ವಿಷಯಕ್ಕೆ ಹೋಗಿ

ಹೊಸ ವರ್ಷ 'ವರ್ಣಮಯ'ವಾಗಲಿ

ವರ್ಣಮಯ  
cover
ಲೇಖಕವಸುಧೇಂದ್ರ
ಚಿತ್ರಕಾರಪ ಸ ಕುಮಾರ್
ಮುಖಪುಟ ಚಿತ್ರಕಾರಶ್ವೇತಾ ಅಡುಕಳ
ಶೈಲಿ (ಗಳು)ಸುಲಲಿತ ಪ್ರಬಂಧಗಳು
ಪ್ರಕಾಶಕಛಂದ ಪುಸ್ತಕ
ಪ್ರಕಾಶನ ದಿನಾಂಕಡಿಸೆಂಬರ್ ೧೬, ೨೦೧೨
ಪುಟಗಳು೨೨೬
ಐ ಎಸ್ ಬಿ ಎನ್ISBN819261132-9
ಹೊಸ ವರ್ಷ ಪುಸ್ತಕವೊಂದನ್ನು ಓದಿ ಮುಗಿಸುವುದರಿಂದಾಗಿ ಪ್ರಾರಂಭವಾಗಿದೆ.ದಿನನಿತ್ಯದ ನಮ್ಮ ಬದುಕಿನ ವರ್ಣಮಯ ಕ್ಷಣಗಳನ್ನು ಪದಗಳಲ್ಲಿ ಕಟ್ಟುತ್ತಾ, ನಮ್ಮದೇ ಪ್ರಪಂಚದ ೭೦ ಎಮ್.ಎಮ್ ಚಿತ್ರವನ್ನು ವಸುಧೇಂದ್ರ ವರ್ಣಮಯದ ಮೂಲಕ ಮಾಡಿಕೊಡುತ್ತಾರೆ.
ಹೆಸರಿನ ಮೂಲಕವೇ ತನ್ನ ಇರುವನ್ನು ಸಾರುವ 'ಬಣ್ಣ'ದ ಮೂಲಕ ಪ್ರಾರಂಭವಾಗುವ ಪ್ರಬಂಧಗಳ ಸಾಲುಗಳು, ಇಂಗ್ಲೆಂಡಿನ   ರೈಲಿನ ಒಂದು ಚಿತ್ರಣವನ್ನು ನಮ್ಮ ಮುಂದಿಡುತ್ತವೆ. ವರ್ಣಭೇದದ ಕಹಿಘಟನೆಗಳನ್ನು, ಮುಲಾಜಿಲ್ಲದೆ ನಾವೂ ಅದರಲ್ಲಿ ಭಾಗವಹಿಸುವ ಪರಿಯನ್ನು ಇಲ್ಲಿ ನೋಡಬಹುದು.

ಕಾರು ಕೊಂಡ ಒಡೆಯನೊಬ್ಬ ಬೆಂಗಳೂರಿನ ದಟ್ಟ ಟ್ರಾಫಿಕ್ ಅರಣ್ಯದಲ್ಲಿ ದಿನದ ದಣಿವಿನಿಂದ ತಪ್ಪಿಸಿಕೊಳ್ಳಲು ನೇಮಿಸಿಕೊಳ್ಳುವ ನಂಜುಂಡಿಯ ಪ್ರಸಂಗಗಳು, ಕಾರ್‌ಡೆಂಟ್ ಮಾಡಿಕೊಂಡ, ಮೊದಮೊದಲಿಗೆ ಕಾರ್‌ನಿಂದಿಳಿದು ಗುದ್ದಿದವನಿಗೆ ಬಯ್ಯಲೂ ಬಾರದೆ, ಸುಮ್ಮನೆ ಇರಲೂ ಮನಸಾಗದೆ ತಡವರಿಸಿದ, ನಂತರದ ದಿನಗಳಿಗೆ ಒಂದಲ್ಲಾ ಒಂದು ರೀತಿಯಿಂದಾದ ಕಾರ್‌ ಮೇಲಿನ  ಗೆರೆಗಳನ್ನೂ ನೋಡಿದರೂ ನೋಡದಂತೆ ನೆಡೆಯುವ ನನ್ನ ಬದಲಾದ attitude ನೆನೆಯುವಂತೆ ಮಾಡಿದವು. ಜೊತೆಗೆ, ನಮ್ಮದೇ ಲೋಕದಲ್ಲಿರುವ ಐ.ಟಿ ಜನರಿಗೆ ಪ್ರಪಂಚದ ಜ್ಞಾನವನ್ನು ಸ್ವಲ್ಪವಾದರೂ ಮಾಡಿಕೊಳ್ಳಲು ಸಹಾಯ ಮಾಡುವ ಡ್ರೈವರ್ರುಗಳ, ಕ್ಯಾಬ್‌ನವರ, ಆಗಾಗ್ಗೆ ಹೋಗಿ ಬಂದ ಟ್ರಿಪ್‌ಗಳಲ್ಲಿದ್ದ್ದ್ದ ಟ್ರಾವೆಲ್ಸ್‌ನ ಡ್ರೈವರ್ರುಗಳ ಮಾತುಗಳನ್ನು ನಂಜುಂಡಿಯ ಮಾತುಗಳಲ್ಲಿ ಕೇಳುವಂತಾಯ್ತು.


