ವಿಷಯಕ್ಕೆ ಹೋಗಿ

ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

image

ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ "ವಿಕಿಪೀಡಿಯ ಝೀರೋ" ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು.

ಶುಕ್ರವಾರ ಸಂಜೆ (ಜೂನ್ ೨೭,೨೦೧೪) ರಂದು ಏರ್‌ಸೆಲ್ ಬೆಂಗಳೂರಿನ ತನ್ನ ಆಫೀಸಿನಲ್ಲಿ ಏರ್ಪಡಿಸಿದ್ದ ಬೆಂಗಳೂರು ಬ್ಲಾಗಿಗರ ಸಮ್ಮಿಲನದಲ್ಲಿ ವಿಕಿಮೀಡಿಯದ ಕ್ಯಾರೋಲೀನ್ (Carolynne Schloeder) ಬ್ಲಾಗಿಗರಿಗೆ ವಿಕಿಮೀಡಿಯ ಫೌಂಡೇಷನ್ ಮತ್ತು ಏರ್‌ಸೆಲ್ ಒಪ್ಪಂದದ ಬಗ್ಗೆ, ಜ್ಞಾನವನ್ನು ಸುಲಭವಾಗಿ, ಅದರಲ್ಲೂ ಭಾರತೀಯ ಭಾಷೆಗಳಲ್ಲಿ ಹಂಚಿಕೊಳ್ಳುವತ್ತ ಹೇಗೆ ಈ ಯೋಜನೆ ಸಹಕರಿಸುತ್ತಿದೆ ಎಂದು ತಿಳಿಸಿದರು. ವಿಕಿಮೀಡಿಯ ಇತ್ತೀಚೆಗೆ ಲಭ್ಯವಾಗಿಸಿರುವ ಆಂಡ್ರಾಯ್ಡ್ ಆಫ್‌ನ ಬೀಟಾ ಆವೃತ್ತಿಯಲ್ಲಿ ವಿಕಿಪೀಡಿಯ ಸಂಪಾದನೆಗೂ ಅವಕಾಶವಿರುವುದನ್ನು, ಈ ಅಪ್ಲಿಕೇಷನ್ ಕೂಡ 'ವಿಕಿಪೀಡಿಯ ಝೀರೋ' ಯೋಜನೆ ಅಡಿಯಲ್ಲಿಯೇ ಡೇಟಾ ಉಪಯೋಗಿಸಿಕೊಳ್ಳುವುದನ್ನೂ ಅವರು ವಿವರಿಸಿದರು.

ಏರ್‌ಸೆಲ್‌ ಕರ್ನಾಟಕದ ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥ ಕೆ.ಕಧಿರವನ್ ಏರ್‌ಟೆಲ್ ತನ್ನ ಡೇಟಾ ಪ್ಲಾನ್‌ಗಳ ಲಭ್ಯತೆ, ಏರ್‌ಟೆಲ್ ಹೇಗೆ ಇತರೆ ಟೆಲಿಕಾಂ ಕಂಪೆನಿಗಳಿಗಿಂತ ಭಿನ್ನ ಮತ್ತು ಅತ್ಯುತ್ತಮ ಸೇವೆಯನ್ನು (ಡೇಟಾ ಸಂಬಂಧಿತ) ನೀಡುತ್ತಿದೆ ಎಂದು ವಿವರಿಸಿದರು.

ವಿಕಿಪೀಡಿಯನ್ ರಾಧಕೃಷ್ಣ, ಭಾರತೀಯ ವಿಕಿಪೀಡಿಯ ಭಾಷೆಗಳ ಲಭ್ಯತೆ ಮತ್ತು ಅದರ ಬಳಕೆಯ ಬಗ್ಗೆ ಬೆಳಕು ಚೆಲ್ಲಿದರೆ, ಬ್ಲಾಗಿಗರ ಪ್ರಶ್ನೆಗಳಿಗೆ ಕಾರ್ಯಕ್ರಮದಲ್ಲಿ ಲಭ್ಯವಿದ್ದ ಇತರೆ ವಿಕಿಪೀಡಿಯನ್ನರಾದ ಟೀನು ಚೆರಿಯನ್, ಸುಭಾಶಿಷ್, ಪವನಜ ಹಾಗೂ ಓಂಶಿವಪ್ರಕಾಶ್ ಉತ್ತರಿಸಿದರು.

