ಪ್ರಕಟಣೆ: ಸಂಚಯ ಆತ್ಮೀಯ ಕನ್ನಡಿಗರೆ , ಸಾಮಾನ್ಯನೂ , ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು , ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ , ಅನುಸ್ಥಾಪನೆ , ಸಂಶೋಧನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಒಳಗೊಂಡಂತೆ ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು ‘ ಅರಿವಿನ ಅಲೆಗಳು ‘ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿ ೨೦೧೧ ರ ಆಗಸ್ಟ್ ೧೫ ರಂದು ಮೊದಲ ಪ್ರಕಟಣೆ ಕಂಡಿತು . ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಳಕೆಯನ್ನು ಪ್ರಚುರಪಡಿಸುವುದು , ಅದನ್ನು ಉಪಯೋಗಿಸಲು , ಅಭಿವೃದ್ದಿಪಡಿಸಲು , ಅಭ್ಯಸಿಸಲು , ಇತರರೊಡನೆ ಹಂಚಿಕೊಳ್ಳಲು ಇಚ್ಚಿಸುವ ಹೊಸ ಬಳಕೆದಾರರಿಗೆ ಸಹಾಯವಾಗುವಂತೆ , ಕನ್ನಡದಲ್ಲಿ ಲೇಖನಗಳನ್ನು ಹೊರತರುವಲ್ಲಿ ‘ ಸಂಚಯ ‘ ದ ಈ ಕಾರ್ಯಕ್ರಮದ ಫಲವಾಗಿ ಹೊರಬಂದ ಮೊದಲ ಆವೃತ್ತಿಯನ್ನು ನೀವು http://arivu.sanchaya.net ನಲ್ಲಿ ಕಾಣಬಹುದು . ೧೪ ಜನ ಕನ್ನಡಿಗರು ತಮ್ಮ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದಾರೆ . ತಂತ್ರಜ್ಞಾನ ಅಥವಾ ತಂತ್ರಾಂಶಗಳನ್ನು ಬಳಸಲು ಹಿಂಜರಿಯುವ ಸಾಮಾನ್ಯನ ಅಂಜಿಕೆಯನ್ನು ದೂರಪಡಿಸಲು ಆಗಸ್ಟ್ ೧ ರಿಂದ ಆಗಸ್ಟ್ ೧೪ ರ ವರೆಗೆ ಪ್ರತಿದಿನ ಪ್ರಕಟಿಸಿದ ಅಲೆಗಳನ್ನು ನೀವು ಓದಬಹುದು . ಈ ಕಾರ್ಯವನ್ನು ಮತ್ತೆ ಈ ವರ್ಷವೂ ಕೈಗೆತ್ತಿಕೊಂಡಿದ್ದು , ಹೊಸ ಲೇಖಕರನ್ನು , ಲೇಖನ