ಲೈವ್‌ಸ್ಟ್ರೀಮ್ ಮಾಡುವ ಗುಂಗಿನಲ್ಲಿ...

/
0 Comments
ಕ್ಯಾಮೆರಾಗಳ ಸುತ್ತ...
ಇತ್ತೀಚೆಗೆ ಕಾರ್ಯಕ್ರಮಗಳನ್ನು ಲೈವ್‌ಸ್ಟ್ರೀಮ್ ಮಾಡುವುದು ಸಾಮಾನ್ಯವಾಗಿದೆ. ದೊಡ್ಡದೊಡ್ಡ ಕ್ಯಾಮೆರಾಗಳನ್ನು ಹಿಡಿದು, ವಿಡಿಯೋ ಮಾಡಿ, ಅದನ್ನು ಪ್ರಾಸೆಸ್ ಮಾಡಿ ನಂತರ ಅವುಗಳನ್ನು ಸಿ.ಡಿ ಇತ್ಯಾದಿಗಳಲ್ಲಿ ಬರೆದು ಬೇರೊಬ್ಬರಿಗೆ ನೀಡುತ್ತಿದ್ದ ದಿನಗಳು ಇನ್ನೇನು ಮುಗಿದೇ ಹೋದವು ಎನ್ನಬಹುದು.

ಈಗ ಲೈವ್ ಸ್ಟ್ರೀಮ್ ಕಾಲ. ಕೈಯಲ್ಲಿ ಹಿಡಿದ ಮೊಬೈಲ್, ಡಿಜಿಟಲ್ ಕ್ಯಾಮೆರಾ, ಟ್ಯಾಬ್ಲೆಟ್ ಪಿ.ಸಿ ಇವೆಲ್ಲವೂ ಇಂಟರ್ನೆಟ್‌ಮಯ. ಅವುಗಳಲ್ಲಿ ಕ್ಯಾಮೆರಾ ಬಳಸಿ ಇಂಟರ್ನೆಟ್‌ಗೆ ನೇರವಾಗಿ ನಿಮ್ಮ ಮುಂದೆ ನೆಡೆಯುತ್ತಿರುವ ಕಾರ್ಯಕ್ರಮಗಳನ್ನು ಸುಯ್ಯನೆ ಮನೆಯಲ್ಲೋ, ಇನ್ಯಾವುದೋ ದೇಶದಲ್ಲಿ ಕುಳಿತಿರುವ ಗೆಳೆಯರಿಗೆ ಸೇರಿಸಲು ಅಪ್ಲೋಡ್ ಮಾಡಬಹುದು.

ಈ ಕಾರ್ಯಕ್ಕೆ ಮೇಲೆ ಹೇಳಿದ ಯಾವುದಾದರೂ ಒಂದು ಉಪಕರಣ (ಡಿಜಿಟಲ್ ಕ್ಯಾಮೆರಾ ಹೊಸ ಸೇರ್ಪಡೆ - ಆಂಡ್ರಾಯ್ಡ್ ಇರುವ ಕ್ಯಾಮೆರಾಗಳು ಈಗ ಮಾರುಕಟ್ಟೆಗೆ ಒಂದೊಂದಾಗಿ ಬರುತ್ತಿವೆ), ಜೊತೆಗೆ 3G ಇಂಟರ್ನೆಟ್ ಕನೆಕ್ಷನ್ ಅಥವಾ ಹತ್ತಿರದ ವೈಫೈ ಬಳಸುವ ಸೌಲಭ್ಯ ನಿಮ್ಮಲ್ಲಿರಬೇಕು. ಆಂಡ್ರಾಯ್ಡ್,  ಐಫೋನ್ ಇತ್ಯಾದಿ ಫೋನ್‌ಗಳನ್ನು ಬಳಸಿ ಗೂಗಲ್ ಹ್ಯಾಂಗ್‌ಔಟ್, ಲೈವ್‌ಸ್ಟ್ರೀಮ್, ಯುಸ್ಟ್ರೀಮ್, ಜಸ್ಟ್‌ಇನ್ ಟೀವಿ ಇತ್ಯಾದಿಗಳ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಲೈವ್‌ಸ್ಟ್ರೀಮ್ ಕ್ಷಣಾರ್ಧದಲ್ಲಿ ಸಾಧ್ಯ.

ಇತ್ತೀಚಿನ ವಿಕಿಪೀಡಿಯ ಕಾರ್ಯಾಗಾರಗಳು, ಸಂವಾದಗಳು, ಹಾಗೂ ಛಂದ ಪುಸ್ತಕದ ''ವರ್ಣಮಯ'' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಡಿಯೋ ಸ್ಟ್ರೀಮ್ ಮಾಡಿದಾಗ ಬಂದ ತಾಂತ್ರಿಕ ತೊಡಕುಗಳನ್ನು ಮುಂದೆ ಸರಿಪಡಿಸಿಕೊಳ್ಳಲು ಬಹಳಷ್ಟು ವಿಷಯಗಳು ದೊರಕಿವೆ. ಅದರಿಂದ ಒಂದಷ್ಟು ನಿಮಗೆ:

ಒಂದೆರೆಡು ಕಿವಿಮಾತು:-

* ಒಂದೆರೆಡು ಲೈಫ್‌ಟೈಮ್ ವ್ಯಾಲಿಡಿಟಿ ಇರುವ ಪ್ರೀಪೇಯ್ಡ್ ಮೊಬೈಲ್ ಕನೆಕ್ಷನ್ ನಿಮ್ಮಲ್ಲಿರಲಿ - ಏರ್‌ಟೆಲ್, ಏರ್‌ಸೆಲ್, ಬಿ.ಎಸ್.ಎನ್.ಎಲ್ ಸಾಮಾನ್ಯವಾಗಿ ಉತ್ತಮ ಇಂಟರ್ನೆಟ್ ಕನೆಕ್ಷನ್ ಕೊಡುತ್ತವೆ. ಸಧ್ಯ ರಿಲಾಯನ್ಸ್, ವೊಡಾಫೋನ್ ಹೇಗೆ ಎಂಬುದು ತಿಳಿದಿಲ್ಲ.

* ಸರಿಯಾಗಿ ಕೆಲಸ ಮಾಡುತ್ತಿರುವ ಇಂಟರ್ನೆಟ್ ಸೇವೆಯನ್ನು ತಕ್ಷಣ 3G ರೀಚಾರ್ಜ್ ಪ್ಯಾಕ್‌ನೊಂದಿಗೆ ಅಪ್ಡೇಟ್ ಮಾಡಿಕೊಳ್ಳಲು ಸಾಧ್ಯ.

* ಕಾರ್ಯಕ್ರಮ ಪ್ರಾರಂಭಕ್ಕೂ ಮುಂಚೆ ಒಂದೆರಡು ಭಾರಿ ಲೈವ್‌ಸ್ಟ್ರೀಮ್ ಟೆಸ್ಟ್ ಮಾಡಿ. ಇದು ಕೊನೆಯಕ್ಷಣದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

--ಈ ಪೋಸ್ಟ್ ಅನ್ನು ಇನ್ನಷ್ಟು ಅಪ್ಡೇಟ್ ಮಾಡುವುದಿದೆ. ಲೈವ್‌ಸ್ಟ್ರೀಮ್ ಮಾಡುವ ಮುಂಚೆ ನೀವು ಇದರತ್ತ ಗಮನ ಹಾಯಿಸಬಹುದು.
You may also like

ನನ್‌ಮನ © ೨೦೧೩. Powered by Blogger.