ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಲೆಗಳಲ್ಲಿ ತೇಲಿ ಹೋದಾಗ

ಕಳೆದ ದಿನಗಳ ಹಳೆಯ
ನೆನಪುಗಳ ನೆನೆನೆನೆದು
ನೀರಿನೆಲೆಯ ಸೆಳೆತಕೆ
ಕಳೆದು ಹೋಗುತಲಿಹಳು

ತನ್ನ ಇನಿಯನ ಮನೆಯ
ಆ ದಡವ  ಸೇರುವುದು
ಹೇಗೆಂದು ಚಿಂತಿಸುತ
ಕಾಲ ಕಳೆದಿಹಳು

ಈ ಸಂಜೆಗತ್ತಲಲಿ
ನೀರ ಜೊತೆ ನೀರೆಯ
ಹತ್ತಾರು ಮಾತುಕತೆ
ಮನೆಯ  ಮಾಡಿಹುದು

ತಂಗಾಳಿ ಜೊತೆ ಸೇರಿ
ಹಾರುವದೋ, ಇಲ್ಲ..
ಆ ಮೀನ ಜೊತೆಗೆ
ಈಜಲೆಣಿಸಲೊ ನಾನು?

ಪ್ರಶ್ನೆಗಳ ಉತ್ತರಿಸೆ
ಕನಸಲಿ ತಾ ಬಂದು
ತನ್ನ ಮನೆಗೆನ್ನ ಕರೆದೊಯ್ಯ
ಬಹುದೇ ಗೆಳೆಯ?

- ಕಾವೇರಿಯ ದಡದಲ್ಲಿ ಕುಳಿತರೆ  ಇನ್ನೂ ನೂರು ಆಲೋಚನೆಗಳು ನಿಮ್ಮಲ್ಲೂ ಮನೆಮಾಡಬಹುದಲ್ಲ...

ಚಿತ್ರ:- ಪೃಥ್ವಿ - ವಿಜಯ್ ಶಂಕರ್ ಅಲ್ಬಂ ನಿಂದ

ಚಂದಿರನ ಮೊಗದಲಿ

ಬಾನ ಕುಸುಮ

ನವಿಲು

ನವಿಲೆ ನವಿಲೆ ನೀನೆಲ್ಲಿರುವೆ
ಕಾಣಲು ನಿನ್ನ
ಹಾತೊರೆದಿರುವೆ

ಜಳ ಜಳ ಸುರಿಯುತ
ಜಿನುಗುವ ಮಳೆಯಲಿ
ಕುಣಿಯುತ ಬರುವೆ
ಸುಂದರ ಚಲುವೆ

ಮಳೆಯಲಿ ನಲಿವುದ
ಕುಣಿಯುವ ನೀನು
ಕುಣಿವುದ ಕಲಿಸಿದೆ
ಕಾಣೆನೆ ನಾನು!

ಸಾವಿರ ಕಣ್ಣಿನ ರೆಕ್ಕೆಯ ಬಿಚ್ಚಿ
ಎಲ್ಲರ ಮನದಿ
ಚಿಟ್ಟೆಯ ಬಿಟ್ಟೆ

ಸಿಗಲೇ ಇಲ್ಲ ವಾರಗಳಾಯ್ತು
ಹೊಗಿದ್ದೆಲ್ಲಿ ಹೇಳದೆ ನೀನು?
ಕಾಣದೆ ನಿನ್ನ
ಇರಲಾರೆನು ನಾನು....

ನವಿಲೆ ನವಿಲೆ  ನೀನೆಲ್ಲಿರುವೆ
ಕಾಡಿಸ ದೆ ನೀ ಬರುವೆಯ ಚಲುವೆ
ನಿನಗಾಗಿಯೆ ನಾ ಕಾದಿರುವೆ...

ಜಗಕೆ ಜೀವವ ತುಂಬುತ ನೀನು
ಸುಂದರಗೊಳಿಸಿದೆ ಈ ಬನವನ್ನು
ಜೊತೆಯಲಿ ನಿನ್ನ ಕೂಡುತ ನಾನು
ಕಳೆಯಲೆ ದಿನವ ನಿನ್ನೆದುರಲ್ಲೆ

