೧೮-ಡಿಸೆಂಬರ್-೨೦೧೦ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಚಿತ್ರಕೃಪೆ: ಪ್ರಜಾವಾಣಿ ಕಳೆದ ಸಹಸ್ರಮಾನದ ಕೊನೆಯ ವರ್ಷದಲ್ಲಿ ಡಾರ್ಸಿ ಡಿ ನುಚ್ಚಿ ಎಂಬ ವಿದ್ಯುನ್ಮಾನ ಮಾಹಿತಿ ವಿನ್ಯಾಸ ತಂತ್ರಜ್ಞೆ, ಲೇಖಕಿ ‘ಫ್ರ್ಯಾಗ್ಮೆಂಟೆಡ್ ಫ್ಯೂಚರ್’ ಎಂಬ ಲೇಖನದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಇಂಟರ್ನೆಟ್ನ ಎರಡನೇ ಆವೃತ್ತಿ ಎಂಬರ್ಥದಲ್ಲಿ ವೆಬ್ 2.0 ಎಂಬ ಪದವನ್ನು ಬಳಸಿದರು. ಅಲ್ಲಿಯ ತನಕ ಸ್ಥಿರವಾಗಿದ್ದ ವೆಬ್ ಪುಟಗಳು ಸಂವಹನಾತ್ಮಕವಾಗಿ ಬದಲಾಗುತ್ತಿದ್ದ ವಿದ್ಯಮಾನವನ್ನು ಅವರು ವಿವರಿಸಿದ್ದರು. ಅಲ್ಲಿಂದ ಮುಂದಿನದ್ದು ಇತಿಹಾಸ. ಎಲ್ಲೋ ಒಂದು ಕಡೆ ಕುಳಿತು ಊಡಿಸಿದ ಮಾಹಿತಿಗಳನ್ನು ಜಾಲಿಗರು ಓದುವ ಸ್ಥಿತಿ ಬದಲಾಯಿತು. ಓದುತ್ತಲೇ ಅದಕ್ಕೆ ಪ್ರತಿಕ್ರಿಯಿಸುವ ಅವಕಾಶ ದೊರೆಯಿತು. ಮಾಹಿತಿಯ ಬಳಕೆದಾರರೇ ಮಾಹಿತಿಯನ್ನೂ ಸೃಷ್ಟಿಸುವ ಅವಕಾಶವನ್ನು ಜಾಲತಾಣಗಳು ಬಳಸಿಕೊಳ್ಳಲು ಆರಂಭಿಸಿದ ನಂತರ ಒಂದು ಮೌನ ಕ್ರಾಂತಿ ನಡೆಯಿತು. ಅಲ್ಲಿಯ ತನಕ ಜಾಲ ತಾಣಗಳನ್ನು ನೋಡುವ ಅವಕಾಶ ಕಲ್ಪಿಸಿದ್ದ ಬ್ರೌಸರ್ ಮಾಹಿತಿಯನ್ನು ಸೃಷ್ಟಿಸುವ ಉಪಕರಣವಾಗಿಯೂ ಬಳಕೆಯಾಯಿತು. ವೆಬ್ 2.0 ತಂತ್ರಜ್ಞಾನದ ಫಲವಾಗಿ ಉದ್ಭವಿಸಿದ ಸಾಮಾಜಿಕ ಜಾಲ ತಾಣಗಳು ಕೇವಲ ಗೆಳೆಯರ ಮಧ್ಯೆ ಸಂಪರ್ಕ ಕಲ್ಪಿಸುವ ಸಾಧನಗಳಾಗಿಯಷ್ಟೇ ಉಳಿಯಲಿಲ್ಲ. ಅವು ನಿರ್ದಿಷ್ಟ ವಿಚಾರಗಳ ಬಗ್ಗೆ ಚರ್ಚೆ ನಡೆಸುವ, ಅಭಿಪ್ರಾಯ ರೂಪಿಸುವ ತಾಣಗಳಾಗಿಯೂ ಬದಲಾದವು. ಈ ಅಭಿಪ್ರಾಯ ರೂಪಿಸುವ ಕ್ರಿಯೆ ಈಗ ಕೇವಲ ಜಾಲ ಜ