ವಿಷಯಕ್ಕೆ ಹೋಗಿ

ಅರಿವಿನ ಅಲೆಗಳು - ೨೦೧೨

ಪ್ರಕಟಣೆ: ಸಂಚಯ


ಆತ್ಮೀಯ ಕನ್ನಡಿಗರೆ,
ಸಾಮಾನ್ಯನೂದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದುಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ,ಅನುಸ್ಥಾಪನೆಸಂಶೋಧನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಒಳಗೊಂಡಂತೆ ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು ಅರಿವಿನ ಅಲೆಗಳುಕಾರ್ಯಕ್ರಮದ ಮುಖ್ಯ ಉದ್ದೇಶವಾಗಿ ೨೦೧೧ ರ ಆಗಸ್ಟ್ ೧೫ ರಂದು ಮೊದಲ ಪ್ರಕಟಣೆ ಕಂಡಿತು.
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಳಕೆಯನ್ನು ಪ್ರಚುರಪಡಿಸುವುದುಅದನ್ನು ಉಪಯೋಗಿಸಲುಅಭಿವೃದ್ದಿಪಡಿಸಲು,ಅಭ್ಯಸಿಸಲುಇತರರೊಡನೆ ಹಂಚಿಕೊಳ್ಳಲು ಇಚ್ಚಿಸುವ ಹೊಸ ಬಳಕೆದಾರರಿಗೆ ಸಹಾಯವಾಗುವಂತೆಕನ್ನಡದಲ್ಲಿ ಲೇಖನಗಳನ್ನು ಹೊರತರುವಲ್ಲಿ ಸಂಚಯದ ಈ ಕಾರ್ಯಕ್ರಮದ ಫಲವಾಗಿ ಹೊರಬಂದ ಮೊದಲ ಆವೃತ್ತಿಯನ್ನು ನೀವುhttp://arivu.sanchaya.net ನಲ್ಲಿ ಕಾಣಬಹುದು.
೧೪ ಜನ ಕನ್ನಡಿಗರು ತಮ್ಮ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದಾರೆತಂತ್ರಜ್ಞಾನ ಅಥವಾ ತಂತ್ರಾಂಶಗಳನ್ನು ಬಳಸಲು ಹಿಂಜರಿಯುವ ಸಾಮಾನ್ಯನ ಅಂಜಿಕೆಯನ್ನು ದೂರಪಡಿಸಲು ಆಗಸ್ಟ್ ೧ ರಿಂದ ಆಗಸ್ಟ್ ೧೪ ರ ವರೆಗೆ ಪ್ರತಿದಿನ ಪ್ರಕಟಿಸಿದ ಅಲೆಗಳನ್ನು ನೀವು ಓದಬಹುದು.
ಈ ಕಾರ್ಯವನ್ನು ಮತ್ತೆ ಈ ವರ್ಷವೂ ಕೈಗೆತ್ತಿಕೊಂಡಿದ್ದುಹೊಸ ಲೇಖಕರನ್ನುಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ.
ಯಾರು ಬರೆಯಬಹುದು?
ಕನ್ನಡದಲ್ಲಿ ತಾನೂ ಬರೆಯಬಲ್ಲೆ ಎನ್ನುವ ಜನಸಾಮಾನ್ಯರುವಿದ್ಯಾರ್ಥಿಗಳುಶಿಕ್ಷಕರುತಾಂತ್ರಿಕ ಪರಿಣಿತಿ ಹೊಂದಿರುವವರು,ಈಗಾಗಲೇ ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ದಿಯಲ್ಲಿ ತೊಡಗಿರುವವರುಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಳಸುವಪ್ರಚುರಪಡಿಸುವ ಹೀಗೆ ಯಾರು ಬೇಕಾದರೂ ಅರಿವಿನ ಅಲೆಗಳಿಗೆ ತಮ್ಮ ಲೇಖನಗಳನ್ನು ಕಳಿಸಬಹುದು.
ಏನನ್ನು ಬರೆಯುವುದು?
 • ತಂತ್ರಾಂಶ ಮತ್ತು ತಂತ್ರಜ್ಞಾನಗಳು ನಿಮ್ಮ ಜೀವನದಲ್ಲಿ ಯಾವ ಪಾತ್ರವಹಿಸಿವೆ?
 • ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಳಸುತ್ತಿದ್ದಲ್ಲಿ ಅಥವಾ ಬಳಸುವ ಆಸಕ್ತಿ ಇದ್ದಲ್ಲಿ ಅದರ ಬಗ್ಗೆ ನಿಮ್ಮ ಅನುಭವ,ಅನಿಸಿಕೆಗಳು ಇತ್ಯಾದಿ
 • ಸಮುದಾಯದ ಒಳಿತಿಗೆ ಬೇಕಿರುವ ತಂತ್ರಜ್ಞಾನ ಅಥವಾ ತಂತ್ರಾಂಶಗಳ ಬಗ್ಗೆ ಬೆಳಕು ಚೆಲ್ಲುವುದು ಅಥವಾ ನೀವೇನಾದರೂ ಅಂತಹ ಅಭಿವೃದ್ದಿಕಾರ್ಯದ ಮೇಲೆ ಕೆಲಸ ಮಾಡಿದ್ದರೆ ಅದರ ಪರಿಚಯ
 • ದೈನಂದಿನ ಕೆಲಸ ಕಾರ್ಯಗಳಲ್ಲಿನಗರಾಭಿವೃದ್ದಿಸರ್ಕಾರಿ ಮತ್ತು ಸರ್ಕಾರೇತರ ಕೆಲಸ ಕಾರ್ಯಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ತಂತ್ರಾಂಶಗಳ ಅಭಿವೃದ್ದಿಯ ಬಗ್ಗೆ
 • ಕೃತಿಸ್ವಾಮ್ಯ (Copyright), ಪೇಟೆಂಟುಗಳುಇಂಟರ್ನೆಟ್ ಸುರಕ್ಷತೆಇಂಟರ್ನೆಟ್ ಕಾನೂನು ಇತ್ಯಾದಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವುದು ಇತ್ಯಾದಿ
ಅಥವಾ
       ’ಅರಿವಿನ ಅಲೆಗಳಲ್ಲಿ‘ ಪ್ರಕಟವಾಗಬೇಕು ಎಂದು ನಿಮಗೆ ಅನಿಸುವ ಲೇಖನಗಳನ್ನು ನಮಗೆ ಕಳುಹಿಸಿ ಕೊಡಬಹುದು.

