ವಿಷಯಕ್ಕೆ ಹೋಗಿ

ಜಗತ್ತನೇ ಕಿರಿದಾಗಿಸಿದ WWW ಇತಿಹಾಸ - ೨ - ಟೆಕ್ ಕನ್ನಡ


ಫೆಬ್ರವರಿ ೨೨, ೨೦೧೨ - ಸಂಯುಕ್ತ ಕರ್ನಾಟಕ ಅಂಕಣ


ಆಗಿನ ಕಾಲದಲ್ಲಿ VM/CMS, Macintosh, VAX/VMS ಮತ್ತು Unix  ಇವೇ ಮೊದಲಾದ ಆಪರೇಟಿಂಗ್ ಸಿಸ್ಟಂಗಳಿದ್ದು ಮೈಕ್ರೋಸಾಫ್ಟ್  ವಿಂಡೋಸ್, ಡಾಸ್ ಇತ್ಯಾದಿಗಳ ಸುಳಿವೇ ಇರಲಿಲ್ಲ. ಯಾಕಂದ್ರೆ ಅವುಗಳ ಆವಿಷ್ಕಾರಇನ್ನೂ ಆಗೇ ಇರಲಿಲ್ಲ. ಆದ್ರೆ ಅವುಗಳ ಬರುವಿಕೆ ವೆಬ್  ಬಳಕೆದಾರರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾದದ್ದಂತೂ ಸತ್ಯ.

ತನ್ನಲ್ಲಿರುವ ಮಾಹಿತಿಗಳ ಸಂಗ್ರಹವನ್ನು ಹುಡುಕಲಿಕ್ಕೆ ಬೇಕಿರುವ ಸಲಕರಣೆಗಳನ್ನು ಕೊಡುವುದರ ಜೊತೆಗೆ, ಬರ್ನರ್ಸ್ ಲೀ ಇಂತಹದೊಂದು ನೆಟ್ವರ್ಕ್ ಗೆ ಸೇರುವ ಸಿಸ್ಟಂಗಳು ಯಾವುದೇ ಮಧ್ಯಂತರ ನಿಯಂತ್ರಣ ಅಥವಾ ನಿರ್ವಹಣವ್ಯವಸ್ಥೆಯಿಂದ ದೂರವಾಗಿರಬೇಕು ಎಂದ. ಅದರ ಜೊತೆಗೆ, ವ್ಯಕ್ತಿಗಳು ಸಿಸ್ಟಂಗಳನ್ನು ನೆಟ್ವರ್ಕೆಗೆ ಸೇರಿಸಲು ತಮ್ಮದೇ ಖಾಸಗಿ ಕೊಂಡಿಗಳನ್ನು ಬಳಸುವಂತಾಗಬೇಕು, ಈಗಾಗಲೇ ಇರುವ ಮಾಹಿತಿಯನ್ನ ಅದರ ಲೇಖಕ, ಮಾಹಿತಿ ಸಂಗ್ರಾಹಕ,ಮೂಲ ಇತ್ಯಾದಿಗಳನ್ನ ಟಿಪ್ಪಣಿ ಮಾಡುವುದರ ಮೂಲಕ ಮಾಹಿತಿಯ ದ್ವಿಪ್ರತಿಗಳು ನೆಟ್ವರ್ಕ್ ನಲ್ಲಿ ಉಳಿದುಹೋಗುವುದನ್ನೂ ತಪ್ಪಿಸಿದ.  

ಇದೆಲ್ಲಾ ಕ್ಲಿಷ್ಟ ಮಾಹಿತಿಗಳನ್ನು ಮನುಷ್ಯನ ಮುಂದಿಡುವಾಗ ಅವು ಸಾಮಾನ್ಯನು ಅರ್ಥಮಾಡಿಕೊಳ್ಳುವ ರೀತಿ ಇದ್ದರೆ ಮಾತ್ರ ತನ್ನ ಆವಿಷ್ಕಾರ ಸಾರ್ಥಕವಾಗುವುದೆಂದು ಆಗಲೇ ಮನಗಂಡಿದ್ದ ಬರ್ನಸ್ ಲೀ, ಅಂತದ್ದೊಂದು ಸಿಸ್ಟಂhypertext ಆಗಿ ಆಗಲೇ ಗರ್ಭಧರಿಸಿದೆಯೆಂದು ಕೂಡ ಗುರುತಿಸಿದ್ದ.

