ವೃಷಸೇನ

/
1 Comments
ಮಹಾಭಾರತದ ಕುರುಕ್ಷೇತ್ರ
ರಣರಂಗದಲ್ಲಿ ಒಂದು ಪ್ರಸಂಗ
ಕಿನ್ನರರ ಯಕ್ಷಗಾನ ಪ್ರದರ್ಶನ
ವೀರ ವೃಷಸೇನನ ರುದ್ರ ನರ್ತನ!

ಸಾರುತ್ತಲೇ ಜನರ ಮನಗೆದ್ದು
ತಾಯಿಯ ಅಪ್ಪಣೆ ಪಡೆದು
ಯುದ್ದಕ್ಕೆ ಸಿದ್ದನಾಗಿ ನಿಂತಿದ್ದಾನೆ
ಕರ್ಣನ ಪುತ್ರ ವೃಷ ಸೇನ..


ತಂದೆಗಾಗಿ ರಣರಂಗಕ್ಕೆ ನುಗ್ಗಿದ
ಅಭಿಮನ್ಯುವ ಮೀರಿಸಲು
ತನ್ನ ತಂದೆಯ ಇಷ್ಟಾರ್ಥ ಸಿದ್ದಿಸಲು
ಬೆಂಕಿಯುಂಡೆಯಂತೆ ನುಗ್ಗಿ ಬರುತ್ತಾನೆ

ಕೃಷ್ಣ ಕಳುಹಿದ ಭೀಮನನ್ನು
ತನ್ನೆಲ್ಲಾ ಯುಕ್ತಿ ಉಪಯೋಗಿಸಿ
ಸಾಮಾನ್ಯನಲ್ಲದ ಬಾಲಕನ
ಕೊಲ್ಲದೆ ತನ್ನಲ್ಲಿ ಹಿಡಿದುತರಲು

ಇವನೇನು ಸಾಮಾನ್ಯನೇ?
ಉರುಳಿಸಿದ ಭೀಮನನ್ನೇ...
ಕೊನೆಗೆ ಅರ್ಜುನನೊಂದಿಗೆ
ಕೃಷ್ಣನೇ ಬರಬೇಕಾಯ್ತು

ತನ್ನ ಮಾತುಗಳಲ್ಲೇ ಸೋಲಿಸಿದ
ಪೋರ ತನ್ನದೊಪ್ಪಂದಿರನ್ನು..
ಕೊನೆಗೂ ಸೋಲಲೇ ಬೇಕಾಯ್ತು
ಯುದ್ದದಲ್ಲಿ ಘಟಾನುಘಟಿಗಳ ಮಧ್ಯೆ

ಸೋತರೂ ಇವನೇ ಗೆದ್ದ
ಎಲ್ಲರ ಮನವನ್ನು.. ಪಾತ್ರದಲ್ಲಿ
ತನ್ನ ಮೊನಚಾದ ನಟನೆಯಲ್ಲಿ
ರಂಗಶಂಕರದ ಆ ಮಂದಿರದಲ್ಲಿ

- ರಂಗಶಂಕರದಲ್ಲಿ ನೋಡಿದ ವೃಷಸೇನ ಚಿಣ್ಣರ ಯಕ್ಷಗಾನ ಪ್ರದರ್ಶನ ಇನ್ನೂ ನನ್ನ ಕಣ್ಮುಂದೆ ಆಗಾಗ ಬಂದು ಹೋಗುತ್ತಿರುತ್ತದೆ.

ಮಹಾಭಾರತ ನಮಗೆ ಅದರ ಪ್ರತಿಯೊಂದು ಪ್ರಸಂಗದಲ್ಲೂ  ಏನೆಲ್ಲಾ ಕಲಿಸುತ್ತದೆ ಎಂಬ ಯೋಚನೆಯ ನಡುವೆ, ಯುದ್ದ ಸನ್ನದ್ದತೆ, ಅದಕ್ಕೆ ಬೇಕಿರುವ ಶಿಸ್ತು, ಧೃಡ ನಿರ್ಧಾರ ಹೀಗೆ  ಹತ್ತು ಹಲವು ವಿಷಯಗಳ ಕಡೆ ನನ್ನ ಮನಸೆಳೆದ ಉಡುಪಿಯ ಚಿಣ್ಣರಿಗೆ ಮತ್ತೊಮ್ಮೆ ಪ್ರೀತಿಯ ಹಾರೈಕೆಗಳು


You may also like

ನನ್‌ಮನ © ೨೦೧೩. Powered by Blogger.