ಯುವ ಕನ್ನಡ ಬರಹಗಾರರೇ ಇದನ್ನು ಓದಿ

/
0 Comments
ಅವಧಿಯಲ್ಲಿ :-

ನಾಗೇಶ್ ಹೆಗಡೆ ಪ್ರಶ್ನೆ: ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು?
--
ನನ್‌ಮನದ ಅನಿಸಿಕೆ:-
ಬರವಣಿಗೆ ಮತ್ತು ಭಾಷೆಯ ಮೇಲಿನ ಪ್ರೀತಿ ಇದ್ದು, ತನ್ನ ಜನರ ಹಾಗೂ ತನ್ನ ನೆಲದ ಗೆಲುವನ್ನು ಮೊದಲು ತನ್ನ ಭಾಷೆಯಲ್ಲಿ ಪ್ರಕಟಿಸುವ ಬರಹಗಾರರು ಯಾವುದನ್ನು ರೂಢಿಸಿಕೊಳ್ಳಬೇಕು ಹಾಗೂ ಏಕೆ ಬರೆಯಬೇಕು, ಹೇಗೆ ಬರೆಯಬೇಕು ಎಂಬುದನ್ನು ನಾಗೇಶ್ ಹೆಗಡೆಯವರಿಗಿಂತ ಬೇರೆಯವರಿಗೆ ಹೇಳಲಿಕ್ಕೆ ಬರುವುದು ಕಷ್ಟ. ವಿಜ್ಞಾನ ಹಾಗೂ ತಂತ್ರಜ್ಞಾನದ ವಿಷಯಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಿಸಿಕೊಳ್ಳುವ ಮತ್ತದನ್ನು ಇತರರಿಗೆ ಅರ್ಥವಾಗುವಂತೆ ಹೇಳುವ ಬೆರಳೆಣಿಕೆಯ ಜನರು ಮುಂದೆ ಸಿಗುತ್ತಾರೋ ಎಂಬ ಸಂದಿಗ್ದ ಪರಿಸ್ಥಿತಿಯ ಅರಿವು ಈಗಲಾದರೂ ನಮ್ಮಲ್ಲಾಗುವುದೆ? ಯುವ ಬರಹಗಾರರಿಗೆ ವಿಜ್ಞಾನ ಆಸಕ್ತರಿಗೆ ಈ ಬರಹ ತಲುಪುವುದು ಅವಶ್ಯಕ ಜೊತೆಗೆ ಈ ವಿಷಯದ ಸುತ್ತ ಚರ್ಚೆ, ಕಾರ್ಯಾಗಾರಗಳು ಹಾಗೂ ಕೆಲವು ಬರಹಗಾರರನ್ನು ತಮ್ಮಲ್ಲೇ ಸೃಷ್ಟಿಸಿಕೊಳ್ಳುವಂತಹ ಸ್ವಯಂಕಾರ್ಯಪ್ರವೃತ್ತವಾಗಬಲ್ಲ ಶಕ್ತಿಗಳು ಪ್ರಾರಂಭವಾಗಬೇಕಾದ್ದು ಕೂಡ ಅಷ್ಟೇ ಅವಶ್ಯ. ಮತ್ತೆ ಈ ಕೆಲಸ ಯಾವುದೋ ಸಂಘ, ಸಂಸ್ಥೆ ಅಥವಾ ಸರ್ಕಾರದ ಕಾಗದದಲ್ಲಿಯೋ ಅಥವಾ ಪತ್ರಿಕೆಗಳ ಕಾಲಂಗಳಲ್ಲಿ ಬಂದಿಯಾಗುವುದರಿಂದ ನಮಗೆ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿವುದು ನಿಶ್ಚಿತ.


You may also like

ನನ್‌ಮನ © ೨೦೧೩. Powered by Blogger.