Hypertext ಅನ್ನು ಟೆಡ್ ನೆಲ್ಸನ್ (Ted Nelson) ಎನ್ನುವ ಕಂಪ್ಯೂಟರ್ ಪ್ರೋಗ್ರಾಮರ್ ೧೯೬೩ ರಲ್ಲಿ, ಡಾಕ್ಯುಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ ನಲ್ಲಿ ತನ್ನ ಟಿಪ್ಪಣಿಗಳ ಪರಿವಿಡಿತಯಾರಿಸುವ ವಿಷಯದ ಮೇಲೆ ಅಧ್ಯಯನ ನೆಡೆಸುತ್ತಿದ್ದ ಸಮಯದಲ್ಲಿ ಎಲ್ಲರ ಮುಂದಿಟ್ಟ ಒಂದು ಯೋಚನೆ. ಇದನ್ನು ಉಪಯೋಗಿಸಿಕೊಂಡು ಅದಾಗಲೇ ಅನೇಕ ತಂತ್ರಾಂಶಗಳುಕೂಡ ಅಭಿವೃದ್ದಿಗೊಂಡಿದ್ದವು, ಮತ್ತು ಟಿಮ್ ಬರ್ನಸ್-ಲೀ ಕೂಡ ಇದನ್ನ ೧೯೮೦ರಷ್ಟರಲ್ಲೇ ಉಪಯೋಗಿಸಲಿಕ್ಕೆ ಪ್ರಯತ್ನಿಸಿದ್ದ ಕೂಡ.

೯೮೯ರಲ್ಲಿ ತಾನು ಮಂಡಿಸಿದ್ದ ಯೋಜನೆಯನ್ನು ಮತ್ತೆ ಪರಾಮರ್ಷಿಸಿದ ಟಿಮ್ ಬರ್ನಸ್-ಲೀ ೧೯೯೦ರಲ್ಲಿ hypertext ಮೇಲೆತಯಾರಿಸಿದ ಇನ್ಪಾರ್ಮೇಶನ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು CERN  ಮತ್ತೊಬ್ಬ ಕೆಲಸಗಾರ ರಾಬರ್ಟ್ ಕೈಲಿಆವು (RobertCailliau) ಜೊತೆಗೂಡಿ ಅಭಿವೃದ್ಧಿಪಡಿಸಿ ಅದನ್ನು ವರ್ಡ್ ವೈಡ್ ವೆಬ್ ಎಂದು ಮೊದಲ ಬಾರಿಗೆ ಕರೆದ.
 ಸಿಸ್ಟಂ ೧೯೮೬ರಲ್ಲಿ  ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಗಳನ್ನು ಬರೆಯಲು ಬಳಸುತ್ತಿದ್ದ ಟ್ಯಾಗಿಂಗ್ ಎಲಿಮೆಂಟುಗಳಿಂದ  StandardGeneralised Markup Language (SGML) ಅನ್ನೋ ತಂತ್ರಾಂಶದ ಮೇಲೆ ಆಧಾರಿತವಾದ  Hypertext MarkupLanguage (HTML) ಅಂದ್ರೆ  HTML Tags ಅನ್ನುವುದರ ಮೇಲೆ ಕೆಲಸ ಮಾಡುತ್ತಿತ್ತು. ೧೯೯೩ರವರೆಗೆ  ಇದನ್ನು ಒಂದುStandard ಅಂತ ಮಾನ್ಯ ಮಾಡಿರಲೇ ಇಲ್ಲ. International Engineering Tas k Force (IETF) ೧೯೯೩ರಲ್ಲಿಮೊದಲ ಬಾರಿಗೆ  HTML ಅನ್ನು ಮಾನ್ಯಮಾಡಿತಾದರೂ ಇದುವರೆಗೂ ಬರ್ನಸ್-ಲೀ ಮತ್ತು ಕೈಲಿಅವು ಬರೆದ ಮೂಲ ಟ್ಯಾಗ್ ಗಳು ಇಂದಿಗೂ HTML ಭಾಷೆಯಲ್ಲಿ ಉಳಿದುಕೊಂಡಿವೆ.