ಲೇಖನಗಳನ್ನು ಕಳುಹಿಸಲು ಕಡೆಯ ದಿನಾಂಕ೨೮ನೇ ಜುಲೈ ೨೦೧೨
ಲೇಖನಗಳನು ಕಳಿಸಬೇಕಾದ ವಿಳಾಸಮಿಂಚಂಚೆ[email protected]

ಇದರಿಂದ ನಿಮಗೇನು ಸಿಗುತ್ತದೆ?
 • ಅರಿವಿನ ಅಲೆಗಳು‘ ಆಗಸ್ಟ್ ೧೫ರಂದು ಪೂರ್ಣವಾಗಿ ಪ್ರಕಟವಾದಾಗ ಆಯ್ಕೆ ಆದ ೧೪ ಲೇಖನಗಳಲ್ಲಿ ನಿಮ್ಮ ಲೇಖನವೂ ಸೇರಬಹುದು.
 • ಅರಿವಿನ ಅಲೆಗಳು‘ -ಪುಸ್ತಕದಲ್ಲಿ ಕೂಡ ನಿಮ್ಮ ಲೇಖನ ನಿಮ್ಮ ಕಿರುಪರಿಚಯದೊಂದಿಗೆ ಪ್ರಕಟವಾಗುತ್ತದೆ.
 • ಕನ್ನಡಿಗರೊಂದಿಗೆ ನಿಮ್ಮ ಜ್ಞಾನದ ಅರಿವಿನ ಅಲೆಗಳನ್ನು ಹಂಚಿಕೊಂಡ ಅನುಭವ ನಿಮಗೆ ಆಗುತ್ತದೆ.
 • ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಜನಪ್ರಿಯಗೊಳಿಸುವಲ್ಲಿ ನೀವೂ ಸಹಕರಿಸಿದಂತಾಗುತ್ತದೆ.
 • ಸಮುದಾಯ ಕಟ್ಟುವ ಕಾರ್ಯದಲ್ಲಿಅದರಲ್ಲೂ ತಂತ್ರಜ್ಞಾನ ಹಾಗೂ ತಂತ್ರಾಂಶಗಳ ಜೊತೆಗೆ ಕನ್ನಡದ ಅಭಿವೃದ್ದಿಯ ಕಡೆ ಗಮನ ಹರಿಸಲು ಅನೇಕರನ್ನು ಪ್ರೇರೇಪಿಸಿದಂತಾಗುತ್ತದೆ.
 • ನೀವು ಮತ್ತು ಇತರರು ಬರೆದ ಲೇಖನಗಳನ್ನುಅನುಭವಗಳನ್ನು ಮತ್ತಷ್ಟು ಸ್ನೇಹಿತರೊಡನೆ ಹಂಚಿಕೊಳ್ಳುವ ಸ್ವಾತಂತ್ರ್ಯ.
 • ನಿಮ್ಮ ಭಾಗವಹಿಸುವಿಕೆಯ ಮುಖೇನ ಸ್ವತಂತ್ರೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಸಂತೋಷಸಂಭ್ರಮ

