ವಿಷಯಕ್ಕೆ ಹೋಗಿ

ತಂತ್ರಜ್ಞಾನ: ಇಷ್ಟವಾದರೆ ಕಷ್ಟವಲ್ಲ - ೧


ಫೆಬ್ರವರಿ ೨೪, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ


ಟೆಕ್ ಕನ್ನಡದಲ್ಲಿ ಇದುವರೆಗೂ ಓದಿದ ಲೇಖನಗಳಲ್ಲಿನ ಅನೇಕ ಟೆಕ್ನಾಲಜಿ ಜಾರ್ಗನ್ (ಸಾಮಾನ್ಯನಿಗೆ ಅರ್ಥವಾಗದ ತಂತ್ರಜ್ಞಾನ ಪದಗಳ) ಬಳಕೆ ನೋಡಿ ಹೆದರಿದಿರೇ? ಹಾಗಿದ್ದಲ್ಲಿ ಕ್ಷಮಿಸಿ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ನಿಮ್ಮ ಅಂಗೈ ಬೆರಳುಗಳ ಅಳತೆಗೆ ತಕ್ಕಂತೆ ತಿರುವಲು ಪ್ರಯತ್ನಿಸುತ್ತೇನೆ. ತಂತ್ರಜ್ಞಾನವೆಂದರೆ ಆಂಗ್ಲ / ಇಂಗ್ಲೀಷ್ ಭಾಷೆ ಗೊತ್ತಿದ್ದರೆ ಮಾತ್ರವೇ ಅದರ ಬಳಕೆ ಸಾಧ್ಯ ಎನ್ನುವುದು ನಿಜವಲ್ಲ. ತಂತ್ರಜ್ಞಾನಕ್ಕೆ ಯಾವುದೇ ಭಾಷೆಯ ತೊಡಕು ಇಲ್ಲ. ಒಂದು ಉದಾಹರಣೆ ನೋಡೋಣ. ಮೊನ್ನೆ ಪಾಂಡಿಚೆರಿಗೆ ಹೋಗಿದ್ದಾಗ ದೋಣಿ ವಿಹಾರದ ಸಮಯದಲ್ಲಿ ತೆಗೆದ ಚಿತ್ರವಿದು. ಅಪ್ಪ , ಅಮ್ಮ, ಅಜ್ಜ , ಅಜ್ಜಿ ಎಲ್ಲರೂ ಇದ್ದರು ಈ ಹುಡುಗಿಯ ಕೈನಲ್ಲಿದ್ದ ಮೊಬೈಲ್ ಸಂತಸದ ಗಣಿಯಾಗಿತ್ತು. 

ಇದರಿಂದ ನಾವು ಕಲಿಯುವುದೇನೆಂದರೆ ತಂತ್ರಜ್ಞಾನವನ್ನು ಕಲಿಯುವ ಆಸ್ತೆ, ಕುತೂಹಲದಿಂದ ಮೊದಲಾಗಿ, ಹೊಸ ವಿಷಯಗಳನ್ನು ಕಲಿಯಲು ಮುಕ್ತ ಮನಸ್ಸು ಹೊಂದಿದ್ದರೆ ಯಾರು ಬೇಕಾದರೂ ಏನನ್ನಾದರೂ ಕಲಿಯಲು ಸಾಧ್ಯ. ಅದಕ್ಕೆ ಬೇಕಿರುವ ಸಹಾಯ ತಂತಾನೇ ನಿಮ್ಮ ಮುಂದೆ ಬರಲು ಪ್ರಾರಂಭಿಸುತ್ತದೆ. 

ಮೊದಲನೆಯದಾಗಿ ತಂತ್ರಜ್ಞಾನ ಎಂದರೆ ನಮ್ಮ ಮನಸ್ಸಿಗೆ ಬರುವುದು ಕಂಪ್ಯೂಟರ್ ಇತ್ಯಾದಿ. ಹಾಗಿದ್ದಲ್ಲಿ ಇಂದು ಯಾರಿಗೆ ಕಂಪ್ಯೂಟರ್ ಬರುತ್ತದೆ ಎಂದರೆ ನಿಮ್ಮಲ್ಲಿ ಅನೇಕರು ಒಬ್ಬರ ಮುಖ ಒಬ್ಬರು ನೋಡಬಹುದು. ಮತ್ತೊಂದು ಸಣ್ಣ ಪ್ರಶ್ನೆ. ನಿಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಇದೆ? ಅಥವಾ ಎಷ್ಟು ಜನರ ಮನೆಯಲ್ಲಿ ರಿಮೋಟ್ ಇರುವ ಟಿ.ವಿ ಇದೆ? ಬಹಳಷ್ಟು ಜನರ ಉತ್ತರ 'ನನ್ನಲ್ಲಿ' ಎಂಬುದೇ ಆಗಿರುತ್ತದೆ ಅಲ್ಲವೇ? ಹಾಗಿದ್ದಲ್ಲಿ ನಿಮ್ಮೆಲ್ಲರಿಗೂ ಕಂಪ್ಯೂಟರ್ ನೊಂದಿಗೆ ಕೂಡ ಮಾತನಾಡಲು/ ವ್ಯವಹರಿಸಲು ಬರುತ್ತದೆ ಎಂದಾಯಿತು. ಇನ್ನು ಇವೆರಡೂ ಇಲ್ಲದವರು ನಿಮ್ಮ ಕೈಗಡಿಯಾರವನ್ನು ನೋಡಿಕೊಳ್ಳಿ. ಅನೇಕರು ಇಂದಿಗೂ ಎಲೆಕ್ಟ್ರಾನಿಕ್ ಗಡಿಯಾರ ಅಂದರೆ ಮುಳ್ಳಿನ ಬದಲು ಪರದೆಯ ಮೇಲೆ ಕಪ್ಪು ಅಕ್ಷರದಲ್ಲಿ ಅಂಕಿಗಳನ್ನು ಬಳಸಿ ಸಮಯವನ್ನು ತೋರಿಸುವ ಗಡಿಯಾರ / ವಾಚ್ ಬಳಸುತ್ತೀರಲ್ಲವೇ? ನೀವೂ ಕೂಡ ಮೇಲಿನ ಪಟ್ಟಿಗೇ ಅಂದರೆ ಕಂಪ್ಯೂಟರ್ ಅಕ್ಷರಸ್ತರು ಅಥವಾ ತಂತ್ರಜ್ಞಾನ ಬಳಸುವವರ ಪಟ್ಟಿಗೆ ಸೇರುತ್ತೀರಿ. 