೧೯೯೧ ರಲ್ಲಿ, WWW ಸಿಸ್ಟಂ ಅನ್ನು ಪ್ರಾಯೋಗಿಕವಾಗಿ ಡೆವಲಪರ್ಗಳಿಗೆ ಪ್ರಯೊಗಾಲಗಳು ಮತ್ತು ಶೈಕ್ಷಣಿಕ ವಿಧ್ಯಾಲಯಗಳ ಮೂಲಕ CERN ಪ್ರೋಗ್ರಾಮ್ ಲೈಬ್ರರಿಯಾಗಿ ನೀಡಲಾಯಿತು.  ಲೈಬ್ರರಿಯಲ್ಲಿ ಸಾಮಾನ್ಯ HTML ವೆಬ್ಬ್ರೌಸರ್, ವೆಬ್ ಸರ್ವರ್ ತಂತಾಂಶ, ಮತ್ತು ಡೆವೆಲಪ್ಮೆಂಟ್ ಲೈಬ್ರರಿಯನ್ನು ಪ್ರೋಗ್ರಾಮರುಗಳ ಸಹಾಯಕ್ಕೆ ಕೊಟ್ಟು, ಅವರದೇ ಹೊಸ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಂತೆ ಹುರಿದುಂಭಿಸಲಾಯಿತು. CERN  ಪ್ರಕಾರ,ಡಿಸೆಂಬರ್ ೧೯೯೧ರಲ್ಲಿ ಅಮೇರಿಕಾದಲ್ಲಿ ಮೊದಲ ವೆಬ್ ಸರ್ವರ್  ಕ್ಯಾಲಿಫೋರ್ನಿಯಾದ Stanford Linear Accelerator Center (SLAC) ನಲ್ಲಿ ಆನ್ಲೈನ್ ಬಂತು.

೧೯೯೩ ರಲ್ಲಿ, ಸಾರ್ವಜನಿಕ ವ್ಯಾಪ್ತಿಯಲ್ಲಿ ಡೆವಲೆಪ್ಮೆಂಟ್ ಕಿಟ್ ಅನ್ನು ಬಿಡುಗಡೆ ಮಾಡಲಾಯಿತು, ಇದೇ ಸಮಯದಲ್ಲಿ ವೆಬ್  ಕೀರ್ತಿ ಮುಗಿಲು ಮುಟ್ಟಲಿಕ್ಕೆ ಶುರುಮಾಡಿತ್ತು. ಇದೇ ವರ್ಷ, University of Illinois  NationalCenter for Supercomputing Applications ಆಧುನಿಕ ಜಗತ್ತಿನ ವೆಬ್ ಬ್ರೌಸರ್ನ ಪೂರ್ವಗಾಮಿ ಅನ್ನುವ ತಂತ್ರಾಂಶವನ್ನು ಬಿಡುಗಡೆ ಮಾಡಿತು. Mosaic  ಮೊದಲ ಆವೃತ್ತಿ (ನಂತರ ಅದನ್ನು NetscapeNavigator ಅಂತ ಕರೆಯಲಾಯಿತು X Window System ಮೇಲೆ ಆಧಾರಿತವಾಗಿದ್ದು, ಮೊದಲ ಬಾರಿಗೆ ಕಂಪ್ಯೂಟರಿನಲ್ಲಿ ಪರದೆಯ ಮೂಲಕ ಬ್ರೌಸರ್ ಬಳಕೆಗೆ ಅನುವು ಮಾಡಿಕೊಟ್ಟಿತು, ಇದನ್ನ PC ಮತ್ತು Mac ಆವೃತ್ತಿಗಳುಸ್ವಲ್ಪದರಲ್ಲೇ ಹಿಂಬಾಲಿಸಿದವು.  

ಇದೆಲ್ಲವನ್ನ ಹಿಂಬಾಲಿಸಿದ್ದು, ಅತಿ ಶೀಘ್ರವಾಗಿ ಆನ್ಲೈನ್ ಬರಲಿಕ್ಕೆ ಶುರುವಾದ ವೆಬ್ ಸರ್ವರ್ಗಳು ಮತ್ತು ಅವುಗಳಲ್ಲಿ ಲಭ್ಯವಿರುವ ಮಾಹಿತಿಯನ್ನು  ತಮ್ಮ ವೆಬ್ ಬ್ರೌಸರ್ ಗಳ ಮೂಲಕ ಬಳಸಿಕೊಳ್ಳಲಿಕ್ಕೆ ಶುರುಮಾಡಿದ ಜನರ ಸಂಖ್ಯೆಲೆಕ್ಕಾಚಾರದ ಪ್ರಕಾರ ೧೯೯೩ ರಲ್ಲಿ ೨೫೦ರಷ್ಟಿದ್ದ ವೆಬ್ ಸರ್ವರ್ಗಳ ಸಂಖ್ಯೆ, ೧೯೯೪ ಕೊನೆಯ ಒಳಗೆ ೨೫೦೦ ಆಗಿತ್ತು.

