ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪುಸ್ತಕ: ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ - ವಿಜ್ಞಾನ ತಂತ್ರಜ್ಞಾನ

ಕನ್ನಡ ಸಾಹಿತ್ಯ ಪರಿಷತ್ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಹೊರತರುತ್ತಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೆಯದಾದ "ವಿಜ್ಞಾನ ತಂತ್ರಜ್ಞಾನ" ಸಂಪುಟ ಶ್ರವಣ ಬೆಳಗೊಳದಲ್ಲಿ ನೆಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಶ್ರೀ ಟಿ.ಆರ್. ಅನಂತರಾಮು ಸಂಪಾದಕತ್ವದಲ್ಲಿ ಅಚ್ಚುಕಟ್ಟಾಗಿ ಹೊರಬಂದಿರುವ ಈ ಪುಸ್ತಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದು ಈ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುತ್ತಿರುವ ಅನೇಕ ಲೇಖಕರ ಬರಹಗಳನ್ನು ಒಳಗೊಂಡಿದ್ದು, ೭೦೦ ಪುಟಗಳಲ್ಲಿ ೪೦೦ಕ್ಕೂ ಹೆಚ್ಚು ಚಿತ್ರಗಳಿಂದ ಕಣ್ಮನ ಸೆಳೆಯುವಂತಿದೆ.

ಬೇಳೂರು ಸುದರ್ಶನ, ಡಾ. ಯು.ಬಿ  ವೈ ಸಿ ಕಮಲ, ಟಿ.ಜಿ ಶ್ರೀನಿಧಿ, ಅವಿನಾಶ್ ಬಿ, ಜಿ.ಎನ್ ನರಸಿಂಹ ಮೂರ್ತಿ ಮುಂತಾದವರ ಲೇಖನಗಳ ಜೊತೆಗೆ, 'ವಿಕಿಪೀಡಿಯ' ಹಾಗೂ 'ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಚಳುವಳಿ - ಹಿನ್ನೆಲೆ-ಸ್ವರೂಪ-ಪ್ರಸಕ್ತ ಪರಿಸ್ಥಿತಿ' ಬಗ್ಗೆ ನನದೂ ಎರಡು ಲೇಖನಗಳು ಸ್ವತಂತ್ರ ಸಂಸ್ಕೃತಿಯ (Free Culture) ಇತಿಹಾಸ ಹಾಗೂ ಪ್ರಸಕ್ತ ಪರಿಸ್ಥಿತಿಯ ಮಾಹಿತಿಗಳನ್ನು ಹಂಚಿಕೊಳ್ಳುತ್ತವೆ. 
ಚಳುವಳಿಗಳ ಇತಿಹಾಸದ ಜೊತೆಗೆ ಕನ್ನಡ ಮತ್ತು ತಂತ್ರಜ್ಞಾನದ ಅಭಿವೃದ್ದಿಯಲ್ಲಿ ನೆಡೆದಿರುವ ಕೆಲಸಗಳ ಬಗ್ಗೆ ಈ ಲೇಖನಗಳಲ್ಲಿ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇನೆ. ಮಾಹಿತಿಯನ್ನು ಒದಗಿಸಲು ಮೊದಲು ಮಿತಿಯನ…