ಚಿತ್ರ: ಪವಿತ್ರ ಹೆಚ್

ಓಲೆ

ಬರೆಯಲೊಂದು ಪತ್ರವ ಹಿಡಿದೆ ನಾನು ಲೇಖನಿ
ಆರು ಮಾತು ನೂರು ತೆರದಿ ಮನದಿ ಮನೆಯ ಮಾಡಿದೆ
ಬರೆಯಲೇನು ಷಟ್ಪದಿ ಉಲಿಯಲೇನು ಚೌಪದಿ ಒಟ್ಟಿನಲ್ಲಿ ಚಿಕ್ಕ ಗುಟ್ಟ ಬರೆದೆ ನಾನು ಪತ್ರದಿ

ಹಡಗು

ಹೊತ್ತು ಸಾಗಲೆ ನಿನ್ನ
ಹೊಂಬಣ್ಣದ ಹಡಗಿನಲಿ
ಜಗವನರಿಯಲು ಚಿನ್ನ
ನಿನ್ನ ಕಣ್ಣಂಚಿನಲಿ

ವಸಂತದ ಮೇಘವರ್ಷ

ಜೀವತಳೆದು ಮೊಗ್ಗಾಗಿ,
ಹೂವಾಗಿ, ಕಾಯಾಗಿ
ಹಣ್ಣಾಗಿ, ಇತರರಿಗೆ
ಸವಿಯ ಜೇನಾಗಿ ಬೆಳೆದಿರಲು
ಬೇಸಿಗೆಯ ಬಿಸಿಲಲಿ
ಬಿಸುಸುಯ್ದ ಜೀವಕೆ
ತಂಪನೆರೆವ ವಸಂತದ
ಮೇಘವರ್ಷ ನೀನಾದೆ
ಗೆಳತಿ...

ನನ್ನ ಕಂಗಳಂಗಳದಲಿ
ಆನಂದಭಾಷ್ಪದ ಎರೆಡು
ಹನಿಗಳ ಜೊತೆ, ನನ್
ಹೃದಯ ತುಂಬಿ ಬಂತು..

ಮರಳುಗಾಡಿನ ಮರಳ
ರಾಶಿಯ ನಡುವೆ
ಸುರಿದ ಎರಡು ಹನಿಗಳಂತೆ
ಆ ನಿನ್ನ ಜೊತೆ ಕಳೆದ
ಕೆಲ ಕ್ಷಣಗಳು ಕಳೆದುವಲ್ಲ

ಬೆವರ ಹನಿಗಳ ಬಿಸಿಯ
ತಣಿಸಲೇ ಬೀಸಿದ ಗಾಳಿಯಂತೆ
ಆ ನಿನ್ನ ಮಾತುಗಳು
ವಸಂತ ಮೇಘವರ್ಷ ನೀನಾದೆ
ಗೆಳತಿ...

ಚಿತ್ರ: ಪವಿತ್ರ

ಫ್ಲೈಯಿಂಗ್ ಸಾಸರ್

ನೆನ್ನೆ ಗುಡುಗು ಮಿಂಚಿನ ನಡುವೆ
ಕಂಡರಿಯದ ಆ ಆಕಾಶಕಾಯ,
ತನ್ನ ತಾನೇ ಸುತ್ತುತ್ತಾ
ತನ್ನ ದೀಪಗಳ ಪ್ರಭೆಯಿಂದ
ನೀಲಿ ಬೆಳಕ ಸೂಸುತ್ತ
ಯಾರನ್ನೋ ಹುಡುಕುತ್ತಾ
ಹಾದು ತೇಲಿ ಹೋಗುತ್ತಲಿತ್ತು...

ಪೂಚಂತೇ ಹೇಳಿದ ಫ್ಲೈಯಿಂಗ್ ಸಾಸರ್ ಕಥೆ
ನೆನಪಿಗೆ ಬಂದು...
ಓ ಇದು ಅದೇ ಇರಬೇಕಲ್ಲ
ಪರಲೋಕದ ಗೂಡಾಚಾರಿಗಳು
ಏಲಿಯನ್ ಗಳೂ ಇರಬಹುದಲ್ಲ
ಅಥವಾ ಅಮೇರಿಕಾ ರಷ್ಯಾ ಇತರೆ
ದೇಶಗಳ ಗೂಢಾಚಾರಿಗಳು..
ಏನೆಲ್ಲಾ ತಲೆಯಲ್ಲಿ ಹೊಳೆದು
ಮಿಂಚಿನಂತೆ ಮಾಯವಾಗಿ ಹೋದವು

ಉಡುಗೊರೆ

ಚೆಂದದ ಉಡುಗೊರೆಯ ತಂದು "ಇದು ನಿನಗಾಗಿ ನಾ ಮೆಚ್ಚಿ ತಂದದ್ದು.. ಚೆಂದಿದೆ ಅಲ್ಲವೇ?"
ನೀ ಕೇಳಿದ ಈ ಪ್ರಶ್ನೆಗೆ ಉತ್ತರಿಸಲಿ ನಾ ಹೇಗೆ? ಉಡುಗೊರೆಯ ನೋಡಿದಾಕ್ಷಣ ಕಳೆದು ಹೋಯ್ತಲ್ಲ ನನ್ ಮನ...