೧೯೯೫ರ ಒಳಗೆ ೭೦೦ ಹೊಸ ವೆಬ್ ಸರ್ವರ್ಗಳು ಪ್ರತಿದಿನ ಆನ್ಲೈನ್ ಬರುತ್ತವೆ ಮತ್ತು ವರ್ಷ ಕಳೆಯುವುದರ ಒಳಗೆ ೭೩,೫೦೦ ಸರ್ವರ್ಗಳು ವೆಬ್  ಜೊತೆಗೂಡುತ್ತವೆ ಎಂದು ಲೆಕ್ಕ ಹಾಕಲಾಯಿತು. ಮತ್ತು  ಎಲ್ಲ ಬೆಳವಣಿಗೆಗೆಕಾರಣವಾಗಿದ ಮುಖ್ಯ ಅಂಶ ಅಂದ್ರೆ,  ದಿನಗಳಲ್ಲಾದರೂ, ವೆಬ್ ಸರ್ವರ್ ಡೆವೆಲಪ್ಮೆಂಟ್ ತಂತ್ರಾಂಶ ಮತ್ತು ವೆಬ್ ಬ್ರೌಸರ್ ಗಳು ಸ್ವತಂತ್ರವಾಗಿ ದೊರಕಿದ್ದು (Free as in FREEDOM).

ಇತ್ತೀಚೆಗೆ ಯುನೈಟೆಡ್ ನೇಷನ್ಸ್  ಏಜನ್ಸಿ International Telecommunication Union ಬಿಡುಗಡೆ ಮಾಡಿದ ಅಧ್ಯಯನದ ಪಲಿತಾಂಶದ ಪ್ರಕಾರ, ಜಗತ್ತಿನ . ಬಿಲಿಯನ್ ಜನಸಂಖ್ಯೆಯ ಕಾಲುಭಾಗ ಜನ ಇಂಟರ್ನೆಟ್ಬಳಸ್ತಿದಾರೆ ಮತ್ತು  ಸಂಖ್ಯೆ ಪ್ರತಿವರ್ಷ ೨೦೦೨ಕ್ಕೆ ಹೋಲಿಸಿದಂತೆ ಶೇಕಡ ೧೧ ಪ್ರತಿಶತ ಹೆಚ್ಚುತ್ತಲೇ ಇದೆ.
ತಮ್ಮ ಆವಿಷ್ಕಾರವೊಂದು ಹುಟ್ಟಿದ  ೨೦ ವರ್ಷಗಳಲ್ಲೇ, ತಮ್ಮ ಜೀವಿತದ ಅತ್ಯುನ್ನತ ತಂತ್ರಜ್ಞಾನ ಕ್ರಾಂತಿಯಾಗಿ ಹೊರಹೊಮ್ಮಿತು. ಇಂಥ ವಿದ್ಯಮಾನ ಜರುಗುವುದೆಂದು ಬರ್ನರ್ಸ್-ಲೀ ಅಥವಾ ಕೈಲಿಅವರು  ಕೂಡ ನಿರೀಕ್ಷಿಸಲಾರರು.
ಇಂದು ಇಂಟರ್ನೆಟ್ ಮೂಲಕ ದೊರೆಯುತ್ತಿರುವ ಸೇವೆಗಳು ಶಿಕ್ಷಣ ಕ್ಷೇತ್ರದಲ್ಲೂ ಅತಿ ಮುಖ್ಯಪಾತ್ರವಹಿಸುತ್ತಿವೆ. ಅನ್ಲೈನ್ ಕ್ಲಾಸ್ ರೂಮುಗಳು, ವಿಕಿಪೀಡಿಯಾದಂತಹ ನಿಘಂಟು, .ಆರ್.ಸಿ (ಇಂಟರ್ನೆಟ್ ರಿಲೆ ಚಾಟ್) ನಂತಹ ಸಹೃದಯಿಚಿಂತಕರು, ಸಮಾನ ಮನಸ್ಕರು, ಕಲಿಯಲು ಕಲಿಸಲು ಆಸಕ್ತಿಯಿರುವವರು ದೊರೆಯುವ ಚಾಟ್ ರೂಮ್ ಗಳು, ಟ್ವಿಟರ್, ಫೇಸ್ ಬುಕ್, ಇತ್ಯಾದಿ ಮೈಕ್ರೋ ಬ್ಲಾಗಿಂಗ್ ಸೈಟ್ ಗಳಿಂದ ಸೆಕೆಂಡುಗಳಿಗೊಮ್ಮೆ ವಿಶ್ವದ ಹಾಗು ಹೋಗುಗಳನ್ನುಅರಿಯಲು ಸಾಧ್ಯವಿದೆ.  ಆವಿಷ್ಕಾರಗಳೆಲ್ಲಾ ಇಂಟರ್ನೆಟ್ ನಿಂದಲೇ ಹುಟ್ಟಿ, ಅಲ್ಲಿಯೇ ಒಂದು ಹೊಸ ಲೋಕವನ್ನು ಸೃಷ್ಟಿಸಿರುವುದನ್ನು ನಾವಿಂದು ಕಾಣಬಹುದಾಗಿದೆ.
ಚಿತ್ರಗಳು: ವಿಕಿಪೀಡಿಯ ಕಾಮನ್ಸ್ (http://commons.wikipedia.org)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನ
ಅರವತ್ತರ ದಶಕದಲ್ಲಿ ನಿರಂಜನ ಹುಟ್ಟುಕುಳಕುಂದ ಶಿವರಾಯ
15/06/1924
ಕುಳಕುಂದರಾಷ್ಟ್ರೀಯತೆಭಾರತೀಯವೃತ್ತಿಬರಹಗಾರKnown forಬರಹ, ಸ್ವಾತಂತ್ರ್ಯ ಹೋರಾಟಚಳುವಳಿಭಾರತ ಸ್ವಾತಂತ್ರ್ಯ ಸಂಗ್ರಾಮಸಂಗಾತಿ(ಗಳು)ಅನುಪಮಾ ನಿರಂಜನಮಕ್ಕಳುಸೀಮಂತಿನಿ ಮತ್ತು ತೇಜಸ್ವಿನಿಹೆತ್ತವರುತಾಯಿ ಚೆನ್ನಮ್ಮಪ್ರಶಸ್ತಿಗಳುಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ.
ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
ನಿರಂಜನರ ಒಟ್ಟು ೫೫ ಕೃತಿಗಳು ಮರುಪ್ರಕಟಗೊಳ್ಳಲಿವೆ. ಇದು CC-BY-SA 4.0 ಪರವಾನಗಿಯೊಂದಿಗೆ ಭಾರತೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವ ಒಬ್ಬನೇ ಲ…

