ಮಳೆಗಾಲದ ಸಂಜೆ

/
0 Comments

On a rainy day, originally uploaded by omshivaprakash.

ಮಳೆಗಾಲದ ಆ ಒಂದು ಸಂಜೆ
ನೀರು ಸೋರುತ್ತಿತ್ತು ಮಾಡಿಂದ
ನೀರು ಸೋರುತ್ತಿತ್ತು

ನೆನಪ ಮಾಡುತ್ತಿತ್ತು ಆ ದಿನಗಳ
ಸೋರುತ್ತಿದ್ದ ಮನೆಯಂಗಳದಿ
ನಿಂತು ಮೀಯುತ್ತಿದ್ದೆ ನಾ

ಇಂದು ಸುರಿವ ನೀರು ನನ್ನ
ತೋಯುತ್ತಿಲ್ಲಾ...ಬದಲಿಗೆ ಅದ ಕಂಡು
ಕಿರಿಯುತ್ತಿರುವೆ ನಾ ಹಲ್ಲ

ನೀರನ್ನೇ ಸೆರೆ ಹಿಡಿದು
ಝಣ ಝಣ ಕಾಂಚಾಣ ದೋಚಿ
ಮತ್ತದೇ ನೀರ ಚಿತ್ರವ ಹಿಡಿದಿರುವೆ

ಮುಂದಿನ ದಿನಗಳು ಹೇಗೋ,
ಜೀವಜಲವೇ ಇಲ್ಲದ ದಿನಗಳ
ಕನಸೂ ಇನ್ನೂ ಎಚ್ಚರಿಸದಾಗಿದೆ ನನ್ನ

ಶುಭ್ರ ನೀರಿನ ಸೆಲೆಯ ಹುಡುಕಲು
ನೆಡೆಯ ಬೇಕಿದೆ ಇಂದು ಮೈಲು
ಮತ್ತಾರು...

ಮತ್ತೆ ಮಳೆ ಸುರಿಯುವುದೇ?
ಕಾಳು ನೆಟ್ಟು, ಬೆಳೆ ಬೆಳೆಯುವೆನೇ?
ನೀರು ದಾಹವಾದಾಗ ಸೋರುವುದೇ?

ಉಳಿದ ನೀರ ಸೆಲೆ ಅದೇಕೋ
ಗಂಗೆಯ ಸಂಗ ಸೇರಿ ನಮ್ಮ
ಹಾಸ್ಯ ಮಾಡುತ್ತಿರುವಂತಿದೆ

ಉಳಿಗಾಲವುಂಟೇ ನಮಗೆ?
ಸಿಕ್ಕ ಸಿಕ್ಕ ನೀರ ಸೆಲೆಗಳನ್ನೆಲ್ಲಾ ಮುಕ್ಕಿರುವಾಗ
ನೀರು ಸೋರುವುದುಂಟೆ ಮತ್ತೆ....You may also like

ನನ್‌ಮನ © ೨೦೧೩. Powered by Blogger.