ನಿಮಗೆ ಇದರಿಂದ ಏನು ದೊರೆಯುವುದಿಲ್ಲ?
 • ಹಣ/ಬಹುಮಾನ ಇತ್ಯಾದಿ ಅಳೆಯಲಾಗುವಂತಹವುಗಳುಏಕೆಂದರೆ ಈ ಕಾರ್ಯಕ್ರಮಕ್ಕೆ ಆರ್ಥಿಕ ಉದ್ದೇಶಗಳು ಮತ್ತು ಬೆಂಬಲ ಇಲ್ಲ.
 • ಲೇಖನ ಅಥವಾ ಇ-ಪುಸ್ತಕದ ಮುದ್ರಿತ ಪ್ರತಿ ಅರ್ಥಿಕತೆಯ ದೃಷ್ಟಿ ಇಂದ (ಮೇಲೆ ಹೇಳಿದಂತೆಮತ್ತು ಮುದ್ರಿಸುವುದು ಉತ್ತಮವೇ ಎಂಬ ಪ್ರಶ್ನೆಗೆ ನಾವುಗಳಿನ್ನೂ ಉತ್ತರವನ್ನು ಪಡೆಯದೇ ಇರುವುದರಿಂದ.
 • ಇತರೆ ನಮ್ಮ ಗಮನಕ್ಕೆ ಬರದ ಅಂಶಗಳು;)

ಈ ಕಾರ್ಯಕ್ರಮದ ಸ್ಪೂರ್ತಿ
Phpadvent.org ಎನ್ನುವ ವೆಬ್ ಸೈಟ್ಕ್ರಿಸ್ಮಸ್ ಆಚರಿಸುವ ಸಲುವಾಗಿ ಡಿಸೆಂಬರ್ ೧ ರಿಂದ ೨೪ ರವರೆಗೆ PHP ಎಂಬ ತಂತ್ರಾಂಶದ ಬಗೆಗಿನ ಲೇಖನಗಳನ್ನು ತಂತ್ರಜ್ಞರು ಬರೆದು ಹಂಚಿಕೊಳ್ಳುತ್ತಾರೆ.