ಜನರಲ್ ನಾಲೆಡ್ಜ್ ಹೆಚ್ಚಿಸುವ ಎಫ್. ಎಮ್ ರೇಡಿಯೋ ಹೆಸರು ಎತ್ತುತ್ತಿದ್ದಂತೆಯೇ ಕೇಳಲಾಗದ ಕನ್ನಡ ಆಡುಗಳ ಮಧ್ಯೆ ಆಗ್ಗಾಗ್ಗೆ ಬರುವ ಇಂತಹ ಮಾಹಿತಿಗಳನ್ನಾದರೂ ಕೇಳಿ ಕಿವಿಗೆ ತಂಪಾಗುವ ಕ್ಷಣವನ್ನು ನೆನದು 'ಉಸ್ಸಪ್ಪ' ಎಂದದ್ದಾಯ್ತು.

ಬೆಳಗ್ಗೆ ಎದ್ದು ಅಫೀಸಿನೆಡೆಗೆ ಮುಖ ಮಾಡಿದರೆ ಮತ್ತೆ ಸಂಜೆ ಬಂದು ಬೇಯಿಸಿ ತಿನ್ನುವ ಗೋಜಿಗೆ ಮುಖ ಸಿಂಡರಿಸುತ್ತಿದ್ದ ದಿನಗಳನ್ನು, ಮೂರು ದಾರಿ ಆಚೆ ಇರುವ ಆ ಇಡ್ಲಿ, ದೋಸೆಯವನ ಅಂಗಡಿಯ ತಕ್ಷಣದ ನೆನಪು ಬಂದದ್ದು 'ಗೌರಮ್ಮ'ನ ಪ್ರಬಂಧ ಓದುತ್ತಿದ್ದಾಗ. ಮನೆಕೆಲಸದವರು ಹೇಗೆ, ಎತ್ತ, ಅವರ ಜೀವನ ಹೇಗೆ, ಅವರ ನಮ್ಮ ನಡುವಣ ಸಂಬಂಧ ಪ್ರಾರಂಭವಾಗುತ್ತಿದ್ದಂತೆಯೆ ನಿಧಾನವಾಗಿ ಅವರ ಪ್ರಪಂಚವನ್ನು ನಮ್ಮೆದುರಿಗಿಡುವ ಅವರ ಮಾತುಗಳು ಇಲ್ಲಿ ನಮಗೆ ಕಾಣಸಿಗುತ್ತವೆ. ಮನೆ ಶುಚಿ ಇಡಲು, ಹೊಟ್ಟೆಯ ಕಿರಿಕಿರಿ ತಡೆಯಲು, ಹಬ್ಬ ಹರಿದಿನದ ಸಿಹಿ ಅಡುಗೆಗೂ ಈಗ ಇವರ ಅಗತ್ಯತೆ ನಮಗೆ ಇದ್ದೇ ಇದೆ. ನನ್ನಾಕೆ ನಮ್ಮ ಮನೆಗೆ ಬರುವ ಅಡುಗೆಯಾಕೆಯನ್ನು ನಂಬುವ ಪರಿ, ವಸುಧೇಂದ್ರರು ತಮ್ಮ ಅಪಾರ್ಟ್‌ಮೆಂಟಿನ ಕೀಲಿ ಕೈ ಅವರಿಗೆ ಕೊಡುವ ಹಿಂದಿನ ಕಥೆ, ಕೆಲಸದವರು ಬರದಿದ್ದಾಗ ಅವರನ್ನು ಬೈದೇ ಬಿಡಬೇಕು ಎನಿಸುವ ಮಾತು ಇತ್ಯಾದಿಗಳು ನಮ್ಮ ದಿನನಿತ್ಯದ ಆ ಎರಡು ಕ್ಷಣಗಳನ್ನು ಜ್ಞಾಪಿಸಿಕೊಳ್ಳುವಂತೆ ಮಾಡುತ್ತದೆ. ಕೊನೆಗೆ ಬೈದರೆ ಎಲ್ಲಿ ನಾಳೆಯಿಂದ ಕೆಲಸಕ್ಕೇ ಬರುವುದಿಲ್ಲವೋ ಎಂಬ ಭಯದಿಂದ 'ಎಚ್ಚರಿಕೆ' ಎನ್ನುವ ಘಂಟಾನಾದವನ್ನು ಉಪಯೋಗಿಸುವ ಚತುರತೆಯನ್ನು ಕಾಲವೇ ನಮಗೆ ಕಲಿಸುವ ಅದನ್ನು ಪ್ರಯೋಗಿಸುವ ಪರಿಯೂ ನಿಮಗೆ ನೆನಪಾಗುವುದು ಖಂಡಿತ.

