ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ
FUEL Initiative for Kannada , a set on Flickr. Press Release ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ ಕನ್ನಡ ಅನುವಾದದಲ್ಲಿನ ಗೊಂದಲ ಹಾಗು ಏಕರೂಪತೆಯ ಕೊರತೆಯನ್ನು ನೀಗಿಸುವ ಉದ್ಧೇಶದಿಂದ ಸಂಚಯ (sanchaya.net) ತಂಡವು ಈ FUEL ಕನ್ನಡ ಕಾರ್ಯಗಾರವನ್ನು ರೆಡ್ ಹ್ಯಾಟ್ನ ನೆರವಿನಿಂದ ಹಮ್ಮಿಕೊಂಡಿತ್ತು. ಭಾಷಾಶಾಸ್ತ್ರಜ್ಞರು, ಅನುವಾದಕರು ಹಾಗು ಬಳಕೆದಾರರು ಮುಂತಾಗಿ ಸುಮಾರು ೧೫ ಜನರು ಪಾಲ್ಗೊಂಡ ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು ೫೭೮ ಪದ/ಪದಗುಚ್ಛಗಳ ಪ್ರಸ್ತುತ ಅನುವಾದವನ್ನು ಅವಲೋಕಿಸಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಒಂದು ಶಿಷ್ಟ ಗಣಕ ಪದಕೋಶವನ್ನು ಸಿದ್ಧಗೊಳಿಸಲಾಯಿತು. ರೆಡ್ ಹ್ಯಾಟ್ನ ಶಂಕರ ಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ, ಕಂಪ್ಯೂಟರ್ ಪದಕೋಶದಲ್ಲಿ ಶಿಷ್ಟತೆಯ ಅಗತ್ಯಗಳನ್ನು ವಿವರಿಸಿದರು. ನಂತರ ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್