ಈಗ ಸ್ವಲ್ಪ ಯೋಚಿಸೋಣ. ನೀವು ಟಿ.ವಿ, ಮೊಬೈಲ್ , ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲು ಪ್ರಾರಂಭಿಸಿದ್ದು ಹೇಗೆ? ನಿಮಗಿದ್ದ ಯಾವುದೋ ಒಂದು ಅವಶ್ಯಕತೆಯ ಸಲುವಾಗಿ, ಕೆಲಸಗಳನ್ನು ಬೇಗ ಬೇಗ ಮಾಡಿಕೊಳ್ಳುವಂತಾಗಲು ನಾವೆಲ್ಲ ಯಂತ್ರಗಳ ಬಳಕೆಗೆ ಮುನ್ನುಡಿ ಬರೆದೆವು. ಒಮ್ಮೆ ಮಾರುಕಟ್ಟೆಯ ಚೆಂದದ ಅಂಗಡಿಗಳಲ್ಲಿ ನೋಡಿದ ಯಂತ್ರೋಪಕರಣಗಳು ಮನೆಗೆ ಬರುತ್ತಿದ್ದಂತೆಯೇ, ಅದು ಕಾರ್ಯನಿರ್ವಹಿಸಲು ಏನು ಮಾಡಬೇಕು, ಹೇಗೆ ಅದನ್ನು ಕೆಲಸಕ್ಕೆ ಹಚ್ಚುವುದು ಎಂಬ ಬಗ್ಗೆ ಸ್ವಲ್ಪ ತಲೆ ಕೆಡಿಸಿಕೊಳ್ಳುತ್ತೀವಲ್ಲವೇ? ಅದೂ ಕಷ್ಟವಾದಾಗ ಪಕ್ಕದ ಮನೆಯವರನ್ನೋ, ನಿಮ್ಮ ಗುಂಪಿನ ಬುದ್ದಿವಂತ ಎನಿಸಿಕೊಂಡ ಗೆಳೆಯನಿಗೋ ಕರೆ ಹಚ್ಚುತ್ತೀರಲ್ಲವೇ? ಅಂತೂ ಅದೇ ದಿನ ನಿಮ್ಮ ಮನೆಗೆ ಬಂದ ಹೊಸ ಯಂತ್ರ ಪೂಜೆಯ ಜೊತೆಗೆ ಕಾರ್ಯನಿರ್ವಹಿಸಲೇಬೇಕು. ಮರುದಿನದಿಂದ ಅವುಗಳ ಸಂಪೂರ್ಣ ಬಳಕೆಗೆ ಮನೆಯ ಎಲ್ಲರೂ ತಯಾರು. ಕಲಿಕೆ ಸುಲಭ ಅಲ್ಲವೇ?


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.




ಕೃಷ್ಣವಿವರಗಳುhttps://archive.org/details/Krishnavivaragalu00ರಾಮಾನುಜಂಬಾಳಿದರಿಲ್ಲಿhttps://archive.org/details/Ramanujan_Balidarilly001ಸುಬ್ರಹ್ಮಣ್ಯನ್ಚಂದ್ರಶೇಖರ್https://archive.org/details/Subrahmanyan_Chandrasekhar001ಕೋಪರ್ನಿಕಸ್ಕ್ರಾಂತಿhttps://archive.org/details/Copernicus_kranti001ಭವಿಷ್ಯವಾಚನ‍https://archive.org/details/Bhavishyavaachana001ಆಲ್ಬರ್ಟ್ಐನ್ಸ್‌ಸ್ಟೈನ್‌ನಮಾನವೀಯಮುಖhttps://archive.org/details/Albert_einsteinara_manaveeya_mukha001ಸೂರ್ಯನಸಾಮ್ರಾಜ್ಯ - https://archive.org/details/Suryana_saamraajya001ವಿಜ್ಞಾನಸಪ್ತರ್ಷಿಗಳು - https://archive.org/details/vijnaana_saptarshigalu001ಎನ್.ಸಿ.ಸಿ. ದಿನಗಳು - https://archive.org/details/n_c_c_dinagalu001ಬಾನಬಯಲಾಟ: ಗ್ರಹಣ - https://archive.org/details/baana_bayalaata_grahana001ಕುವೆಂಪುದರ್ಶನಸಂದರ್ಶನ - https://archive.org/details/kuvempu…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು