕೆ ಮೆರುಗು
ಮಿಕ್ಕವರ ಕಣ್ಗಳಿಗೆ ಬೆರಗು

ಚಿತ್ರ: ಹರಿಪ್ರಸಾದ್ ನಾಡಿಗ್


You may also like

ನನ್‌ಮನ © ೨೦೧೩. Powered by Blogger.