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಮತ್ತೊಂದು ಸುಲಭ ಉಪಾಯ

ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ, ಮತ್ತೆ ಮತ್ತೆ ಕನ್ನಡ ಟೈಪಿಸುವುದು ಹೇಗೆ ಎಂದು ಹೇಳುವುದನ್ನು ಆಗ್ಗಾಗೆ ಮಾಡಿದರೂ, ಅದನ್ನು ಇನ್ನೊಮ್ಮೆ ಬ್ಲಾಗಿಸಲೇ ಬೇಕಿರುವ ಅಗತ್ಯತೆ ಹೆಚ್ಚುತ್ತಿದೆ.

ಕನ್ನಡದ ಪದಗಳನ್ನು ಯುನಿಕೋಡ್‌ನಲ್ಲಿ ಗೂಗಲ್, ಬಿಂಗ್, ಯಾಹೂ ನಂತಹ ಸರ್ಚ್ ಎಂಜಿನ್‌ಗಳು ನೋಡಲು ಸಾಧ್ಯವಾಗದೆ ಇದ್ದಾಗ, ಈ ಕಂಪೆನಿಗಳು ಆಯಾ ಭಾಷೆಗೆ ಬೇಕಿರುವ ಸೌಲಭ್ಯಗಳನ್ನು ತಮ್ಮ ವೆಬ್‌ಸೈಟ್‌ನಿಂದ ಒದಗಿಸಲು ಮುಂದೆ ಬರುವುದಿಲ್ಲ. ಕನ್ನಡದ ಬಳಕೆ ಇಂಟರ್ನೆಟ್ ನಲ್ಲಿ ಹೆಚ್ಚಾಗಲು ನಾವು ಅದನ್ನು ಇಂಗ್ಲೀಷ್‌ನಲ್ಲೇ ಟೈಪಿಸಿದರೆ ಸಾಲದು, ಜೊತೆಗೆ ಎಲ್ಲರು ನೋಡಲು ಇಚ್ಚೆ ಪಡುವ, ನೋಡಲು ಸಾಧ್ಯವಾಗಿಸುವ ಯುನಿಕೋಡ್‌ನಲ್ಲೇ ಟೈಪಿಸಬೇಕು.