ಸಂಚಯದ ಬಗ್ಗೆ
ಸಂಚಯ” (http://sanchaya.net) – ಹೆಸರೇ ಸೂಚಿಸುವಂತೆ ಇದೊಂದುಕನ್ನಡ ಭಾಷೆಯ ಕುರಿತಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಗಳನ್ನು ಒಂದೆಡೆ ತರುವ ಪ್ರಯತ್ನಭಾರತ ದೇಶದಲ್ಲಿಹಿಂದಿತಮಿಳುಬಂಗಾಳಿ ಹೀಗೆ ಬಹಳಷ್ಟು ಅಧಿಕೃತ ಭಾಷೆಗಳನ್ನುಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಳಸಲು ಯೋಗ್ಯವಾಗುವಂತೆಹತ್ತು ಹಲವು ಬಗೆಯ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಹಾಗೂ ಸರ್ಕಾರದ ಕಾರ್ಯಗಳಿಗೂ ಹೊಂದುವಂತೆ ರೂಪುಗೊಂಡಿವೆ,ಅಭಿವೃದ್ಧಿಯ ಪಥದಲ್ಲಿಯೂ ಸಾಗುತ್ತಿವೆಅವುಗಳಂತೆಯೇ ಅಧಿಕೃತ ಭಾಷೆಯಾದ ಕನ್ನಡದಲ್ಲಿ ನಡೆಯುತ್ತಿರುವ,ನಡೆಸಬಹುದಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆಅಭಿವೃದ್ಧಿಗಾರರಿಗೆ ಒಂದು ಮುಕ್ತ ವೇದಿಕೆಯನ್ನು ಒದಗಿಸುವುದು ‘ಸಂಚಯ’ದ ಆಶಯಯಾವುದೇ ಒಂದು ಭಾಷೆಯ ಸುತ್ತಲಿನ ತಂತ್ರಾಂಶ ಅಥವಾ ತಂತ್ರಜ್ಞಾನ ಅಭಿವೃದ್ದಿಯು ಆ ಭಾಷೆಯ ಅಭಿವೃದ್ದಿಯೇ ಆಗಿರುತ್ತದೆಈ ಕೆಲಸ ಜನಸಾಮಾನ್ಯನಿಂದ ಇಡಿದು ತಂತ್ರಜ್ಞಾನ ನಿಪುಣರೂಉದ್ಯಮಿಗಳು,ಸರ್ಕಾರ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು ಎಲ್ಲರ ಒಗ್ಗಟ್ಟನ್ನು ಬಯಸುತ್ತದೆಕನ್ನಡಿಗರು ಈ ಕಾರ್ಯದಲ್ಲಿ ಒಟ್ಟಾಗುತ್ತಾರೆ ಎಂಬ ನಂಬಿಕೆಯೊಂದಿಗೆ.

ಹಕ್ಕುಗಳುಹಂಚಿಕೆ

ಎಲ್ಲ ಲೇಖನಗಳ ಸಂಪೂರ್ಣ ಹಕ್ಕುಗಳು ಲೇಖಕರದ್ದೇ ಆಗಿರುತ್ತವೆಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅರಿವನ್ನು ಕನ್ನಡಿಗರಲ್ಲಿ ಪಸರಿಸಲು ಒಟ್ಟುಗೊಂಡ ಲೇಖಕರುಎಲ್ಲ ಲೇಖನಗಳನ್ನು ಮುಕ್ತವಾಗಿ ಕನ್ನಡಿಗರೊಂದಿಗೆ ಹಂಚಿಕೊಳ್ಳ ಬಯಸಿರುತ್ತಾರೆಅರಿವಿನ ಅಲೆಗಳು ಸಂಗ್ರಹದ ಲೇಖನಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಬಿಡುಗಡೆಗೊಳಿಸಲಾಗುವುದುಈ ಮುಖೇನ ಲೇಖನವನ್ನು ಅರಿವಿನ ಅಲೆಗಳು ಮತ್ತು ಸಂಚಯದ ಉಲ್ಲೇಖದೊಡನೆ,ಲೇಖಕರ ಹೆಸರು ಹಾಗೂ ಪರಿಚಯದೊಂದಿಗೆಯಾವುದೇ ಬದಲಾವಣೆಗಳಿಲ್ಲದೆವಾಣಿಜ್ಯ ಉದ್ದೇಶ ರಹಿತ ಜ್ಞಾನದ ಹಂಚಿಕೆಗೆ ಮಾತ್ರ ಬಳಸಬಹುದಾಗಿದೆಸಂಚಿಕೆಗಳು ಅಥವಾ ಇದರ ಲೇಖನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಜನೆ ಇರುವ ವ್ಯಕ್ತಿಗಳುಸಂಘ ಸಂಸ್ಥೆಗಳುಮುದ್ರಣಾಲಯಪ್ರಕಾಶಕರು ಇತ್ಯಾದಿ ಮೊದಲು arivu AT sanchaya.net ಗೆ ಮಿಂಚಂಚೆ ಕಳುಹಿಸಿ ನಮ್ಮ ಒಪ್ಪಿಗೆ ಪಡೆದು ನಂತರವೇ ಮುಂದುವರೆಯ ತಕ್ಕದ್ದು.
ಅರಿವಿನ ಅಲೆಗಳು ಪಿ.ಡಿ.ಎಫ್ -ಪಬ್ ಇತರೆ ಇ-ಸಂಚಿಕೆಗಳನ್ನು ಮುದ್ರಿಸುವಾಗಇತರರೊಡನೆ ಹಂಚಿಕೊಳ್ಳುವಾಗ ಯಾವುದೇ ರೀತಿಯ ಬದಲಾವಣೆಯನ್ನು ಮಾಡದಿರಿ.

