ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ. ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು --- -- ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ ಎಂಬ ಉತ್ತರ ನಮ್ಮದು. ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತ
tumba ishta aytu nimma maatu
ಪ್ರತ್ಯುತ್ತರಅಳಿಸಿnanna blogigomme banni
hi,
ಪ್ರತ್ಯುತ್ತರಅಳಿಸಿchennaagide photo..
chuTuku kooDa...
ಧನ್ಯವಾದಗಳು :)
ಪ್ರತ್ಯುತ್ತರಅಳಿಸಿಬಹಳ ಚೆನ್ನಾಗಿದೆ ಶಿವು.. ತುಂಬಾ ಇಷ್ಟ ಆಯ್ತು
ಪ್ರತ್ಯುತ್ತರಅಳಿಸಿ@suhas ಧನ್ಯವಾದಗಳು :)
ಪ್ರತ್ಯುತ್ತರಅಳಿಸಿ