ಬರಹ, ನುಡಿ ಇತ್ಯಾದಿಗಳ ತಂತ್ರಾಂಶಗಳು ಲಭ್ಯವಿಲ್ಲದ ಪಕ್ಷದಲ್ಲಿ ಗೂಗಲ್ ಕ್ರೋಮ್‌ನ ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಈ ಕೆಳಗಿನ ಚಿತ್ರದಲ್ಲಿರುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ಅಥವಾ ಇನ್ಯಾವುದೇ ಭಾಷೆಗಳನ್ನು ಟೈಪಿಸಲು ಸಾಧ್ಯವಿದೆ.


ಈ ಎಕ್ಸ್‌ಟೆನ್ಷನ್ ವಿಕಿಪೀಡಿಯವನ್ನು ನೆಡೆಸುತ್ತಿರುವ ವಿಕಿಮೀಡಿಯ ಫೌಂಡೇಷನ್‌ನ …

ಅಂತರ್ಜಾಲದಲ್ಲಿ ಕೋಲಾಹಲ

೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ:


ವ್ಯಂಗ್ಯಚಿತ್ರ ಕೃಪೆ: ಉದಯವಾಣಿ


ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ. ಮುಕ್ತವಾಗಿ, ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಇತ್ಯಾದಿಗಳ ಮುಖೇನ ಕೈಬೆರಳಿನ ಕೆಲವೇ ಕ್ಲಿಕ್‌ಗಳಲ್ಲೇ ಜಗತ್ತಿನ ಎಲ್ಲರ ಕಂಪ್ಯೂಟರ್ ಪರದೆಗಳ ಮೇಲೆ ಮೂಡಿಸಬಹುದು. ಪಠ್ಯ, ಬ್ಲಾಗ್, ಸುದ್ದಿ, ದೃಶ್ಯ, ಶ್ರಾವ್ಯ, ಚಿತ್ರ ಹೀಗೆ ಹತ್ತು ಹಲವು ಮಾದರಿಯಲ್ಲಿ ಇಂಟರ್‌ನೆಟ್‌ನ ಮಾಹಿತಿ ನಮಗೆ ಲಭ್ಯ. ಈ ಮಾಹಿತಿ ಬಂದದ್ದಾದರೂ ಎಲ್ಲಿಂದ? - ನಾವು ದಿನನಿತ್ಯ ಇಂಟರ್‌ನೆಟ್‌ನಲ್ಲಿ ಕಾಣುವ ಎಲ್ಲ ವಿಷಯಗಳು ಆಯಾ ವೆಬ್‌ಸೈಟ್ನದ್ದೇ ಅಥವಾ ‘ಪೈರಸಿ’ಯೋ?
ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಇಂಟರ್‌ನೆಟ್ ಅನ್ನು ಅರಿಯುವ ಒಂದು ಸಣ್ಣ ಪ್ರಯತ್ನ ಮಾಡೋಣ. ಮಿಲಿಟರಿ ಸಂಬಂಧಿತ ವಿಷಯಗಳನ್ನು ಒಂದು ಪ್ರದೇಶದಿಂಡ ಮತ್ತೊಂದು ಪ್ರದೇಶಕ್ಕೆ ರವಾನಿಸುವಾಗ ತಗುಲುತ್ತಿದ್ದ ಸಮಯವನ್ನು ಕಡಿಮೆ ಮಾಡಲು ಅಮೇರಿಕಾದಲ್ಲಿ ಹುಟ್ಟಿದ ‘ಆರ್ಪಾನೆಟ್' (ARPANET) ಎಂಬ ಕಂಪ್ಯೂಟರ್‌ಗಳನ್ನು ಒಂದಕ್ಕೊಂದು ಸಂಪರ್ಕದಲ್ಲಿರುವಂತೆ ಮಾಡುವ ತಂತ್ರಜ್ಞಾನ, ಇಂದು ಬೃಹದಾಕಾರದಲ್ಲಿ ಬೆಳೆದು ನಮಗೆಲ್ಲ ‘ಇಂಟರ್‌ನೆಟ್’ ಅಥವ ‘ಅಂತರ್ಜಾಲ' ಎಂದೇ ಚಿರಪರಿಚಿತವಾಗಿದೆ. ಮಾಹಿತಿ ವಿನಿಮಯವೇ ಮುಖ್ಯವಾದ ಇಂಟರ್‌…