ಹೀಗೊಂದು ಪ್ರಶ್ನೆ

/
1 Comments
ಎದ್ದೊಡನೆ ಹೊರಗಿನ ಮಬ್ಬಿನಲಿ
ಎರಡೆಜ್ಜೆ ಇಟ್ಟು ರಸ್ತೆಯ ಸುತ್ತಮುತ್ತ
ಬಸ್ ಸ್ಟಾಂಡಿನ ಆ ಸೂರಿನ ಕೆಳಗೆ
ಬಸ್ ಹೊಳಹೊಕ್ಕ ನಂತರ
ಹೊರಗಿನ  ಚಕ್ರದ ಮೇಲಿನ ಮನೆಗಳಲ್ಲಿ
ಮತ್ತಾವುದೋ ಮನೆಯಂಗಳದಲ್ಲಿ
ಗೆಳೆಯನ ಮದುವೆಯ ಸಂಭ್ರಮದ ಮಧ್ಯೆ
ಕಚೇರಿಯ ಒಳಹೊರಗೆ
ಕೆಲಸ ಬಿಟ್ಟು ನೆಡೆದ ಮಾಲ್ ಗಳ ಬಳಿ
ಎಲ್ಲವನ್ನೂ ಸ್ವಲ್ಪ ದೂರವಿಟ್ಟು ನೆಡೆದ
ದೇವಸ್ಥಾನದ ಆಜೂ ಬಾಜು
ಆಗೊಮ್ಮೆ ಈಗೊಮ್ಮೆ ಕಾಲಿಟ್ಟ ಪಾರ್ಕಿನಲ್ಲಿ
ಹೀಗೆ ಇನ್ನೂ ಹತ್ತು ಹಲವು ಕಡೆ
ನಾನು ನೋಡಿಯೂ ನೋಡದ
ನೋಡಬೇಕಾದ ಮುಖ ಇಂದು
ಎಲ್ಲಿ ಮರೆಯಾಗಿದೆ ಎಂದು
ಮನದಲ್ಲೊಂದು ಪ್ರಶ್ನೆ...
ಉತ್ತರ ಎಲ್ಲಿ ಅಡಗಿ ಕುಳಿತಿದೆಯೋ....


You may also like

ನನ್‌ಮನ © ೨೦೧೩. Powered by Blogger.