ಪೂರ್ಣಚಂದ್ರ

/
0 Comments
Full_Moon
Uploaded by omshivaprakash
ಇಂದು ಬಾನಾಗಿತ್ತು ಪೂರ್ಣಚಂದ್ರನರಮನೆ...
ಅಲ್ಲಲ್ಲಿ ಮಿನುಗುವ ನಕ್ಷತ್ರಗಳ,
ಹೊಳೆಯುವ ಗ್ರಹಗಳ ,
ಮೋಡದ ಹಾರಗಳ ಅಲಂಕಾರ...

ಅಮ್ಮ ತನ್ನ ಕಂದನಿಗೆ ಮಮ್ಮು ತಿನ್ನಿಸುವಾಗ
ನೀರಿನಲ್ಲಿ ಪ್ರತಿಪಲಿಸಿ ನಗಿಸುವ ಚಂದ್ರ
ನಮ್ಮನ್ನು ತನ್ನೆಡೆಗೆ ಶತಮಾನಗಳಿಂದ
ಸೆಳೆಯುತ್ತಲೇ ಇದ್ದಾನೆ.

ಅವನ ಮೈಮೇಲೆ ಮಾನವ ಕಾಲಿಟ್ಟು
ವರುಷಗಳೇ ಕಳೆದಿದ್ದರೂ, ಅವನೆಡೆಗೆ
ಎಲ್ಲರೂ ಹೊರಟು ನಿಲ್ಲಲು ಸಾಧ್ಯವೇ?
ಅದಕ್ಕೆ ನಾ ಅವನನ್ನು ಇಂದು ಸೆರೆಹಿಡಿದುಬಿಟ್ಟೆ...


You may also like

ನನ್‌ಮನ © ೨೦೧೩. Powered by Blogger.