ಪೇಪರ್ ದೋಣಿ

/
3 Comments
 ಚಿತ್ರಗಳು: ಪವಿತ್ರ

ಅಲೆಗಳ ಮೇಲೆ ತೇಲುತ ಬಂತು
ನೆನಪಿನ ಸೆರಗನು ಸರಿಸುತ ಬಂತು
ಮಗುವಿನ ಮನಸನು ತಣಿಸಲು ಬಂತು
ಊರಿಗೆ ನನ್ನನು ಒಯ್ಯುವೆನೆಂತು

ಕಾಗದದಲ್ಲಿ ಮಾಡಿದ ದೋಣಿ
ಪುಸ್ತಕದಾಳೆಯ ನೆನಪಿನ ದೋಣಿ
ರಜೆಯಲಿ ಮಜವ ತಂದ ದೋಣಿ
ಹರಿವ ನೀರಲಿ ತೇಲುವ ದೋಣಿ

ಮಕ್ಕಳ ಸಂಗ ಕೂಡಿ ನೋಡು
ಪೇಪರ್ ದೋಣಿಯ ಮಾಡಿ ನೋಡು
ರಸ್ತೆಯ ಮಧ್ಯೆ ಹರಿಯುವ ನೀರಲಿ
ಮಕ್ಕಳೊಡನೆ ಅದನಾಡಿಸಿ ನೋಡು

ಮಳೆಗಾಲದಲ್ಲಿ ರಸ್ತೆಯ ಮೇಲೆ
ಬೇಸಿಗೆ ಯಲ್ಲಿ ಮನೆ ಸಂಪಿನ ಒಳಗೆ
ಚಳಿಗಾಲದಲ್ಲಿ ಬಿಸಿ ನೀರಿನ ಜೊತೆಗೆ
ಕೈಯ್ಯಲ್ಲಿರಲಿ ಪೇಪರ್ ದೋಣಿ!


You may also like

ನನ್‌ಮನ © ೨೦೧೩. Powered by Blogger.