ವಿಷಯಕ್ಕೆ ಹೋಗಿ

ಜಗತ್ತನೇ ಕಿರಿದಾಗಿಸಿದ WWW ಇತಿಹಾಸ - ೧ - ಟೆಕ್ ಕನ್ನಡ


ಫೆಬ್ರವರಿ ೨೧, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ

ಮಾರ್ಚ್ ೧೯೮೯ ರ ಮಾರ್ಚ್ ೧೩ ರಂದು  ಟಿಮ್ ಬರ್ನರ್ಸ್-ಲೀ ಪ್ರತಿಪಾದಿಸಿದ ಹೊಸದೊಂದು ತಂತ್ರಜ್ಞಾನದ ಆವಿಷ್ಕಾರ ಇಡೀ ಜಗತ್ತಿನ ದಿಕ್ಕನ್ನೇ ಬದಲಿಸಿತು.  ಮಾಹಿತಿಯನ್ನು ಇತರರೊಡನೆ ವಿದ್ಯುನ್ಮಾನ ವಿಧಾನದಲ್ಲಿ ಹಂಚಿಕೊಳ್ಳಲು ಮುನ್ನುಡಿ ಬರೆದ ಈ ಆವಿಷ್ಕಾರ ಮಾಹಿತಿ ತಂತ್ರಜ್ಞಾನ ಯುಗದ ಆರಂಭಕ್ಕೂ ನಾಂದಿ ಹಾಡಿತುಯುರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ (CERN) ತಂತ್ರಜ್ಞಾನ ಕ್ರಾಂತಿಯನ್ನು ಚಿಗುರಿಸಿದ  ವರ್ಡ್ ವೈಡ್ ವೆಬ್ ನ ಹುಟ್ಟುಹಬ್ಬವನ್ನು ಮಾರ್ಚ್ ೧೩ ರಂದು ಆಚರಿಸಿತುಇಂಟರ್ನೆಟ್ ಇಲ್ಲದಿದ್ದರೆ ಇಂದೂ ಕೂಡ ನಾವು ಪರಲೋಕದಲ್ಲಿ ಪರದೇಶಿಯಾಗೇ ಇರಬೇಕಾಗ್ತಿತ್ತೋ ಏನೋಇವತ್ತು ಕನ್ನಡಿಗ ಕುಂವೆಪುರವರ ವಿಶ್ವಮಾನವ ಸಂದೇಶ ಓದಿಕೊಂಡು ಕುಂತಲ್ಲೇ ಕನ್ನಡದ ಬೆಳವಣಿಗೆಗೆಮನುಜಮತದ ಒಳಿತಿಗೆ ಕೆಲಸ ಮಾಡಲು ಅಗುತ್ತಿರಲಿಲ್ಲಇಷ್ಟೆಲ್ಲಾ ಸಾಧ್ಯವಾಗಿಸಿದ ಇಂಟರ್ನೆಟ್ ನ ಬಗ್ಗೆ ತಿಳಿಸಿಕೊಡಲು ಈ ಲೇಖನ.

ಇಂಟರ್ನೆಟ್ ಮತ್ತೆ ವರ್ಡ್ ವೈಡ್ ವೆಬ್ ಈ ಎರಡು ಪದಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.  ಇಂಟರ್ನೆಟ್ ಬಳಕೆ ಶುರುವಾಗಿದ್ದು ೧೯೫೦ ರಲ್ಲಿಇದು ಒಂದೊಕ್ಕೊಂದು ಬೆಸೆದುಕೊಂಡಿರುವ ನೆಟ್ವರ್ಕ್ ಗಳ ಒಂದು ಜಾಲ ಅಂತ ಹೇಳಬಹುದುಈ ಒಂದು ಜಾಲದಲ್ಲಿ ಡಾಟ (Data) ಪ್ಯಾಕೆಟ್ ಗಳು ಸಂಚರಿಸುತ್ತವೆಈ ನೆಟ್ವರ್ಕ್ ಸಂವಾದಕ್ಕೆ ಸಿಸ್ಟಂಗಳಲ್ಲಿ  ಇಂದು ನಾವು TCP/IP Protocol (ನೀತಿ ನಿಯಮಗಳನ್ನು ಬಳಸುತ್ತೇವೆ.

