ಮೋಡದ ಜೊತೆಗೆ

/
0 Comments

Alone, originally uploaded by Anil Ramesh.
ಅಲ್ಲೇ ನನ್ನ  ಹಳ್ಳಿಯ ಪಕ್ಕದ ಏರಿಯ ಮೇಲೆ
ಮರವೊಂದು ಮೋಡದ ಜೊತೆಗೆ ಮಾತಾಡಿತ್ತು
ಮಳೆ ತರ್ಲಿಕ್ಕೆ ಬಂದೇನೋ ಮಾರಾಯ?
ಅತ್ವಾ ಹಾಗೆ ಸುತ್ತ್ತಾಕ್ ಹೋಗ್ಲಿಕ್ಕೊ?

ಗಾಳಿ ಬರಾಂಗಿಲ್ಲಲ್ಲೋ ನನ್ ದಿನಾ ಕರ್ದು ಬರ್ಲಿಕ್ಕೆ
ಹೇಳಿದ ಮೋಡಣ್ಣ, ಅವನ ಕಣ್ಣಲ್ಲೂ ನೀರು ಹನಿಲಿಕ್ಕಿಲ್ಲ
ಆದ್ರೂ ಬಂದೀನಿ ನೊಡು, ಬಿಟ್ಟಿರಾಂಗಿಲ್ಲ ಭೂಮಿನ
ಹನಿ ಗೂಡಿಸ್ಕೊಂಡ್ ಬಂದೀನಿ, ಸುರಿಸೇ ಹೋಗ್ತೀನಿ

ಸುಡು ಬಿಸಿಲ ನಡುವೆ ಮೋಡ ಮುಸುಕಿ
ನೀಲಿ ಬಾನು ಕಪ್ಪಾಗಿ, ಕಣ್ ಹೊಡೆದು
ಗುಡುಗಿ, ಗುಡುಗುವವರ ಹುಟ್ಟಡಗಿಸುವಂತೆ
ಟಣ್ ಟಣ್ ಹನಿ ಗುಟುಕಿ ಭೂಮಿ ತಂಪಾದಂತೆ

- ಅದೆಲ್ಲಿತ್ತೋ ಕಾಣೆ ನಾಲಿಗೆಲಿ ನಾಲ್ಕು ಪದ
ಈ ಚಿತ್ರ ಕಂಡಾಗ ನನ್ ಕೈ ನಿಂದ ಜಾರಿ ಬಿತ್ತು :)


You may also like

ನನ್‌ಮನ © ೨೦೧೩. Powered by Blogger.