ವಚನ ಸಂಚಯ ವರ್ಡ್ಪ್ರೆಸ್ ಪ್ಲಗಿನ್
೧೧ ಮತ್ತು ೧೨ನೇ ಶತಮಾನದ, ಕನ್ನಡದ ಅತಿ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲೊಂದಾದ ವಚನ ಸಾಹಿತ್ಯವನ್ನು ನಮ್ಮ ‘ ವಚನ ಸಂಚಯ ‘ ತಂಡ ನಿಮ್ಮ ಮುಂದೆ ತಂದಿರುವುದು ನಿಮಗೆ ತಿಳಿದೇ ಇದೆ. ಇದನ್ನು ದಿನ ನಿತ್ಯ ಎಲ್ಲರಿಗೆ ತಲುಪಿಸುವ ಕೆಲಸ ಟ್ವಿಟರ್ ಮತ್ತು ಫೇಸ್ಬುಕ್ ಮೂಲಕವೂ ನೆಡೆದಿದೆ. ಪ್ರಾಯೋಗಿಕವಾಗಿ ಇದನ್ನು ವರ್ಡ್ಪ್ರೆಸ್ ಬಳಸುವ ಎಲ್ಲ ಕನ್ನಡ ಬ್ಲಾಗಿಗರೂ ತಮ್ಮ ಬ್ಲಾಗ್ಗಳಲ್ಲಿ ಬಳಸುವಂತಾಗಲು ಈ ಪ್ಲಗಿನ್ ಅನ್ನು ಅಭಿವೃದ್ದಿ ಪಡಿಸಲಾಗಿರುತ್ತದೆ. ಆಸಕ್ತರು ಇದನ್ನು ಡೌನ್ಲೋಡ್ ಮಾಡಿ ನಿಮ್ಮ ವರ್ಡ್ಪ್ರೆಸ್ ಬ್ಲಾಗ್ಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಇನ್ಸ್ಟಾಲ್ ಆದ ನಂತರ, Appearance -> Widgets ಗೆ ನುಗ್ಗಿ, ಅಲ್ಲಿ ಕಾಣುವ ವಚನ ಸಂಚಯ ಡೈಲಿ ವಚನ ವಿಡ್ಗೆಟ್ ಅನ್ನು ನಿಮ್ಮ ಸೈಡ್ ಬಾರಿಗೆ ಎಳೆದು ಹಾಕಿ. ಬೇಕಿದ್ದಲ್ಲಿ, ವಿಡ್ಗೆಟ್ ನ ಹಣೆಪಟ್ಟಿಯ ಹೆಸರನ್ನು ಬದಲಿಸಬಹುದು. ಮುಂಬರುವ ದಿನಗಳಲ್ಲಿ ವರ್ಡ್ಪ್ರೆಸ್ ಪ್ಲಗಿನ್ ಡೈರೆಕ್ಟರಿಯಲ್ಲಿ ಇದನ್ನು ನೇರವಾಗಿ ಹುಡುಕಲೂ ಸಿಗುತ್ತದೆ. Plugins -> Add New ನಲ್ಲಿ Vachana ಅಥವಾ Vachana Sanchaya ಹುಡುಕಿದರೆ. ಈ ಪ್ಲಗಿನ್ ಸ್ಥಾಪಿಸಿಕೊಳ್ಳಲು ವರ್ಡ್ಪ್ರೆಸ್ನಲ್ಲೀಗ ಸುಲಭ. ನೇರವಾಗಿ ಪ್ಲಗಿನ್ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ . ಈ ವರ್ಡ್ಪ್ರೆಸ್ ಪ್ಲಗಿನ್ ಅನ್ನು ಉತ್ತಮ ಪಡಿಸುವ ಇಚ್ಛೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ ಅಥ