ವರ್ಡ್ ವೈಡ್ ವೆಬ್ ಅನ್ನೋದು ಇದಕ್ಕಿಂತ ಸ್ವಲ್ಪ ಭಿನ್ನ.  ಮಾಹಿತಿಗಳನ್ನು ಒಳಗೊಂಡ ಅಸಂಖ್ಯಾಂತ ಸರ್ವರ್ ಗಳ ನೆಟ್ವರ್ಕ್ ಆದ ವೆಬ್ತನ್ನಲ್ಲಿರುವ ಮಾಹಿತಿಯನ್ನು ಇಂಟರ್ನೆಟ್ ನ ಮೂಲಕ ಇತರೆ ತಂತ್ರಾಂಶಗಳು ಅಂದರೆ ಬ್ರೌಸರ್ ಇತ್ಯಾದಿ ಓದಲಿಕ್ಕಾಗುವಂತಹ ಒಂದು ವಿಶೇಷ ವಿನ್ಯಾಸದ ಕಡತವಾಗಿ(File) ಎಲ್ಲರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

CERN ನಲ್ಲಿ ಕೆಲಸ ಮಾಡುತ್ತಿದ್ದ ಜನರ ಮಾಹಿತಿಯನ್ನು ಅಲ್ಲಿನ ಎಲ್ಲರಿಗೂ ದೊರೆಯುವಂತೆ ಮಾಡಲು ಸಿದ್ಧಪಡಿಸಿದ ವೆಬ್ಇದು ಈಗ ಎಲ್ಲರ ಲೆಕ್ಕಾಚಾರಗಳನ್ನು ಮೀರಿ ಜಗತ್ತಿನ ಕಾಲುಭಾಗ ಜನರಿಗೆ ಅವರ ಬುದ್ದಿಮತ್ತೆಗೆ ನಿಲುಕುವಂತಹ ಎಲ್ಲ ಕೆಲಸಗಳನ್ನು ತನ್ಮೂಲಕ ಮಾಡಬಹುದು ಅನ್ನೋದನ್ನ ತೋರಿಸುತ್ತಲೇ ಬಂದಿದೆ-ಮೈಲ್ ಕಳಿಸುವುದುಚಾಟ್ ಮಾಡುವುದುತಮ್ಮಲ್ಲಿರುವ ಮಾಹಿತಿಯನ್ನು ಇತರರೊಂದಿಗೆ ಅವರದೇ ಭಾಷೆಯಲ್ಲಿ ತಿಳಿಸುವುದಿರಬಹುದುಕಲಿಕೆಮನೋರಂಜನೆಫೈಲುಗಳನ್ನು ಹಂಚಿಕೊಳ್ಳುವುದುತಂತ್ರಾಂಶಗಳ ಹಂಚಿಕೆ ಇತ್ಯಾದಿಗಳ ಜೊತೆ ನಲ್ಲ ನಲ್ಲೆಯರ ಡೇಟಿಂಗ್ ಕೂಡ.  ಇದಕ್ಕೆ ನೀವು ನಿಮ್ಮದೇ ಆದ ಅಂಶಗಳನ್ನೂ ಸೇರಿಸಿಕೊಳ್ಳ ಬಹುದು.  ಇದಿಷ್ಟೇ ಅಲ್ಲ ಈ ಪಟ್ಟಿ ಬೆಳೆಯುತ್ತಲೇ ಇದೆ.

ಇಷ್ಟೆಲ್ಲಾ ಮಾಡಿರುವ ವೆಬ್ ತನ್ನ ೨೦ ವರ್ಷಗಳಲ್ಲಿ  ಜಗತ್ತಿನ ಜ್ಞಾನ ಭಂಡಾರವನ್ನೇ ತನ್ನಲ್ಲಿ ಅಡಗಿಸಿಕೊಂಡಿದೆಜಗತ್ತಿನ ಅನೇಕರ ದೈನಂದಿಕ ಕಾರ್ಯಚಟುವಟಿಕೆಗಳ ಕಚೇರಿ ಕೂಡ ಇದಾಗಿದೆಇದು ಒಂದಿನಿತು ಮುನಿಸಿಕೊಂಡರೆ ಇಂದಿನ ಮಾನವ ಜನಾಂಗಕ್ಕೆ ಆಗಬಹುದಾದ ನಷ್ಟ ಮಿಲಿಯಾಂತರ ಡಾಲರ್ ಗಳಷ್ಟು.

