ನನ್ನ ಬಗ್ಗೆ
ಹೆಮ್ಮೆಯ ಕನ್ನಡಿಗ, ಬೆಂಗಳೂರಿನವ, ವಿಕಿಪೀಡಿಯನ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಕೆದಾರ, ಬೆಂಬಲಿಗ ಮತ್ತು ಪ್ರಚಾರಕ. ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದೇನೆ. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೋಢಿಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ನನ್ನ ಮತ್ತು ನಿಮ್ಮಂತಹವರನ್ನು ಒಗ್ಗೂಡಿಸುವುದು ಸಧ್ಯದ ಗುರಿ.
ವಿಕಿಮೀಡಿಯ ಭಾರತದ ಸದಸ್ಯನಾಗಿದ್ದು, ಕನ್ನಡ ವಿಶೇಷ ಆಸಕ್ತಿ ಬಳಗವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಟದೊಡನೆ ಈಗಾಗಲೇ ೧೦ಕ್ಕಿಂತ ಹೆಚ್ಚು ವರ್ಷಗಳನ್ನು ಕಳೆದಿರುವ ನನಗೆ ಗ್ನು/ಲಿನಕ್ಸ್ ಬಗ್ಗೆ ಕನ್ನಡದಲ್ಲಿ ತಿಳಿಸುವುದೆಂದರೆ ಬಹಳ ಇಷ್ಟ. ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ ಲಿನಕ್ಸಾಯಣಕ್ಕೆ ಒಮ್ಮೆ ಭೇಟಿಕೊಡಿ. ಆಗಾಗ ಕನ್ನಡದಲ್ಲಿ ನಾನು ಬರೆಯುವ ವಿಜ್ಞಾನ, ತಂತ್ರಜ್ಞಾನ, ಕವನ ಇತ್ಯಾದಿಗಳನ್ನು ನನ್ಮನನಲ್ಲಿ ನೋಡಬಹುದು. ಫೋಟೋಗ್ರಫಿ, ಸೈಕ್ಲಿಂಗ್ ಮತ್ತು ಚಾರಣ ನನ್ನ ಇನ್ನಿತರ ಆಸಕ್ತಿಗಳು.

ಜನಪ್ರಿಯ ಲೇಖನಗಳು
-
ನಿರಂಜನ ಅರವತ್ತರ ದಶಕದಲ್ಲಿ ನಿರಂಜನ ಹುಟ್ಟು ಕುಳಕುಂದ ಶಿವರಾಯ 15/06/1924 ಕುಳಕುಂದ ರಾಷ್ಟ್ರೀಯತೆ ಭಾರತೀಯ ವೃತ್ತಿ ಬರಹಗಾರ Known for ಬರಹ, ಸ್ವಾತಂತ್...
-
ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನು...
-
ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದ...
-
೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ: ವ್ಯಂಗ್ಯಚಿತ್ರ ಕೃಪೆ: ಉದಯವಾಣಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟ...
-
ನವಿಲೆ ನವಿಲೆ ನೀನೆಲ್ಲಿರುವೆ ಕಾಣಲು ನಿನ್ನ ಹಾತೊರೆದಿರುವೆ ಜಳ ಜಳ ಸುರಿಯುತ ಜಿನುಗುವ ಮಳೆಯಲಿ ಕುಣಿಯುತ ಬರುವೆ ಸುಂದರ ಚಲುವೆ ಮಳೆಯಲಿ ನಲಿವುದ ಕುಣಿಯುವ ನೀನ...