ಮಹಾಭಾರತ, ರಾಮಾಯಣ ಇತ್ಯಾದಿಗಳನ್ನು ಧಾರಾವಾಹಿಗಳಲ್ಲಿ, ಮತ್ತು ಶಾಲೆಯ ಪುಸ್ತಕಗಳಲ್ಲಿ ಓದಿದ ನನಗೆ ಕಥೆಗಳು ಅಲ್ಪಸ್ವಲ್ಪ ತಿಳಿದಿದೆ ಅಷ್ಟೇ. ಆದರೂ ಅವುಗಳ ಪ್ರಸಂಗಗಳನ್ನು ಹೇಳುವಾಗ ಎಲ್ಲಿ, ಯಾವಾಗ ಯಾರು ಎನ್ನುವುದನ್ನು ಕಲ್ಪಿಸಿಕೊಳ್ಳುತ್ತಾ, ನಿಷ್ಠೆಯಿಂದ ಕೇಳಲು ಅಡ್ಡಿಯಿಲ್ಲ... 'ವರ್ಣಮಯ'ದಲ್ಲಿ ಕೃಷ್ನ ಮತ್ತು ಕರ್ಣರನ್ನು ಮಹಾಭಾರತದ ಕಥೆಯನ್ನಾಡಿದ ವ್ಯಾಸರು, ಕುಮಾರವ್ಯಾಸ, ಎಸ್.ಎಲ್ ಭೈರಪ್ಪ ಹೇಗೆಲ್ಲ ಚಿತ್ರಿಸಿದ್ದಾರೆ, ಅವರ ಮನಸ್ಸಿನಲ್ಲಿ ಯಾರು ನಿಜವಾಗಿಯೂ ಮನೆಮಾಡಿದವರು, ಅವರ ಚಿತ್ರಣವನ್ನು ಲೋಕಕ್ಕೆ ಮಾಡಿಕೊಟ್ಟ ಇವರ ಲೆಕ್ಕಾಚಾರಗಳೇನಿದ್ದಿರಬಹುದು ಎಂದು ಮೂರು ನಾಲ್ಕು ಮಹಾಗ್ರಂಥಗಳ ಚಿತ್ರಣವನ್ನು ವಸುಧೇಂದ್ರ ನಮಗೆ ಮಾಡಿಕೊಡುತ್ತಾರೆ.