ಏರ್‌ಟೆಲ್‌ನ ಕದಿರವನ್ ಮತ್ತು ಇತರರು ತಮ್ಮ ಸೇವೆಯ ಸಮಯದಲ್ಲಿ ಕೇಳಿಬರುವ ಫಾಂಟ್ ರೆಂಡರಿಂಗ್ ತೊಂದರೆ, ಭಾರತೀಯ ಭಾಷಾ ಕೀಬೋರ್ಡ್‌ಲಭ್ಯತೆ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ಏರ್‌ಟೆಲ್ ಜೊತೆಗಿನ ಸಂಬಂಧವೃದ್ದಿ ಮತ್ತು ಇನ್ನೂ ಹೆಚ್ಚಿನ ಜನರಿಗೆ ಈ ಉಚಿತ ಸೇವೆಯ ಬಗ್ಗೆ ತಿಳಿಸುವ ಅವಶ್ಯಕತೆ, ವಿಕಿಪೀಡಿಯನ್ನರ ಜೊತೆಗೆ ಈ ಯೋಜನೆಯಲ್ಲಿ ಭಾಗವಹಿಸುವ ಅವಕಾಶಗಳ ಕುರಿತು ಅಧ್ಯಯನ ಮಾಡಲು ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳಲು ವಿಕಿಮೀಡಿಯದ ಕ್ಯಾರೋಲಿನ್ ಇತ್ತೀಚೆಗೆ ಭಾರತದ ಪ್ರವಾಸದಲ್ಲಿದ್ದು, ಅವರ ಬೆಂಗಳೂರಿನ ಪ್ರವಾಸ ಮೊಬೈಲ್‌ ಮೂಲಕ ಮುಕ್ತ ಜ್ಞಾನದ ಹಂಚಿಕೆಯ ಮುಂದಿನ ದಿನಗಳ ಬಗ್ಗೆ ಆಶಾಕಿರಣ ಮೂಡಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.




ಕೃಷ್ಣವಿವರಗಳುhttps://archive.org/details/Krishnavivaragalu00ರಾಮಾನುಜಂಬಾಳಿದರಿಲ್ಲಿhttps://archive.org/details/Ramanujan_Balidarilly001ಸುಬ್ರಹ್ಮಣ್ಯನ್ಚಂದ್ರಶೇಖರ್https://archive.org/details/Subrahmanyan_Chandrasekhar001ಕೋಪರ್ನಿಕಸ್ಕ್ರಾಂತಿhttps://archive.org/details/Copernicus_kranti001ಭವಿಷ್ಯವಾಚನ‍https://archive.org/details/Bhavishyavaachana001ಆಲ್ಬರ್ಟ್ಐನ್ಸ್‌ಸ್ಟೈನ್‌ನಮಾನವೀಯಮುಖhttps://archive.org/details/Albert_einsteinara_manaveeya_mukha001ಸೂರ್ಯನಸಾಮ್ರಾಜ್ಯ - https://archive.org/details/Suryana_saamraajya001ವಿಜ್ಞಾನಸಪ್ತರ್ಷಿಗಳು - https://archive.org/details/vijnaana_saptarshigalu001ಎನ್.ಸಿ.ಸಿ. ದಿನಗಳು - https://archive.org/details/n_c_c_dinagalu001ಬಾನಬಯಲಾಟ: ಗ್ರಹಣ - https://archive.org/details/baana_bayalaata_grahana001ಕುವೆಂಪುದರ್ಶನಸಂದರ್ಶನ - https://archive.org/details/kuvempu…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು