೨ ಈ ನನ್ನ ಮನ ನಿನ್ನ ಹೃದಯದ ಮಡಿಲಲ್ಲಿ ಹಾಯಾಗಿ ವಿಶ್ರಮಿಸುತ್ತಿದೆ ಮನಸೇ.... ಆ ನಿನ್ನ ಒಂದೇ ಒಂದು ಕರೆಗಾಗಿ ಕಾಯುತ್ತಿದೆ ... ನಿನ್ನ ಅಪ್ಪಿ ಮುದ್ದಾಡಿ ಜಗದಲ್ಲಿರುವ ಎಲ್ಲ ಪ್ರೀತಿಯ ನಿನ್ನ ಮೇಲರಿಸುವಾಗ ನಿನ್ನ ಕಣ್ಣು ಹೇಳುವ ಕಥೆಗಳ ಕೇಳುತ, ನಿನ್ನ ಕೈ ಬೆರಳಿನ ಸಂಚಲನ ನನ್ನನ್ನಾವರಿಸುವಾಗ ನಿನ್ನ ಲೋಕದ ಸುತ್ತ ನಾ ಹೊಡೆದೆ ಒಂದು ಸುತ್ತು...
ಮಂಚಿಬೆಲೆ ಡ್ಯಾಮ್ ಬಳಿ ಸೆರೆ ಸಿಕ್ಕ ಮೀನುಗಾರ ಕುಟುಂಬದ ಒಂದು ಚಿತ್ರ ಸೆರೆಹಿಡಿದಿರುವ ಮೀನುಗಾರನ ಅನೇಕ ಮುಖಭಾವಗಳ ಕ್ಷಣಗಳನ್ನು ಒಂದೆಡೆ ಹಾಕಿದರೆ, ಅವನ ದಿನಚರಿ ಶುರುವಾಗುವ ಕಥೆಯೊಂದನ್ನು ಹೆಣೆಯಬಹುದು..
ಬಿಸಿ ಬಿಸಿ ಕಾಫಿ, ಹೀರಲಿಕ್ಕೂ ಮುಂದೆ ಕಂಡಿತ್ತು ಆ ನಗುಮುಖ ದೊಡ್ಡದಾದ ಕಣ್ಣುಗಳು ಹಣೆಯಲ್ಲಿ ಬಿಂದಿ, ಗಲ್ಲದ ಮೇಲೊಂದು ಸಣ್ಣ ದೃಷ್ಟಿ ಬೊಟ್ಟು, ನೋಡುತ್ತಲೇ ಕಾಫಿ ಹೀರಿ ಮುಗಿಸಿಯಾಗಿತ್ತು ಕಿಸೆಗೆ ಕತ್ತರಿ ಜೊತೆಗೆ ಆಫೀಸಿಗೆ ತಡವಾಗಿತ್ತು