ಕಾಂಕ್ರೀಟ್ ನಗರದಲ್ಲೇ ಬೆಳೆದ ನನಗೆ ಅಮ್ಮನೊಡನೆ ಹಳ್ಳಿಯಲ್ಲಿದ್ದ ಪ್ರಸಂಗಗಳು ಇಲವೇ ಇಲ್ಲ ಎನ್ನಬಹುದು. ಇದೇ ಜಾತ್ರೆ, ಸಾಮಾನುಗಳನ್ನು ಕೊಡು ಕೊಳ್ಳುವ ಅನೇಕ ಸಂದರ್ಭಗಳನ್ನು ಕಳೆದು ಹಾಕಿದೆ ಎನ್ನಲಡ್ಡಿಇಲ್ಲ. ಅಮ್ಮನ ನೆನಪುಗಳನ್ನು, ಅಮ್ಮನ ವ್ಯಕ್ತಿತ್ವವನ್ನು, ಅವಳ ಹಾಸ್ಯ ಪ್ರಜ್ಞೆ ಇತ್ಯಾದಿಗಳು 'ಅಮ್ಮ ಎನ್ನುವ ಸಂಭ್ರಮ' ಮತ್ತು 'ತಾಯಿ ದೇವರಲ್ಲ' ಎನ್ನುವ ಪ್ರಬಂಧಗಳ ಮೂಲಕ ನಮ್ಮ ಮುಂದೆ ಬರುತ್ತವೆ. ಚಿಕ್ಕಂದಿನ ನೆನಪುಗಳನ್ನು ತರುವ ಈ ಚೆಂದದ ಪ್ರಬಂಧಗಳನ್ನು ಓದಿಯೇ ಆಸ್ವಾದಿಸಬೇಕು.

ಅಪಾರ್ಟ್‌ಮೆಂಟಿನೊಳಗಿನವರ, ಗಾರ್ಮೆಂಟ್ಸ್ ನಿಂದ ಹಿಡಿದು ಬಹುರಾಷ್ಟ್ರಿಯ ಕಂಪೆನಿಗಳ ಚುಕ್ಕಾಣಿ ಹಿಡಿದ ಮಹಿಳೆಯರ  ಶಕ್ತಿ, ನಮ್ಮೆದುರಿಗಿರುವ ಅವರ ಜೀವನದ ಕಷ್ಟ ಸುಖಗಳನ್ನುಕೂಡ ನಮಗೆ ವಸುಧೇಂದ್ರ ಮಾಡಿಕೊಡುತ್ತಾರೆ.

ಮನಕಲಕುವ ಘಟನಾವಳಿಗಳಿಗೆ ಪ್ರೇಕ್ಷಕನಾದ ೨೦೧೨ರ ಅಂಚಿನಲ್ಲಿ ಗಾಂಧಿ ಎಂಬೊಬ್ಬ ಮಾಹಾತ್ಮನ ಮಾತುಗಳನ್ನು, ನಮ್ಮ ಅವಶ್ಯಕತೆಗೆ ನುಣುಚುತ್ತಾ, ಅವರ ಪ್ರತಿಮೆ ಅಷ್ಟನ್ನೇ ಒಂದು ಮೂಲೆಯಲ್ಲಿಟ್ಟು ಕೂರುತ್ತಿರುವ ಇಂದಿನ ಪೀಳಿಗೆಗೆ 'ಸತ್ಯ' ಎನ್ನುವುದರ, 'ಶಾಂತಿ ಮಂತ್ರ'ದ, 'ಅಹಿಂಸೆ'ಯ, 'ಜಾತ್ಯಾತೀತ ಮಾನೋಭಾವ'ದ ಗಂಧ ಎಷ್ಟಿದೆ ಎನ್ನುವುದರೊಂದಿಗೆ ಮುಕ್ತಾಯವಾಗುವ ಪ್ರಬಂಧಗಳು ಒಂದಾದ ನಂತರ ಮತ್ತೊಂದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಮಿತವಾದ ಹಾಸ್ಯ ಪ್ರಸಂಗಗಳು ನಗುನಗುತ್ತಲೇ, ನಮಗೆ ಘಟನೆಗಳ ಮತ್ತೊಂದು ಮುಖದ ಪರಿಚಯವನ್ನು ಯಶಸ್ವಿಯಾಗಿ ಮಾಡಿಕೊಡುತ್ತವೆ.

