ವಿಷಯಕ್ಕೆ ಹೋಗಿ

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

ಎಲ್ಲರಿಗೂ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನಿಸುವುದು ಸಹಜ. ಆದರೆ ನಮ್ಮಲ್ಲನೇಕರಿಗೆ ನಾನೇನು ಮಾಡಬಲ್ಲೆ ಎಂಬ ಪ್ರಶ್ನೆ ಕಾಡಿದರೆ,  ಮತ್ತಿನ್ನಿತರರಿಗೆ ಎಲ್ಲಿಂದ ಕೆಲಸ ಶುರುಮಾಡಲಿ ಎಂಬ ಪ್ರಶ್ನೆ. ಅದನ್ನೂ ಮೀರಿದರೆ ನನಗೆ ಕಂಪ್ಯೂಟರ್ ಅಷ್ಟುಗೊತ್ತಿಲ್ಲ ನಾನು ಇದರಲ್ಲಿ ಕೆಲಸ ಮಾಡ್ಲಿಕ್ಕೆ ಸಾಧ್ಯ ಇಲ್ಲ ಎಂದು ಕೈಕಟ್ಟಿ ಕೂರುತ್ತೇವೆ.

ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ತಮ್ಮ ಹವ್ಯಾಸ, ಉದ್ಯೋಗ ಇತ್ಯಾದಿಗಳ ಸುತ್ತಲೇ ಹತ್ತಾರು ವಿಷಯಗಳ ಮೂಲಕ ಭಾಷೆ ಹಾಗೂ ತಂತ್ರಜ್ಞಾನದ ಅಭಿವೃದ್ದಿಯ ನೆರವಿಗೆ ನಿಲ್ಲಬಹುದು. ಸಾಧ್ಯಾಸಾಧ್ಯತೆಗಳ ಇಂತಹ ಹತ್ತಾರು ವಿಷಯಗಳನ್ನು, ಪ್ರಾಯೋಗಿಕವಾಗಿ ಇಂತಹ  ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ಅನುಭವಿ ತಂತ್ರಜ್ಞರು ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತ ನೀವೂ ಅವರೊಂದಿಗೆ ಹೆಜ್ಜೆಯಿಡಲು ೨೨ನೇ ಜನವ ರಿ ೨೦೧೨ ರಂದು 'ಹೆಜ್ಜೆ' ವೇದಿಕೆ ಸಿದ್ದವಾಗುತ್ತಿದೆ.

ಇದು ಬರೀ ಮಾಹಿತಿತಂತ್ರಜ್ಞಾನ ಅಥವ ಐ.ಟಿ ಮಂದಿಗಲ್ಲ... ಯಾರುಬೇಕಾದರೂ ಭಾಗವಹಿಸಬಹುದು. ವಿಶೇಷವಾಗಿ ಮಹಿಳೆಯರು ಕೂಡ ತಂತ್ರಜ್ಞಾನದ ವಿಷಯದಲ್ಲಿ ಕೆಲಸ ಹೇಗೆ ಮಾಡಬಲ್ಲರು, ಸಹಾಯ ದೊರೆಯುತ್ತದೆಯೇ, ಅವರೂ ಸಮುದಾಯ ಕಟ್ಟುವ ನಿಟ್ಟಿನಲ್ಲಿ ಹೇಗೆ ಎಲ್ಲರೊಂದಿಗೆ ಹೆಜ್ಜೆ ಇಡಬಲ್ಲರು ಎಂಬುದನ್ನೂ ತಿಳಿಯಬಹುದು.

