ಒಂದು ಕಪ್ ಕಾಫಿ

/
0 Comments
ಬಿಸಿ ಬಿಸಿ ಕಾಫಿ,
ಹೀರಲಿಕ್ಕೂ ಮುಂದೆ
ಕಂಡಿತ್ತು ಆ ನಗುಮುಖ
ದೊಡ್ಡದಾದ ಕಣ್ಣುಗಳು
ಹಣೆಯಲ್ಲಿ ಬಿಂದಿ,
ಗಲ್ಲದ ಮೇಲೊಂದು
ಸಣ್ಣ ದೃಷ್ಟಿ ಬೊಟ್ಟು,
ನೋಡುತ್ತಲೇ ಕಾಫಿ
ಹೀರಿ ಮುಗಿಸಿಯಾಗಿತ್ತು
ಕಿಸೆಗೆ ಕತ್ತರಿ ಜೊತೆಗೆ
ಆಫೀಸಿಗೆ ತಡವಾಗಿತ್ತು


You may also like

ನನ್‌ಮನ © ೨೦೧೩. Powered by Blogger.