ನಮ್ ಪಂಚಾಯ್ತಿ ಕಟ್ಟೆ

ಓದನು ಮುಗಿಸಿ ಹೊರಬಿದ್ರೆ ಸಾಕು
ನಮ್ಮ ಮಾತು ಶುರುವಾಗುತ್ತೆ
ಕಟ್ಟೆ ಮೇಲೆ ಕೂತ್ಕೊಂಡಿದ್ರೆ ಇತ್ತ
ನೋಡಿದ್ ಊರೇ ಸುಸ್ತಾಗುತ್ತೆ..

ನಮ್ದೆ ಒಂದು ಪಂಚಾಯ್ತಿ ಕಟ್ಟೆ
ನಾವೇ ಇಲ್ಲಿ ಎಲ್ಲಾ..
ದೇಶದ್ ಸುದ್ದಿ ಮಾತಾಡ್ತೀವಿ
ಕಾಲೆಳೆಯೋದ್ರಲ್ಲಿ ಕಮ್ಮಿ ಇಲ್ಲ

ಕೈಲಿರ್ತಿತ್ತು ಕಡಲೇಕಾಯಿ ಮೊದ್ಲು
ಈಗ ಲೇಸು, ಕುರುಕುರೆಯಣ್ಣ
ಹಂಚ್ಕೊಂಡು ತಿಂದು, ನೀರು ಕುಡಿದ್ಮೇಲೆ
ನಾಲ್ಕು ನಗೆಹನಿಗಳ ಜಾತ್ರೆಯಣ್ಣ

ನಾಳಿನ ಸ್ವತಂತ್ರದಿನವೇ ಇಂದು
ಚರ್ಚೆಯ ವಿಷಯ ನಮ್ಗೆ
ಚಿಂತಿಸಿ ಚರ್ಚಿಸಿ, ಒಟ್ಟಿಗೆ ನಾವು
ದೇಶವ ಕಟ್ಟಿ ನೋಡುವೆವಣ್ಣ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