ಅಪ್ಪುಗೆ

/
0 Comments
ಹುಟ್ಟುತ್ತಲೇ ಅಮ್ಮನ ಅಪ್ಪುಗೆಯಿಂದ
ತನ್ನ ದೇಹದ ಬಿಸಿಚಳಿಗಳ ಬದಿಗಿಟ್ಟು
ಜಗತ್ತಿನ ಎಲ್ಲ ತಾಪಮಾನಗಳಿಗೆ
ಅಂಜದೆ ಅಂಬೆಗಾಲಲಿ ನಡೆವೆ ಮಗು

ಒಡಹುಟ್ಟಿದವರು, ಗೆಳೆಯರೊಡನಾಡಿ
ಅವರ ಪ್ರೀತಿಯ ಅಪ್ಪುಗೆಯಿಂದ 
ಜೀವಿಸಿ ಜಗವ ಗೆಲ್ಲುವ ಛಲವ 
ತಮ್ಮಲ್ಲಿ ತುಂಬಿಕೊಳ್ಳುವ  ಮಕ್ಕಳು

ಬೆಳೆದಂತೆ ಮನಕದ್ದ ಇನಿಯ ಇನಿಯಳ
ಜೀವಕ್ಕೆ ಜೀವವಾಗಿ ನಾನು ನಿನ್ನಲ್ಲಿದ್ದೇನೆ
ಎಂದು ಹೇಳುತ್ತಾ ಅಪ್ಪುಗೆಯ ಸವಿ
ಅನುಭವಿಸುವ ಪ್ರೇಮಿಗಳು

ಯಾವುದೋ ಹಿಂದಿನ ಜನುಮದ 
ಋಣಾನುಬಂಧಧದಿ ಜೊತೆಗೂಡಿ
ಮರೆಯಲಾರದ ಜೀವದಪ್ಪುಗೆಯ
ಮೊರೆಹೋಗುವ ಪ್ರಾಣಸ್ನೇಹಿತರು


ಅಬ್ಬಬ್ಬಾ ... ಈ ಮಾಯದ ಅನುಭವವ ಸವಿದಾಗಲೇ ನಮ್ಮ ಮನದ ಅನೇಕ ತಂತುಗಳು ಚಲನಾಶೀಲ ಚೈತನ್ಯವನ್ನು ಪಡೆದು ಲೋಕದ ಕೊನೆಗಾಣುವವರೆಗೂ ನಮ್ಮ ಜೊತೆಗಿರುವ ಎಲ್ಲರ ಪ್ರೀತಿ ಪ್ರೇಮಗಳನ್ನು ಸಾಂಕೇತಿಕವಾಗಿ ಧೃಡಪಡಿಸುವುದಲ್ಲದೇ, ಕೊನೆಯ ಕ್ಷಣದಲ್ಲಿ ನಮ್ಮನ್ನು ಬಿಡಲಾರದೆ ಗೋಗರೆವ ಹೆತ್ತವರ, ಕಟ್ಟಿಕೊಂಡವರ ಮರೆಯಲಾರದ ನೋವ ಬವಣೆಗಳನ್ನೂ ನಮ್ಮ ಕಣ್ಮುಂದೆ ತರುತ್ತದೆಯಲ್ಲ...

ಚಿತ್ರ:- ಪಾಲಚಂದ್ರ 


You may also like

ನನ್‌ಮನ © ೨೦೧೩. Powered by Blogger.