ಅಮ್ಮ
ಎದೆ ಹಾಲ ಕುಡಿಸೆನ್ನ
ಬೆಳಸಿದ ಹೆಡೆದವ್ವ
ನಿನ್ನ ಋಣವ ತೀರಿಸಲಿ ಹೇಗೆ?
ಮೊದಲ ಗುರುವಾಗಿ
ವಿಧ್ಯೆ ಕಲಿಸಿದೆ ನೀ
ನಿನ್ನ ಋಣವ ತೀರಿಸಲಿ ಹೇಗೆ?
ತುತ್ತು ಅನ್ನವ ನೀಡಿ
ಹೊತ್ತು ಹೊತ್ತಿಗೆ ಕಾಯ್ದ
ನಿನ್ನ ಋಣವ ತೀರಿಸಲಿ ಹೇಗೆ?
ನನ್ನ ಬೇಕು ಬೇಡಗಳ
ದೇವರಿಗೂ ಮೊದಲರಿತು ವರವಾಗಿಸಿದ
ನಿನ್ನ ಋಣವ ತೀರಿಸಲಿ ಹೇಗೆ?
ಕಷ್ಟ ಸುಖಗಳ ನಾಲ್ಕು
ಅನುಭವದ ಮಾತುಗಳ ತಿಳಿ ಹೇಳಿದ
ನಿನ್ನ ಋಣವ ತೀರಿಸಲಿ ಹೇಗೆ?
ಹೊತ್ತು ಹುಟ್ಟುವ ಮುನ್ನ
ಹೊತ್ತು ಸರಿದ ಮೇಲೆ ನನ್ನ ಕಾಯುವ
ನಿನ್ನ ಋಣವ ತೀರಿಸಲಿ ಹೇಗೆ?
ಕರುಳ ಬಳ್ಳಿಯ ಕರೆಗೆ
ಓಗೊಟ್ಟು ಬಳಿಬರುವ ಅಮ್ಮಾ
ನಿನ್ನ ಋಣವ ತೀರಿಸಲಿ ಹೇಗೆ?
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