ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

March, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator)

ಕನ್ನಡ ವಿಕಿಪೀಡಿಯಕ್ಕೆ (http://kn.wikipedia.org) ಲೇಖನಗಳನ್ನು ಸೇರಿಸಿ ಎಂದಾಗ ತಕ್ಷಣ ಯಾವ ವಿಷಯ ಸೇರಿಸಬಹುದು ಜೊತೆಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ. ಈಗಾಗಲೇ ಕನ್ನಡಲ್ಲೇ ಲಭ್ಯವಾಗಿಸಿರುವ ವಿಕಿ ಸಂಪಾದನೆಯ ಮಾಹಿತಿ, ವಿಡಿಯೋ ಇತ್ಯಾದಿಗಳನ್ನು ತೋರಿಸಿದಾಗ ಕೂಡ ನಮ್ಮಿಂದ ಇದು ಸಾಧವೇ ಎನ್ನುವ ಪ್ರಶ್ನೆಯೊಂದಿಗೆ ಅನೇಕರು ವಿಕಿಪೀಡಿಯದಿಂದ ದೂರ ಉಳಿಯುವುದೇ ಹೆಚ್ಚು. ಇನ್ನು ಕೆಲವರು ಮುಂದುವರೆದು ಸಂಪಾದನೆಗೆ ಕೈ ಹಾಕಿದರೂ, ವಿಕಿ ತಾಂತ್ರಿಕ ಭಾಷೆ ಕೆಲವೊಮ್ಮೆ ಅವರನ್ನೂ ದಿಕ್ಕುತಪ್ಪಿಸುವುದುಂಟು.
ವಿಕಿಪೀಡಿಯವನ್ನು ಸುಭದ್ರವಾಗಿ ಮುನ್ನೆಡೆಸುತ್ತಿರುವ ಲಾಭರಹಿತ ಸಂಸ್ಥೆ ವಿಕಿಮೀಡಿಯ ಫೌಂಡೇಷನ್ ಇಂತಹ ತೊಂದರೆಗಳನ್ನು ನಿವಾರಿಸಲು ತನ್ನ ತಾಂತ್ರಿಕ ಅಭಿವೃದ್ದಿ ತಂಡದ ಜೊತೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದೆ. ಸುಲಭ ವಿಕಿ ಸಂಪಾದನೆಗೆ ಸಹಾಯಕವಾಗುವಂತೆ Visual Editor ರಚಿಸಲಾಗುತ್ತಿದ್ದು, ಇದನ್ನು ಈಗಾಗಲೇ ಬೀಟಾ ಆವೃತ್ತಿಯ ಮೂಲಕ ಕನ್ನಡ ವಿಕಿಪೀಡಿಯದಲ್ಲಿ ಬಳಸಿ ನೋಡಬಹುದು.
ವಿಕಿಪೀಡಿಯ ಸಂಪಾದನೆ ಮಾಡುತ್ತಿರುವ ಹಾಗೂ ಮಾಡಲು ಮುಂದಾಗುವವರಿಗೆ ಈಗಾಗಲೇ ಇಂಗ್ಲೀಷ್ ಅಥವಾ ಇತರೆ ಭಾಷೆಗಳಲ್ಲಿ ತಮ್ಮ ಇಷ್ಟದ, ಇಚ್ಛೆಯ ಮಾಹಿತಿ ಇರುವುದು ಮತ್ತು ಅದನ್ನು ಯಥಾವತ್ತಾಗಿ ಕನ್ನಡ ವಿಕಿಪೀಡಿಯಕ್ಕೆ ಹಾಕುವುದು ಸುಲಭದ ಕೆಲಸ. ಈ ಸಂಪಾದನೆಯನ್ನು ಪೂರ್ಣ ಮಾಡದೆ, ಅರ್ಧ ಇಂಗ್ಲೀಷ್ ಮಾಹಿತಿಯನ್ನು ಹಾಗೆಯೇ ಬಿಟ್ಟು ಹೋಗಿರು…