ನಾ ಮೋಸ ಹೋದದ್ದೇಕೆ?

ಬೆಳದಿಂಗಳ ರಾತ್ರಿ ಬರುವ ಚಂದಿರನ
ಕ್ಯಾಮೆರಾದಲ್ಲಿ ಸೆರೆಹಿಡಿಯುವ ಬಯಕೆ
ಇಂದೇಕೋ ಅದು ಹೆಚ್ಚಾಗಿ ತಲೆ ಮೇಲೆತ್ತಿದೆ
ಮರದ ಮಧ್ಯದಲ್ಲಿ ಕಂಡ ಆ ಬೆಳ್ಳಗಿನ ವಸ್ತು
ನನ್ನೇ ಕದ್ದು ನೋಡುತ್ತಿರುವ ಶಶಿಯಂತಿತ್ತು
ಓ! ಇಲ್ಲೇ ಇದ್ದೀಯ ಎಂದು ಸೆರೆ ಹಿಡಿದೆ
ಬೀದಿ ದೀಪದ ಮೋರೆಗೆ ಮಾರಿ ಹೋದ ನಾನು
ಅದನ್ನೇ ಸೆರೆ ಹಿಡಿದು ಮೋಸ ಹೋದೆ...

ಇದೇ ಅನಾಲಜಿಯನ್ನ ನನ್ನ ಕತೆಗೆ ಹೋಲಿಸಲೇ?
ನನ್ನ ಕನಸಲಿ ಬರುವ ಆ ಸುಂದರ ಮುಖ
ಹೀಗೆ ಚಂದ್ರನಂತೆ ಅಲ್ಲೆಲೋ ಸುತ್ತಿ ಸುಳಿದು
ನನ್ನ ಮನವ ಕಾಡಿ ಮತ್ತೆಲ್ಲೋ ಕಂಡಂತೆ
ಇನ್ಯಾರೋ ಮುಖದ ಗ್ಲಿಂಪ್ಸ್ ನ  ಸ್ಯಾಂಪಲ್ ತೋರಿಸಿ
ಓಡಿ ಹೋಗಿರಬಹುದಲ್ಲ... ನನ್ನ ಮೋಸ ಮಾಡಿರಬಹುದಲ್ಲ...

ನಾನು ಮೋಸ ಹೋಗಿದ್ದಾದರೂ ಯಾಕೆ?

(ವಿ.ಸೂ : ನನ್ನ ತಚೆ ಅಭಿಮಾನಿ ದೇವರುಗಳಿಗೆ ಮತ್ತು ತಮಾಷೆಗಾಗಿ ಮಾತ್ರ ... :) )

ನೀ ನಕ್ಕಿದ್ದೇಕೆ?

ಆ ತುಂಟ ನಗು
ತಿಳಿನೀರ ಮೇಲೆ
ಅಲೆಗಳನ್ನೆಬ್ಬಿಸಿದೆ

ಆ ತುಂಟ ನಗು
ಮನದ ಮೂಲೆಯಲ್ಲಿ
ಕಲರವವ ಕೇಳಿಸಿದೆ

ಆ ತುಂಟ ನಗು
ಅಲುಗದ ನನ್ನ
ತಟ್ಟಿ ತೂಗಿಸಿದೆ

ಆ ತುಂಟ ನಗು
ನಗದೇ ಇದ್ದ
ನನ್ನೂ ನಗಿಸಿದೆ

ಆ ತುಂಟ ನಗು
ಒಂದು ಪ್ರಶ್ನೆಯನ್ನು
ತೂರಿ ಬಿಟ್ಟಿದೆ..
- ನೀ ನಕ್ಕಿದ್ದೇಕೆ?

