ಬ್ಲಾಗು ಬರೆಯದ ದಿನಗಳು

/
0 Comments
ಬಹಳಷ್ಟು ದಿನದಿಂದ ಇಲ್ಲೇನೂ ಬರೆಯಲಿಲ್ಲ...
ಬರೆಯಲಿಕೊಂದಿಷ್ಟು ಸಮಯ ಬೇಕಲ್ಲ.

ಸಮಯದ್ದಲ್ಲ ಚಿಂತೆ, ಸಂಯಮದ್ದು
ದಿಕ್ಕುದಿಸೆಯಿಲ್ಲದೆ ಮೇಜನು, ಅಲ್ಲಲ್ಲ...
ನನ್ನ ಲ್ಯಾಪ್‌ಟ್ಯಾಪನು ಹತ್ತಿಕೂರುವ
ಕೆಲಸ ಕಾರ್ಯಗಳದ್ದು...

ಟು-ಡು ಲಿಸ್ಟ್‌ಗಳದ್ದೇ ಒಂದು ಲಿಸ್ಟ್
ಅವುಗಳನ್ನು ನೋಡಲು ಮತ್ತೊಂದು ಲಿಸ್ಟ್...
ನಿಲ್ಲದೆ ತಲೆಗೆ ಹತ್ತುವ ಹತ್ತಾರು ಐಡಿಯಾಗಳು
ಮತ್ತು ಹತ್ತುವಂತೆ ಅವುಗಳು ಕೊಡುವ ಟ್ವಿಸ್ಟ್...

ಬರೆದೇ ಬರೆಯುತ್ತೇನೆ ಎಂದು ತೆರೆದಿಟ್ಟುಕೊಂಡ
ಅದೆಷ್ಟೋ ರೆಫರೆನ್ಸುಗಳಾಗಿವೆ ಬುಕ್‌ಮಾರ್ಕ್ಸ್
ಅವುಗಳ ಬ್ಯಾಕ್‌ಅಫ್ ಮಾಡಿಯೇ ಸೊರಗಿದೆ
ನನ್ನ ಬ್ಯಾಕ್‌ಅಪ್ ಡಿಸ್ಕ್.

ಈ ಸಾಲುಗಳಿರಲಿಲ್ಲ ಮೇಲಿನ ಲಿಸ್ಟ್‌ಗಳಲ್ಲಿ...
ಅದರಿಂದಲೇ ಮೂಡಿವೆ ಇಲ್ಲಿ...
ಮುಂದುವರೆಸುವುದೇ ಚಿಂತೆ, ನೋಡುವ
ಮಾಡಿಕೊಳ್ಳುವೆ ಇದಕ್ಕೊಂದು ಲಿಸ್ಟ್


You may also like

ನನ್‌ಮನ © ೨೦೧೩. Powered by Blogger.