ನಮ್ಮನ್ನು ಸಂಪರ್ಕಿಸಲು:-
ಅಂತರ್ಜಾಲ ತಾಣಗಳು:-
ಮೊದಲ ಆವೃತ್ತಿ:- http://arivu.sanchaya.net/ebook/arivina-alegalu.pdf

ಪರವಾಗಿ, 
ಅರಿವಿನ ಅಲೆಗಳು ತಂಡ
ಸಂಚಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನ
ಅರವತ್ತರ ದಶಕದಲ್ಲಿ ನಿರಂಜನ ಹುಟ್ಟುಕುಳಕುಂದ ಶಿವರಾಯ
15/06/1924
ಕುಳಕುಂದರಾಷ್ಟ್ರೀಯತೆಭಾರತೀಯವೃತ್ತಿಬರಹಗಾರKnown forಬರಹ, ಸ್ವಾತಂತ್ರ್ಯ ಹೋರಾಟಚಳುವಳಿಭಾರತ ಸ್ವಾತಂತ್ರ್ಯ ಸಂಗ್ರಾಮಸಂಗಾತಿ(ಗಳು)ಅನುಪಮಾ ನಿರಂಜನಮಕ್ಕಳುಸೀಮಂತಿನಿ ಮತ್ತು ತೇಜಸ್ವಿನಿಹೆತ್ತವರುತಾಯಿ ಚೆನ್ನಮ್ಮಪ್ರಶಸ್ತಿಗಳುಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ.
ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
ನಿರಂಜನರ ಒಟ್ಟು ೫೫ ಕೃತಿಗಳು ಮರುಪ್ರಕಟಗೊಳ್ಳಲಿವೆ. ಇದು CC-BY-SA 4.0 ಪರವಾನಗಿಯೊಂದಿಗೆ ಭಾರತೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವ ಒಬ್ಬನೇ ಲ…

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಮತ್ತೊಂದು ಸುಲಭ ಉಪಾಯ

ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ, ಮತ್ತೆ ಮತ್ತೆ ಕನ್ನಡ ಟೈಪಿಸುವುದು ಹೇಗೆ ಎಂದು ಹೇಳುವುದನ್ನು ಆಗ್ಗಾಗೆ ಮಾಡಿದರೂ, ಅದನ್ನು ಇನ್ನೊಮ್ಮೆ ಬ್ಲಾಗಿಸಲೇ ಬೇಕಿರುವ ಅಗತ್ಯತೆ ಹೆಚ್ಚುತ್ತಿದೆ.

ಕನ್ನಡದ ಪದಗಳನ್ನು ಯುನಿಕೋಡ್‌ನಲ್ಲಿ ಗೂಗಲ್, ಬಿಂಗ್, ಯಾಹೂ ನಂತಹ ಸರ್ಚ್ ಎಂಜಿನ್‌ಗಳು ನೋಡಲು ಸಾಧ್ಯವಾಗದೆ ಇದ್ದಾಗ, ಈ ಕಂಪೆನಿಗಳು ಆಯಾ ಭಾಷೆಗೆ ಬೇಕಿರುವ ಸೌಲಭ್ಯಗಳನ್ನು ತಮ್ಮ ವೆಬ್‌ಸೈಟ್‌ನಿಂದ ಒದಗಿಸಲು ಮುಂದೆ ಬರುವುದಿಲ್ಲ. ಕನ್ನಡದ ಬಳಕೆ ಇಂಟರ್ನೆಟ್ ನಲ್ಲಿ ಹೆಚ್ಚಾಗಲು ನಾವು ಅದನ್ನು ಇಂಗ್ಲೀಷ್‌ನಲ್ಲೇ ಟೈಪಿಸಿದರೆ ಸಾಲದು, ಜೊತೆಗೆ ಎಲ್ಲರು ನೋಡಲು ಇಚ್ಚೆ ಪಡುವ, ನೋಡಲು ಸಾಧ್ಯವಾಗಿಸುವ ಯುನಿಕೋಡ್‌ನಲ್ಲೇ ಟೈಪಿಸಬೇಕು.