ಚಿತ್ರ:- ಪವಿತ್ರ ಎಚ್

ಬಣ್ಣದ ಲೋಕ

ಹೀಗೊಂದು ನವಿಲು ಗರಿ

ಸೂರಿನಡಿ

ಪ್ರತಿ ಮನೆಯ ಸೂರಿನಡಿ ಇರಲಿ ಸಣ್ಣದೊಂದು ಬೆಳಕ ಬಿಂಬ!
ಮಬ್ಬಿನಲಿ ಅಳುವ ಮಕ್ಕಳ  ಸಂತೈಸಲಿಕ್ಕೆ ನಾಳಿನ ಕನಸುಗಳ ಕಟ್ಟುವ ಕಂದಮ್ಮಗಳ ಓದಿಗೆ ದುಡಿದು ದಣಿದು ಬಂದ ದೇಹಕೆ ತಂಪನೆ ಗಾಳಿ ಬೀಸಲಿಕ್ಕೆ ಬೆಳಗಿನಿಂದ ಹಸಿದಿರುವ ಹೊಟ್ಟೆಗೆ  ಊಟ ಬಡಿಸಲಿಕ್ಕೆ ನಿದ್ರಿಸುವ ಮುನ್ನ ಗುಂಯ್ ಗುಡುವ ಸೊಳ್ಳೆ ಓಡಿಸಲಿಕ್ಕೆ
ನಿಲ್ಲದು ಈ ಪಟ್ಟಿ... ಶಿವನ ಸಮುದ್ರದ ನೀರೆಲ್ಲ ಬತ್ತಿಸಿ ಊರ ಹೊತ್ತಿಸಿದರೂ ಹುಟ್ಟುವ ನಾಳೆಗಳ ಬಸಿರಲ್ಲೇ  ಮತ್ತಷ್ಟು ಬೇಕುಗಳ ಬೇಡಿಕೆ!
ಕಪ್ಪು ಬಂಗಾರವನ್ನೂ  ಕರಗಿಸಿ ಬೆಳಕ ನೀಡುವರಂತೆ ಎಷ್ಟು ದಿನ ನೆಡೆದೀತು ಈ ಆಟ?
ಚಿತ್ರ: ೨೮ನೇ ಮಾರ್ಚ್ ರಂದು ಕಾಮತ್ ಲೋಕರುಚಿಯಲ್ಲಿ ತೆಗೆದದ್ದು, ರಾಮನಗರ

ಮರಿ ಬೆಳ್ಳಕ್ಕಿ

BABY STORK Originally uploaded by Palachandra
ರೆಕ್ಕೆ ಬಡಿಯುವ ತೆರವ ಅಮ್ಮನ ಮುದ್ದಲಿ ಕಲಿತೆ ಹೆಕ್ಕಿ ತಿನ್ನುವ ಪರಿಯ ಕಾಲ ಊರಿ ಕಲಿತೆ

ಮೂರು ಚುಟುಕು ಮಾತುಗಳು

ನಿದ್ದೆ
ನಿದ್ದೆ ಬರಲಿ ನಿನಗೆ ದಿನದ ದಣಿವ ಸರಿಸೆ ಮಲಗು ಚಿನ್ನ ನೀ ಹೊದ್ದು ಕನಸ ಹೊದಿಕೆ
ಬೆಳಗು 

ಸೂರ್ಯ ತಟ್ಟುವ ಕದವ ಬರುವ ಮುಂಜಾನೆ ಚುಕ್ಕಿ ಚಂದ್ರಮ ಸರಿದು ಬೆಳ್ಳಿ ರೆಕ್ಕೆಯ ತೆರೆದು
ಕಣ್ರೆಪ್ಪೆ 
ಹಕ್ಕಿಪಕ್ಕಿಗಳ ಜೊತೆಗೆ ಸುಪ್ರಭಾತದ ಕರೆಗೆ ಕಣ್ಣರೆಪ್ಪೆಯ ಸರಿಸಿ ಜಗವ ಕಾಣೋ ಮಗುವೆ

ಬೆಳ್ಳಕ್ಕಿ

ಹಕ್ಕಿಯಂತೆ ಹಾಡುತಿರು ಹಕ್ಕಿಯಂತೆ ಹಾರುತಿರು ಹಕ್ಕಿಯಂತೆ ಉಲಿಯುತಿರು ಹಕ್ಕಿಯಂತೆ ತೇಲುತಿರು ಬಾನ ಚುಕ್ಕಿಯಂತೆ ನೀನು ಎಂದಿಗೂ ಮಿನುಗುತಿರು..
ರಶ್ಮಿ ಪೈ ಗೆ - ಫೂಲ್ಸ್ ಡೇ ದಿನದ ಶುಭಾಶಯಗಳು .. :)