ಎಲ್ಲರಿಗೂ ಹೊಸವರ್ಷ 'ವರ್ಣಮಯ'ವಾಗಿರಲಿ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನ
ಅರವತ್ತರ ದಶಕದಲ್ಲಿ ನಿರಂಜನ ಹುಟ್ಟುಕುಳಕುಂದ ಶಿವರಾಯ
15/06/1924
ಕುಳಕುಂದರಾಷ್ಟ್ರೀಯತೆಭಾರತೀಯವೃತ್ತಿಬರಹಗಾರKnown forಬರಹ, ಸ್ವಾತಂತ್ರ್ಯ ಹೋರಾಟಚಳುವಳಿಭಾರತ ಸ್ವಾತಂತ್ರ್ಯ ಸಂಗ್ರಾಮಸಂಗಾತಿ(ಗಳು)ಅನುಪಮಾ ನಿರಂಜನಮಕ್ಕಳುಸೀಮಂತಿನಿ ಮತ್ತು ತೇಜಸ್ವಿನಿಹೆತ್ತವರುತಾಯಿ ಚೆನ್ನಮ್ಮಪ್ರಶಸ್ತಿಗಳುಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ.
ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
ನಿರಂಜನರ ಒಟ್ಟು ೫೫ ಕೃತಿಗಳು ಮರುಪ್ರಕಟಗೊಳ್ಳಲಿವೆ. ಇದು CC-BY-SA 4.0 ಪರವಾನಗಿಯೊಂದಿಗೆ ಭಾರತೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವ ಒಬ್ಬನೇ ಲ…

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಮತ್ತೊಂದು ಸುಲಭ ಉಪಾಯ

ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ, ಮತ್ತೆ ಮತ್ತೆ ಕನ್ನಡ ಟೈಪಿಸುವುದು ಹೇಗೆ ಎಂದು ಹೇಳುವುದನ್ನು ಆಗ್ಗಾಗೆ ಮಾಡಿದರೂ, ಅದನ್ನು ಇನ್ನೊಮ್ಮೆ ಬ್ಲಾಗಿಸಲೇ ಬೇಕಿರುವ ಅಗತ್ಯತೆ ಹೆಚ್ಚುತ್ತಿದೆ.

ಕನ್ನಡದ ಪದಗಳನ್ನು ಯುನಿಕೋಡ್‌ನಲ್ಲಿ ಗೂಗಲ್, ಬಿಂಗ್, ಯಾಹೂ ನಂತಹ ಸರ್ಚ್ ಎಂಜಿನ್‌ಗಳು ನೋಡಲು ಸಾಧ್ಯವಾಗದೆ ಇದ್ದಾಗ, ಈ ಕಂಪೆನಿಗಳು ಆಯಾ ಭಾಷೆಗೆ ಬೇಕಿರುವ ಸೌಲಭ್ಯಗಳನ್ನು ತಮ್ಮ ವೆಬ್‌ಸೈಟ್‌ನಿಂದ ಒದಗಿಸಲು ಮುಂದೆ ಬರುವುದಿಲ್ಲ. ಕನ್ನಡದ ಬಳಕೆ ಇಂಟರ್ನೆಟ್ ನಲ್ಲಿ ಹೆಚ್ಚಾಗಲು ನಾವು ಅದನ್ನು ಇಂಗ್ಲೀಷ್‌ನಲ್ಲೇ ಟೈಪಿಸಿದರೆ ಸಾಲದು, ಜೊತೆಗೆ ಎಲ್ಲರು ನೋಡಲು ಇಚ್ಚೆ ಪಡುವ, ನೋಡಲು ಸಾಧ್ಯವಾಗಿಸುವ ಯುನಿಕೋಡ್‌ನಲ್ಲೇ ಟೈಪಿಸಬೇಕು.