ಬರಹ, ನುಡಿ ಇತ್ಯಾದಿಗಳ ತಂತ್ರಾಂಶಗಳು ಲಭ್ಯವಿಲ್ಲದ ಪಕ್ಷದಲ್ಲಿ ಗೂಗಲ್ ಕ್ರೋಮ್‌ನ ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಈ ಕೆಳಗಿನ ಚಿತ್ರದಲ್ಲಿರುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ಅಥವಾ ಇನ್ಯಾವುದೇ ಭಾಷೆಗಳನ್ನು ಟೈಪಿಸಲು ಸಾಧ್ಯವಿದೆ.


ಈ ಎಕ್ಸ್‌ಟೆನ್ಷನ್ ವಿಕಿಪೀಡಿಯವನ್ನು ನೆಡೆಸುತ್ತಿರುವ ವಿಕಿಮೀಡಿಯ ಫೌಂಡೇಷನ್‌ನ …

ಅಂತರ್ಜಾಲದಲ್ಲಿ ಕೋಲಾಹಲ

೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ:


ವ್ಯಂಗ್ಯಚಿತ್ರ ಕೃಪೆ: ಉದಯವಾಣಿ


ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ. ಮುಕ್ತವಾಗಿ, ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಇತ್ಯಾದಿಗಳ ಮುಖೇನ ಕೈಬೆರಳಿನ ಕೆಲವೇ ಕ್ಲಿಕ್‌ಗಳಲ್ಲೇ ಜಗತ್ತಿನ ಎಲ್ಲರ ಕಂಪ್ಯೂಟರ್ ಪರದೆಗಳ ಮೇಲೆ ಮೂಡಿಸಬಹುದು. ಪಠ್ಯ, ಬ್ಲಾಗ್, ಸುದ್ದಿ, ದೃಶ್ಯ, ಶ್ರಾವ್ಯ, ಚಿತ್ರ ಹೀಗೆ ಹತ್ತು ಹಲವು ಮಾದರಿಯಲ್ಲಿ ಇಂಟರ್‌ನೆಟ್‌ನ ಮಾಹಿತಿ ನಮಗೆ ಲಭ್ಯ. ಈ ಮಾಹಿತಿ ಬಂದದ್ದಾದರೂ ಎಲ್ಲಿಂದ? - ನಾವು ದಿನನಿತ್ಯ ಇಂಟರ್‌ನೆಟ್‌ನಲ್ಲಿ ಕಾಣುವ ಎಲ್ಲ ವಿಷಯಗಳು ಆಯಾ ವೆಬ್‌ಸೈಟ್ನದ್ದೇ ಅಥವಾ ‘ಪೈರಸಿ’ಯೋ?
ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಇಂಟರ್‌ನೆಟ್ ಅನ್ನು ಅರಿಯುವ ಒಂದು ಸಣ್ಣ ಪ್ರಯತ್ನ ಮಾಡೋಣ. ಮಿಲಿಟರಿ ಸಂಬಂಧಿತ ವಿಷಯಗಳನ್ನು ಒಂದು ಪ್ರದೇಶದಿಂಡ ಮತ್ತೊಂದು ಪ್ರದೇಶಕ್ಕೆ ರವಾನಿಸುವಾಗ ತಗುಲುತ್ತಿದ್ದ ಸಮಯವನ್ನು ಕಡಿಮೆ ಮಾಡಲು ಅಮೇರಿಕಾದಲ್ಲಿ ಹುಟ್ಟಿದ ‘ಆರ್ಪಾನೆಟ್' (ARPANET) ಎಂಬ ಕಂಪ್ಯೂಟರ್‌ಗಳನ್ನು ಒಂದಕ್ಕೊಂದು ಸಂಪರ್ಕದಲ್ಲಿರುವಂತೆ ಮಾಡುವ ತಂತ್ರಜ್ಞಾನ, ಇಂದು ಬೃಹದಾಕಾರದಲ್ಲಿ ಬೆಳೆದು ನಮಗೆಲ್ಲ ‘ಇಂಟರ್‌ನೆಟ್’ ಅಥವ ‘ಅಂತರ್ಜಾಲ' ಎಂದೇ ಚಿರಪರಿಚಿತವಾಗಿದೆ. ಮಾಹಿತಿ ವಿನಿಮಯವೇ ಮುಖ್ಯವಾದ ಇಂಟರ್‌…