CERN ಶುಕ್ರವಾರ ಹದಿಮೂರರಂದುತನ್ನ ಕೆಲಸಗಾರನಾದ ಬ್ರಿಟನ್ ನ ಟಿಂ ಬರ್ನಸ್ ಲೀ (Tim Berners-Lee) ೧೯೮೩ ರ ಇದೇ ದಿನ ಮಂಡಿಸಿದ್ದ  Universal linked information system ಮುಂದೆ೨೦ ವರ್ಷಗಳ ಸುದೀರ್ಘ ಅವಧಿಯಲ್ಲಿ ವರ್ಡ್ ವೈಡ್ ವೆಬ್ ದೈತ್ಯವಾಗಿ ನಮ್ಮ ಮುಂದಿರುವುದನ್ನು ನೆನಪಿಸಿ ಕೊಟ್ಟಿದೆತನ್ನಲ್ಲಿನ ಮಾಹಿತಿಯ ನಿರ್ವಹಣೆಯನ್ನು ಉತ್ತಮ ಪಡಿಸಲಿಕ್ಕೆ  CERN   ಸಿದ್ಧಪಡಿಸಿಕೊಂಡ ವೆಬ್ ಅನ್ನೋ ಸಿಸ್ಟಂ ಮತ್ತು ತಂತ್ರಾಂಶ ಅಲ್ಲಿ ಇಂದಿಗೂ ಕೆಲಸಗಿಟ್ಟಿಸಿಕೊಳ್ತಿರೋ ಸಾವಿರಾರು ಜನರ ಸಂಪರ್ಕಕ್ಕೆಮಾಹಿತಿ ತಂತ್ರಜ್ಞಾನದ ಪರಸ್ಪರ ಹಂಚಿಕೆ ಇತ್ಯಾದಿಗಳಿಗೆ ಬೆನ್ನ್ನೆಲುಬು.

ಬರ್ನಸ್ ಲೀ ಪ್ರತಿಪಾದಿಸಿದ ಅನೇಕ ವಿಷಯಗಳಲ್ಲಿ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂ ಇತರೆ ಆಪರೇಟಿಂಗ್ ಸಿಸ್ಟಂಗಳೊಡನೆ ದೂರದ (ರಿಮೋಟ್)ಪ್ರದೇಶದಿಂದಲೇ ಸಂದೇಶ ವಿನಿಮಯ ಮಾಡಿಕೊಳ್ಳುವಂತಾಗಬೇಕು ಅನ್ನುವ ಅಂಶವು ಸೇರಿತ್ತು.
ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.
ಕೃಷ್ಣವಿವರಗಳುhttps://archive.org/details/Krishnavivaragalu00ರಾಮಾನುಜಂಬಾಳಿದರಿಲ್ಲಿhttps://archive.org/details/Ramanujan_Balidarilly001ಸುಬ್ರಹ್ಮಣ್ಯನ್ಚಂದ್ರಶೇಖರ್https://archive.org/details/Subrahmanyan_Chandrasekhar001ಕೋಪರ್ನಿಕಸ್ಕ್ರಾಂತಿhttps://archive.org/details/Copernicus_kranti001ಭವಿಷ್ಯವಾಚನ‍https://archive.org/details/Bhavishyavaachana001ಆಲ್ಬರ್ಟ್ಐನ್ಸ್‌ಸ್ಟೈನ್‌ನಮಾನವೀಯಮುಖhttps://archive.org/details/Albert_einsteinara_manaveeya_mukha001ಸೂರ್ಯನಸಾಮ್ರಾಜ್ಯ - https://archive.org/details/Suryana_saamraajya001ವಿಜ್ಞಾನಸಪ್ತರ್ಷಿಗಳು - https://archive.org/details/vijnaana_saptarshigalu001ಎನ್.ಸಿ.ಸಿ. ದಿನಗಳು - https://archive.org/details/n_c_c_dinagalu001ಬಾನಬಯಲಾಟ: ಗ್ರಹಣ - https://archive.org/details/baana_bayalaata_grahana001ಕುವೆಂಪುದರ್ಶನಸಂದರ್ಶನ - https://archive.org/details/kuvempu…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು