ಪುಸ್ತಕಗಳ ನಡುವಲ್ಲಿ

/
3 Comments
ಬಹಳಷ್ಟು ಪುಸ್ತಕಗಳು ಕಪಾಟು ಸೇರಿವೆ
ಅವುಗಳಲ್ಲಿ ಕೆಲವು ಪುಸ್ತಕಗಳ ಮೈದಡವಿದ್ದೇನೆ
ಮುನ್ನುಡಿ, ಹಿನ್ನುಡಿ, ಮಧ್ಯದ ಇನ್ಯಾವುದೋ
ಪುಟದ ನೆನಪ ಸರಿಸಿದ್ದೇನೆ.

ಓದಲಿಕ್ಕೆ ಸಮಯವಿಲ್ಲ ಎನ್ನುವ ಮಾತಿಲ್ಲ...
ಆಡಿದರೆ ಅದು ತಪ್ಪಾಗುತ್ತದೆ
ನನ್ನ ತಲೆದಿಂಬಿನ ಪಕ್ಕದಲ್ಲಿರುವ ಆ ಪುಸ್ತಕಕ್ಕೂ
ನನ್ನ ತಲೆಬಿಸಿಯ ಸ್ವಲ್ಪ ಅಂದಾಜಾದರೂ ಇದ್ದೀತು

ಮನಸ್ಸನ್ನು ಗಟ್ಟಿ ಮಾಡಿಕೊಂಡು,
ನನ್ನಿಷ್ಟದ ಪುಸ್ತಕಗಳನ್ನು ಓದಿಯೇ ತೀರಬೇಕು
ನನ್ನ ಮನದ ಮಾತುಗಳನ್ನು ಹರಿಯಬಿಡಬೇಕು
ನೀರಾಳವಾಗಬೇಕು, ಹೊಸತು ಅರಿವನ್ನು ಸವಿಯಬೇಕು

ಹಳೆಯ ದಿನಗಳನ್ನೆಲ್ಲಾ ನೆನಪಿಗೆ ತರುತ್ತಾ,
ದಿನಗಳೆದಂತೆ ಬೆಳೆವ ಮೆದುಳಿನ ಹರಿತಕ್ಕೆ
ತಪ್ಪು ಒಪ್ಪುಗಳ ತಿಳಿಯ ಹೇಳುವ
ಪುಸ್ತಕಗಳ ಓದಿಯೇ ಬಿಡಬೇಕು...

ಮನಕ್ಕೆ, ಮೈಗೆ ಅಂಟಿದ ಜಡತ್ವವ ,
ಕೆಲಸವೆನ್ನುವ ಮುಗಿಯದ ಸೋಮಾರಿತನದ
ಕಾರಣವ ದೂರ ಒಗೆಯಬೇಕು,
ನನ್ನ ನೆಚ್ಚಿನ ಪುಸ್ತಕಗಳ ಮಡಿಲ ಸೇರಬೇಕು...


You may also like

ನನ್‌ಮನ © ೨೦೧೩. Powered by Blogger.