ನಮ್ಮೆಲ್ಲರ ನೆಚ್ಚಿನ ವಿಜ್ಞಾನ ಲೇಖಕ ಶ್ರೀ ನಾಗೇಶ್ ಹೆಗಡೆ, ವಸುದೇಂದ್ರ ಮುಂತಾದವರು ನಮ್ಮ ಜೊತೆಗಿದ್ದರೆ, ಕನ್ನಡದ ಮೊದಲ ಅಂತರ್ಜಾಲ ತಾಣ "ವಿಶ್ವಕನ್ನಡ.ಕಾಮ್" ರೂಪಿಸಿ ಗಣಕಿಂಡಿ, ಗ್ಯಾಜೆಟ್ ಲೋಕ ಇತ್ಯಾದಿಗಳ ಮೂಲಕ ದಿನನಿತ್ಯ ನಮ್ಮೊಡನೆ ಸಂಪರ್ಕದಲ್ಲಿರುವ ಡಾ| ಯು.ಬಿ ಪವನಜ ಕೂಡ ಬೆಂಬಲಕ್ಕಿದ್ದಾರೆ.

ಇನ್ನೂ ಹಲವಾರು ವಿಶೇಷಗಳು ಎಲ್ಲರಿಗೂ ಕಾದಿದೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜಿಸುತ್ತಿರುವ "ಸಂಚಯ" ತಂಡ. 

ಸಂಚಯ ತಂತ್ರಜ್ಞಾನವನ್ನು ಜನಸಾಮಾನ್ಯನೆಡೆಗೆ ಸುಲಭವಾಗಿ ತರಲು ತೆರೆಯ ಹಿಂಬದಿಯಲ್ಲಿ ಇದುವರೆಗೆ ಕೆಲಸ ಮಾಡುತ್ತಿದ್ದು, 'ಅರಿವಿನ ಅಲೆಗಳು'- ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಸಂಭಂದಿತ ಕನ್ನಡದ ಮೊದಲ ಇ-ಪುಸ್ತಕವನ್ನು ೨೦೧೧ರ ಸ್ವಾತಂತ್ರೋತ್ಸವಕ್ಕೆ ಕನ್ನಡಿಗರಿಗಾಗಿ ಹೊರತಂದಿತ್ತು.

ಕನ್ನಡಕ್ಕೆ ಏನಾದರೂ ಮಾಡುತ್ತೇನೆ ಎಂದರೆ ಸಾಲದು, ಎದ್ದು ಕಾರ್ಯೋನ್ಮುಖರಾಗಿ ಎಂದು ಎಲ್ಲರಿಗೂ ಹುರಿದುಂಬಿಸುತ್ತಿರುವ ಕಾರ್ಯಕ್ರಮದಲ್ಲಿ ...
Hejje

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.
ಕೃಷ್ಣವಿವರಗಳುhttps://archive.org/details/Krishnavivaragalu00ರಾಮಾನುಜಂಬಾಳಿದರಿಲ್ಲಿhttps://archive.org/details/Ramanujan_Balidarilly001ಸುಬ್ರಹ್ಮಣ್ಯನ್ಚಂದ್ರಶೇಖರ್https://archive.org/details/Subrahmanyan_Chandrasekhar001ಕೋಪರ್ನಿಕಸ್ಕ್ರಾಂತಿhttps://archive.org/details/Copernicus_kranti001ಭವಿಷ್ಯವಾಚನ‍https://archive.org/details/Bhavishyavaachana001ಆಲ್ಬರ್ಟ್ಐನ್ಸ್‌ಸ್ಟೈನ್‌ನಮಾನವೀಯಮುಖhttps://archive.org/details/Albert_einsteinara_manaveeya_mukha001ಸೂರ್ಯನಸಾಮ್ರಾಜ್ಯ - https://archive.org/details/Suryana_saamraajya001ವಿಜ್ಞಾನಸಪ್ತರ್ಷಿಗಳು - https://archive.org/details/vijnaana_saptarshigalu001ಎನ್.ಸಿ.ಸಿ. ದಿನಗಳು - https://archive.org/details/n_c_c_dinagalu001ಬಾನಬಯಲಾಟ: ಗ್ರಹಣ - https://archive.org/details/baana_bayalaata_grahana001ಕುವೆಂಪುದರ್ಶನಸಂದರ್ಶನ - https://archive.org/details/kuvempu…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು