ವಿಷಯಕ್ಕೆ ಹೋಗಿ

ಕ್ರಿಯೇಟೀವ್ ಕಾಮನ್ಸ್, ಸಮೂಹ ಹಾಗೂ ಪುಸ್ತಕ ಸಂಚಯದ ಜೊತೆಗೆ ನಿರಂಜನರ ಪುಸ್ತಕಗಳು

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ ಎಂದು ೨೦೧೪ರ ನವೆಂಬರ್‌ನಲ್ಲಿ ತೇಜಸ್ವಿನಿ ನಿರಂಜನರು ೫೫ ಪುಸ್ತಕಗಳನ್ನು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿಯಲ್ಲಿ ಬಿಡುಗಡೆ ಮಾಡುತ್ತಿರುವ ಕಾರ್ಯಕ್ರಮದ ಬಗ್ಗೆ ಬರೆದಿದ್ದೆ. ನಂತರದ ದಿನಗಳಲ್ಲಿ ನಿರಂಜನರ ಕೃತಿಗಳನ್ನು ಹುಡುಕುವ, ಅವನ್ನು ಡಿಜಿಟೈಸ್ ಮಾಡುವ ಅನೇಕ ಇಮೇಲ್‌ಗಳನ್ನು ಕನ್ನಡ ವಿಕಿಪೀಡಿಯ ಸಮುದಾಯದ ಅನೇಕರ ಮಧ್ಯೆ ಹಂಚಿಕೊಳ್ಳಲಾಗಿತ್ತು. ತೇಜಸ್ವಿನಿಯವರೊಡನೆ ಅವರ ಬಳಿಯಿರುವ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಕೆಲಸದ ಬಗ್ಗೆಯೂ ಚಿಂತಿಸಲಾಗುತ್ತಿತ್ತು. ಒಂದೆರೆಡು ವಾರಗಳ ಹಿಂದೆ ಚಿರಸ್ಮರಣೆ ಮತ್ತು ಕಲ್ಯಾಣ ಸ್ವಾಮಿ ಪುಸ್ತಕಗಳನ್ನು ಜಯನಗರದ ಸಪ್ನಬುಕ್ಸ್ ಪುಸ್ತಕಮಳಿಗೆಯಿಂದ ಕೊಂಡು ತಂದಿದ್ದೆ ಕೂಡ. ಕೆಲವರನ್ನು ನಿರಂಜನರ ಪುಸ್ತಕಗಳ ಪ್ರತಿ ಇದ್ದಲ್ಲಿ ತಿಳಿಸಿ ಎಂದೂ ಕೇಳಿದ್ದೆ. 
ನಾಲ್ಕು ದಿನಗಳ ಕೆಳಗೆ ಇಮೇಲ್ ಮಾಡಿದ ಶ್ರೀನಿಧಿ ಟಿ.ಜಿ. ನಮ್ಮ ಪುಸ್ತಕ ಸಂಚಯದಲ್ಲೇ ಲಭ್ಯವಿದ್ಧ ೬ ನಿರಂಜನರ ಪುಸ್ತಕಗಳ ಬಗ್ಗೆ ತಿಳಿಸಿದ್ದರು. ಈ ಇಮೇಲ್ ನೋಡಿದ ತಕ್ಷಣ "ಕಂಕುಳಲ್ಲೇ ಮಗು ಹಿಡಿದು ಊರೆಲ್ಲ ಹುಡುಕಿದರಂತೆ" ಎನ್ನುವ ಮಾತು ತಕ್ಷಣ ನೆನಪಾಯಿತು. ನಿರಂಜನ ಎಂದು ಪುಸ್ತಕಸಂಚಯದಲ್ಲಿ ಹುಡುಕಿದಾಕ್ಷಣ ಸಿಕ್ಕ ಪುಸ್ತಕಗಳ ಪಟ್ಟಿ ಈ ರೀತಿ ಕಂಡು ಬಂದಿತು. ಈ ಎಲ್ಲ ಪುಸ್ತಕಗಳು ಓಸ್ಮಾನಿಯ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿಯಲ್ಲಿ ಇದ್ದದ್ದು ಇನ್ನೊಂದು ವಿಶೇಷ. 
ನಮ್ಮ ಸಮೂಹ ಸಂಚಯ ಯೋಜನೆಯ ಮೂಲಕ ಓಸ್ಮಾನಿಯ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ ಹಾಗೂ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಲಭ್ಯವಿರುವ ಸ್ಕ್ಯಾನ್ ಮಾಡಿದ ಪುಸ್ತಕಗಳ ಹೆಸರು, ಅವುಗಳ ಪ್ರಕಾಶಕರು ಹಾಗೂ ಲೇಖಕರ ಮಾಹಿತಿಗಳನ್ನು ಕನ್ನಡೀಕರಿಸುವ ಕೆಲಸಕ್ಕೆ ಸಮುದಾಯದ ಸಹಾಯ ಪಡೆದುಕೊಂಡಿದ್ದೆವು. ಈಗಲೂ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಮತ್ತಷ್ಟು ಪುಸ್ತಕಗಳ ಹೆಸರಿನ ಕನ್ನಡೀಕರಣ ಇಲ್ಲಿ ನೆಡೆದಿದೆ. 
ನಿರಂಜನರ ಕೃತಿಗಳನ್ನು ವಿಕಿಮೀಡಿಯ ಕಾಮನ್ಸ್ಗೆ ಸೇರಿಸಲಾಗಿದ್ದು, ಇವುಗಳನ್ನು ಕನ್ನಡ ವಿಕಿಸೋರ್ಸ್‌ನಲ್ಲಿ ಡಿಜಿಟಲೀಕರಣ ಮಾಡಲು ಅನುವು ಮಾಡಿಕೊಡಲಾಗಿದೆ.  ಆಸಕ್ತರು ಈ ಕೆಲಸದಲ್ಲಿ ನಮ್ಮೊಡನೆ ಕೈ ಜೋಡಿಸಬಹುದಾಗಿದೆ. 
ವಿಮೋಚನೆ (1953)  ಪುಸ್ತಕವನ್ನು ಡಿಜಿಟಲೀಕರಿಸಲು ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಕೆಳಕಂಡ ಚಿತ್ರದಲ್ಲಿರುವಂತೆ ನಿಮಗೆ ಪುಸ್ತಕ ಕಂಡು ಬರುತ್ತದೆ. 
ಕನ್ನಡ ವಿಕಿಸೋರ್ಸ್‌ಗೆ ಲಾಗಿನ್ ಆಗಿ ಕೆಂಪುಬಣ್ಣದ ಸಂಖ್ಯೆಗಳ ಮೇಲೆ ಕ್ಲಿಕ್ಕಿಸಿ.

