ಚೌಕಾಬಾರ

/
2 Comments

Chowkabara | ಚೌಕಾಬಾರ
Originally uploaded by omshivaprakash

ಚೌಕಾಬಾರ ಆಡಿ ನೋಡು
ಚೌಕದ ಮನೆಗಳ ಎಣಿಸಿ ನೋಡು
ಮನೆಯಿಂದ ಮನೆಗೆ ಜಿಗಿಯುತ ನೀನು
ಒಂದು ಎರಡು ಎಣಿಸಿ ನೋಡು

ರಾಜ್ಯಗಳನ್ನೇ ಕಬಳಿಸಿದರಂತೆ
ಭಾರತ ಯುದ್ದಕೆ ಕಾರಣವಿದಂತೆ
ಶಕುನಿ ಮಾಮನು ನಿಷ್ಣಾತನಂತೆ
ನೀನೂ ದಾಳವ ಹಾಕಿ ನೋಡು

ದಾಳಗಳೆಸುಯುತ ಚೌಕಕೆ ಹಾರುತ
ಮೇಲಿದ್ದವನ ಮನೆಗೆ ಓಡು ಎನ್ನುತ
ಹೊಸ ಮನೆಯೊಂದನು ಕಂಡರೆ ನೀನು
ಉಳಿಯುವೆ ಅಲ್ಲೇ ತಿಳಿದು ನೋಡು

ಚದುರಂಗಕಿಂತ ಕಡಿಮೆ ಏನಲ್ಲ
ಮನೆಪಾಠದಲೇ ನೀ ಕಲಿ ಲೆಕ್ಕದ ಆಟ
ಚೌಕಾಬಾರದ ಕಾಯಿಯ ನೆಡೆಸು
ಮುಟ್ಟಿಸು ತಲೆಗೆ ಆಟದ ಬಿರುಸು

ಕಾಯಿಯ ಹಣ್ಣನು  ಮಾಡುವವರೆಗೆ
ನೆಡೆವುದು ಆಟ ಗೆಳೆಯರ ಜೊತೆಗೆ
ಹಣ ಹೂಡಲು ಬೇಡ ಕೇಳೋ ಅಣ್ಣಾ
ಗೆಳೆಯರು ಆದಾರು ಶತೃಗಳಣ್ಣ


You may also like

ನನ್‌ಮನ © ೨೦೧೩. Powered by Blogger.