ಕನ್ನಡ ವಿಕಿಪೀಡಿಯದಲ್ಲಿ ಸಿನೆಮಾ/ಚಲನಚಿತ್ರಕ್ಕೆ ಸಂಬಂಧಿಸಿದಂತೆ ಒಟ್ಟಾರೆ ೧೭೦೦ಕ್ಕೂ ಹೆಚ್ಚು ಪುಟಗಳಿವೆ. ಇದುವರೆಗೆ ಈ ಪುಟಗಳಲ್ಲಿ ಬಳಸುತ್ತಿದ್ದ ಇನ್ಫೋಬಾಕ್ಸ್ ಸಾಮಾನ್ಯ ಟೇಬಲ್/ಕೋಷ್ಠಕದ ಮಾದರಿ ಇದ್ದು, ಮಾಹಿತಿ ಇಲ್ಲದ ಸಾಲುಗಳೂ ಕಾಣಿಸಿಕೊಳ್ಳುತ್ತಿದ್ದವು. ಅದರ ಒಂದು ನೋಟ ನಿಮಗೆ ಹೀಗೆ ಕಂಡಿದ್ದಿರಬಹುದು. ಇನ್ಫೋಬಾಕ್ಸ್ಗೊಂದು ಹೊಸ ನೋಟ ಕೊಡುವ ನಿಟ್ಟಿನಲ್ಲಿ ನಾನು Infobox_ಚಲನಚಿತ್ರ ಟೆಂಪ್ಲೇಟನ್ನು ತೆರೆದು ನೋಡಿದಾಗ ಇದಾಗಲೇ ೧೭೦೦ ಕ್ಕೂ ಹೆಚ್ಚು ಪುಟದಲ್ಲಿ ಬಳಸುತ್ತಿರುವುದು ಗಮನಕ್ಕೆ ಬಂತು. ನಾನು ಇಂಗ್ಲೀಷ್ ವಿಕಿಯಿಂದ ಆಮದು ಮಾಡಿದ್ದ Infobox_film ಟೆಂಪ್ಲೇಟನ್ನು ಕನ್ನಡೀಕರಿಸಿದರೂ, ಅದನ್ನು ಮತ್ತೆ ಈ ಎಲ್ಲ ಪುಟಗಳಲ್ಲಿ ಸೇರಿಸಲು ಕೂತಿದ್ದರೆ, ಅದೇ ತಿಂಗಳುಗಟ್ಟಲೆ ಕೆಲಸವಾಗುತ್ತಿತ್ತು. ನೆನ್ನೆ ಹೊಳೆದ ಯೋಚನೆ ಇಂದಾಗಿ, ಹೊಸ ಟೆಂಪ್ಲೇಟನ್ನು ಹಳೆಯ ಟೆಂಪ್ಲೇಟಿನ ಸ್ಥಳದಲ್ಲಿ ಬರುವಂತೆ ಮಾಡುವ ನಿಟ್ಟಿನಲ್ಲಿ ಕೈಗೊಂಡ ಹ್ಯಾಕ್ ಸಕ್ಷಮವಾಗಿ ಕೆಲಸ ಮಾಡಲು ಆರಂಭಿಸಿತು. ಈಗ ಸಿನೆಮಾದ ಎಲ್ಲ ಪುಟಗಳಲ್ಲಿನ ಇನ್ಪ್ಗೋಬಾಕ್ಸ್ಗಳು ಈಗ ಈ ಕೆಳಕಂಡಂತೆ ಕಾಣುತ್ತವೆ. ಅವಶ್ಯವಿಲ್ಲದ/ಮಾಹಿತಿ ಇಲ್ಲದ ಸಾಲುಗಳು ಕಂಡುಬರುವುದಿಲ್ಲ. ಈ ಹಿಂದಿನಂತೆ ಟೆಂಪ್ಲೇಟನ್ನು ಪುಟಕ್ಕೆ ಸೇರಿಸಿದರೂ, ಟೆಂಪ್ಲೇಟು ಕೆಲಸ ಮಾಡುತ್ತದೆ. ಅಥವಾ ಈ ಕೆಳಕಂಡಂತೆ ಇಂಗ್ಲೀಷ್ ಟೆಂಪ್ಲೇಟು ( Template:Infobox_film ) ಮಾದರಿಯಲ್ಲೇ ಇನ್ಫೋಬಾಕ