ಪೋಸ್ಟ್‌ಗಳು

January, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಮೂಹ ಸಂಚಯ - ಲಿಪ್ಯಂತರಣದ ಕಾರ್ಯದಲ್ಲಿ ಭಾಗವಹಿಸಲು ಸಹಾಯ

ಇಮೇಜ್
ಸಮೂಹ ಸಂಚಯ - ಲಿಪ್ಯಂತರಣದ ಕಾರ್ಯದಲ್ಲಿ ಭಾಗವಹಿಸುವುದು ಹೇಗೆಂದು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ. http://samooha.sanchaya.net

ಸಮೂಹ ಸಂಚಯದೊಂದಿಗೆ ಕೈಜೋಡಿಸಿ

ಇಮೇಜ್
ಕನ್ನಡ ಸಂಚಯದ ಹೊಸ ಯೋಜನೆ - ಸಮೂಹ ಸಂಚಯ ಸಮುದಾಯದ ಒಗ್ಗಟ್ಟಿನ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಆಗಬೇಕಿರುವ ಅನೇಕ ಕೆಲಸಗಳನ್ನು 'ಕ್ರೌಡ್ ಸೋರ್ಸಿಂಗ್' ಮೂಲಕ ಸಾಧ್ಯವಾಗಿಸುವ ವೇದಿಕೆಯಾಗಿದೆ. ಮೊದಲಿಗೆ, ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ (http://oudl.osmania.ac.in) ೨೦೦೦ಕ್ಕೂ ಹೆಚ್ಚು ಪುಸ್ತಕಗಳ ಹೆಸರು ಇಂಗ್ಲೀಷ್ ನಲ್ಲಿದ್ದು, ಇವುಗಳನ್ನು ಕನ್ನಡೀಕರಿಸುವುದರ ಜೊತೆಗೆ ಯುನಿಕೋಡ್ ಸರ್ಚ್ ಸೌಲಭ್ಯದ ಮೂಲಕ ಈ ಪುಸ್ತಕಗಳನ್ನು ಕನ್ನಡಿಗರಿಗೆ ಸುಲಭವಾಗಿ ಸಿಗುವಂತೆ ಮಾಡುವ ಆಲೋಚನೆ ಈ ಯೋಜನೆಗಿದೆ. ಕೇವಲ ಸರ್ಚ್ ಸೌಲಭ್ಯ ಕೊಡುವುದಷ್ಟೇ ಅಲ್ಲದೇ ಈ ಎಲ್ಲ ಪುಸ್ತಕಗಳಿಗೆ ಅವುಗಳದ್ದೇ ಆದ ವಿಕಿ ಪುಟಗಳನ್ನು ಕೂಡ ಕನ್ನಡ ವಿಕಿಪೀಡಿಯದಲ್ಲಿ ಹೆಣೆಯುವಂತೆ ಮಾಡುವುದು, ವಿಕಿಪೀಡಿಯದಲ್ಲಿ ಈಗಾಗಲೇ ಲಭ್ಯವಿಲ್ಲದ ಲೇಖಕ/ಲೇಖಕಿಯರ ಪುಟಗಳು, ಕನ್ನಡ ಪುಸ್ತಕ ಪ್ರಕಾಶಕರ ಪುಟಗಳನ್ನೂ ಸೃಷ್ಟಿ ಮಾಡುವುದು ಇದರಿಂದ ಸಾಧ್ಯವಾಗಲಿದೆ.


ಪುಸ್ತಕ, ಲೇಖಕ, ಪ್ರಕಾಶಕರ ಹೆಸರುಗಳನ್ನು ಕನ್ನಡಿಕರಿಸುವ/ಲಿಪ್ಯಂತರಿಸುವ ಅವಕಾಶ ನೀಡಲಾಗಿದ್ದು, ಓಸ್ಮಾನಿಯ ಯುನಿವರ್ಸಿಟಿಯಲ್ಲಿರುವ ಪುಸ್ತಕದ ಪುಟಕ್ಕೆ ಕೊಟ್ಟಿರುವ ಕೊಂಡಿ ಬಳಸಿ ಸರಿಯಾದ ಕನ್ನಡ ಹೆಸರುಗಳನ್ನು ಓದಿ ನಂತರ ನೇರವಾಗಿ ಸಮೂಹ ಸಂಚಯದಲ್ಲಿ ಟೈಪಿಸಬಹುದು. 
ಈ ಕಾರ್ಯ ಪೂರ್ಣಗೊಂಡ ನಂತರ, ಪುಸ್ತಕಗಳನ್ನು ಸುಲಭವಾಗಿ ಸರ್ಚ್ ಮಾಡುವ ವ್ಯವಸ್ಥೆ ನೀಡುವ ಜೊತೆಗೆ ವಿಕಿಪೀ…

೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ

ಹಾಸನದ ಶ್ರವಣ ಬೆಳಗೊಳದಲ್ಲಿ ಜನವರಿ ೩೧ರಿಂದ ೩ರವರೆಗೆ ನೆಡೆಯುತ್ತಿರುವ '೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'ದ ಆಹ್ವಾನ ಪತ್ರಿಕೆ ಇಲ್ಲಿದೆ.

ಫೆಬ್ರವರಿ ೧ ರಂದು ನೆಡೆಯುವ 'ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ' ಗೋಷ್ಠಿಯಲ್ಲಿ ನಾನು 'ಭಾಷೆಯ ಉಳಿವಿಗೆ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು - ವಚನ ಸಂಚಯ ಮತ್ತು ಇತರೆ ಯೋಜನೆಗಳು' ಎಂಬ ವಿಷಯದ ಬಗ್ಗೆ ಮಾತನಾಡಲಿದ್ದೇನೆ.