ಬರಹ, ನುಡಿ ಇತ್ಯಾದಿಗಳ ತಂತ್ರಾಂಶಗಳು ಲಭ್ಯವಿಲ್ಲದ ಪಕ್ಷದಲ್ಲಿ ಗೂಗಲ್ ಕ್ರೋಮ್‌ನ ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಈ ಕೆಳಗಿನ ಚಿತ್ರದಲ್ಲಿರುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ಅಥವಾ ಇನ್ಯಾವುದೇ ಭಾಷೆಗಳನ್ನು ಟೈಪಿಸಲು ಸಾಧ್ಯವಿದೆ.


ಈ ಎಕ್ಸ್‌ಟೆನ್ಷನ್ ವಿಕಿಪೀಡಿಯವನ್ನು ನೆಡೆಸುತ್ತಿರುವ ವಿಕಿಮೀಡಿಯ ಫೌಂಡೇಷನ್‌ನ …

ಅಂತರ್ಜಾಲದಲ್ಲಿ ಕೋಲಾಹಲ

೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ:


ವ್ಯಂಗ್ಯಚಿತ್ರ ಕೃಪೆ: ಉದಯವಾಣಿ


ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ. ಮುಕ್ತವಾಗಿ, ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಇತ್ಯಾದಿಗಳ ಮುಖೇನ ಕೈಬೆರಳಿನ ಕೆಲವೇ ಕ್ಲಿಕ್‌ಗಳಲ್ಲೇ ಜಗತ್ತಿನ ಎಲ್ಲರ ಕಂಪ್ಯೂಟರ್ ಪರದೆಗಳ ಮೇಲೆ ಮೂಡಿಸಬಹುದು. ಪಠ್ಯ, ಬ್ಲಾಗ್, ಸುದ್ದಿ, ದೃಶ್ಯ, ಶ್ರಾವ್ಯ, ಚಿತ್ರ ಹೀಗೆ ಹತ್ತು ಹಲವು ಮಾದರಿಯಲ್ಲಿ ಇಂಟರ್‌ನೆಟ್‌ನ ಮಾಹಿತಿ ನಮಗೆ ಲಭ್ಯ. ಈ ಮಾಹಿತಿ ಬಂದದ್ದಾದರೂ ಎಲ್ಲಿಂದ? - ನಾವು ದಿನನಿತ್ಯ ಇಂಟರ್‌ನೆಟ್‌ನಲ್ಲಿ ಕಾಣುವ ಎಲ್ಲ ವಿಷಯಗಳು ಆಯಾ ವೆಬ್‌ಸೈಟ್ನದ್ದೇ ಅಥವಾ ‘ಪೈರಸಿ’ಯೋ?
ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಇಂಟರ್‌ನೆಟ್ ಅನ್ನು ಅರಿಯುವ ಒಂದು ಸಣ್ಣ ಪ್ರಯತ್ನ ಮಾಡೋಣ. ಮಿಲಿಟರಿ ಸಂಬಂಧಿತ ವಿಷಯಗಳನ್ನು ಒಂದು ಪ್ರದೇಶದಿಂಡ ಮತ್ತೊಂದು ಪ್ರದೇಶಕ್ಕೆ ರವಾನಿಸುವಾಗ ತಗುಲುತ್ತಿದ್ದ ಸಮಯವನ್ನು ಕಡಿಮೆ ಮಾಡಲು ಅಮೇರಿಕಾದಲ್ಲಿ ಹುಟ್ಟಿದ ‘ಆರ್ಪಾನೆಟ್' (ARPANET) ಎಂಬ ಕಂಪ್ಯೂಟರ್‌ಗಳನ್ನು ಒಂದಕ್ಕೊಂದು ಸಂಪರ್ಕದಲ್ಲಿರುವಂತೆ ಮಾಡುವ ತಂತ್ರಜ್ಞಾನ, ಇಂದು ಬೃಹದಾಕಾರದಲ್ಲಿ ಬೆಳೆದು ನಮಗೆಲ್ಲ ‘ಇಂಟರ್‌ನೆಟ್’ ಅಥವ ‘ಅಂತರ್ಜಾಲ' ಎಂದೇ ಚಿರಪರಿಚಿತವಾಗಿದೆ. ಮಾಹಿತಿ ವಿನಿಮಯವೇ ಮುಖ್ಯವಾದ ಇಂಟರ್‌…