ವಿಕಿಪೀಡಿಯ ಸುತ್ತ ಅಂತರಾಷ್ಟ್ರೀಯ ಮಹಿಳಾದಿನ

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಕಿಪೀಡಿಯ ದೇಶದ ವಿವಿದೆಡೆಗಳಲ್ಲಿ ಮಹಿಳಾ ಸಮ್ಮಿಲನಗಳನ್ನು ಹಮ್ಮಿಕೊಂಡಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿ ಲಭ್ಯ: Wikipedia:Meetup/International Women's Day, India ಜೊತೆಗೆ ಬೆಂಗಳೂರಿನಲ್ಲಿಯೂ ಅನೇಕ ಮಹಿಳೆಯರು ಒಂದೆಡೆ ಸೇರಿ ೯, ಮಾರ್ಚ್ ೨೦೧೩ರಂದು ವಿಕಿಪೀಡಿಯ ಬಗ್ಗೆ ಅರಿತುಕೊಂಡರು. ಜೊತೆಗೆ ವಿಕಿಸಂಪಾದನೆಗೂ ತೊಡಗಿದರು. ಪವಿತ್ರ ಈ ಸಮ್ಮಿಲನ ನೆಡೆಸಿಕೊಟ್ಟರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಕನ್ನಡದ ಮಹಿಳೆಯರ ಪುಟಗಳನ್ನೂ ಸಂಪಾದಿಸಲು ಸಾಧ್ಯವಾಗಬೇಕು ಎಂಬ ಆಶಯದಿಂದ ಈ ಕೆಳಗಿನ ಕೊಂಡಿಯನ್ನು ಸಿದ್ದಪಡಿಸಿದ್ದೇವೆ. ಕನ್ನಡ ವಿಕಿಪೀಡಿಯ ಸುತ್ತ ಕೆಲಸ ಮಾಡುತ್ತಿರುವ ಮಹಿಳೆಯರು ಇದರತ್ತ ಗಮನ ಹರಿಸಬೇಕೆಂದು ಕೋರಿಕೆ. ವಿಕಿಪೀಡಿಯ:ಸಮ್ಮಿಲನ/ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ ೨೦೧೩, ಭಾರತ * ಕುಮಾರವ್ಯಾಸನ ವ್ಯಾಸ ಭಾರತದ ಪರ್ವಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದರ ಮೂಲಕ ಸವಿತಾ ಎಸ್. ಆರ್ ಮಹಿಳಾ ದಿನದ ಆಚರಣೆಯಲ್ಲಿ ತೊಡಗಿದ್ದಾರೆ. * ಶ್ಯಾಮಲಾ ಜನಾರ್ಧನ್ ಹರಿಕಥಾಮೃತ ಸಾರವನ್ನುವಿಕಿಪೀಡಿಯದ ವಿಕಿಸೋರ್ಸ್ಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. * ಸಮ್ಮಿಲನದ ದಿನ ಡಾ. ಸುಮಿತ್ರ ಬೆಂಗಳೂರಿನವರೇ ಆದ ಭಾರತದ ಫಿಷರ್ ವುಮನ್ ಎಂದೇ ಖ್ಯಾತಿ ಪಡೆದ ನಳಿನಿ ನಾಯಕ್ ಅವರ ಬಗ್ಗೆ ತಿಳಿಸಿ, ಅವರಿಗೆ ಸಂಬಂಧಿಸಿದ ಪುಟದ ಸಂಪಾದನ