ನಂತರ ಬಲಬದಿಯಲ್ಲಿ ಕಾಣುವ ಪುಸ್ತಕದ ಪುಟವನ್ನು ಎಡಬದಿಯ ಖಾಲಿ ಜಾಗದಲ್ಲಿ ತುಂಬಿ. ಪುಟದ ಕೆಳಗೆ ಕಾಣುವ ಬಣ್ಣದ ಪುಟ ಸ್ಥಿತಿಯ ಮಾಹಿತಿಯಲ್ಲಿ ಅನ್ವಯವಾಗುವುದನ್ನು ಆಯ್ಕೆ ಮಾಡಿಕೊಂಡು, ಪುಟವನ್ನು ಉಳಿಸಿ. (    ಪುಟದಲ್ಲಿನ ಮಾಹಿತಿ ಸರಿಯಾಗಿದ್ದು, ಪರಿಶೀಲನೆ ಮಾಡಲಾಗಿದ್ದಲ್ಲಿ ಕಡೆಯ ಹಳದಿ ಬಣ್ಣದ ಗುಂಡಿಯನ್ನು ಆಯ್ಕೆ ಮಾಡಿಕೊಂಡು, ಪುಟ ಉಳಿಸಬೇಕು.

ಕನ್ನಡ ಪುಸ್ತಕಗಳನ್ನು ಓದುವ ಜೊತೆಗೆ, ಅವುಗಳ ಡಿಜಿಟಲೀಕರಣ, ಪರಿಶೀಲನೆ ಇತ್ಯಾದಿಗಳ ಮೂಲಕ ಭಾಷಾ ಸಂಶೋಧನೆಗೆ ನಿಮ್ಮ ಕೊಡುಗೆ ನೀಡಿ. ಕನ್ನಡ ಸಂಚಯ, ಸಮೂಹ ಸಂಚಯ, ಪುಸ್ತಕ ಸಂಚಯ, ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಈ ಕೆಲಸ ಮಾಡಲು ಸಾಧ್ಯವಿರುವ ಕೆಲವು ವೇದಿಕೆಗಳಷ್ತೇ. ಈ ಕೆಲಸ ಸಾಧ್ಯವಾಗಿಸುವುದು ಕನ್ನಡಿಗರ ಕೈಯಲ್ಲಿದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.
ಕೃಷ್ಣವಿವರಗಳುhttps://archive.org/details/Krishnavivaragalu00ರಾಮಾನುಜಂಬಾಳಿದರಿಲ್ಲಿhttps://archive.org/details/Ramanujan_Balidarilly001ಸುಬ್ರಹ್ಮಣ್ಯನ್ಚಂದ್ರಶೇಖರ್https://archive.org/details/Subrahmanyan_Chandrasekhar001ಕೋಪರ್ನಿಕಸ್ಕ್ರಾಂತಿhttps://archive.org/details/Copernicus_kranti001ಭವಿಷ್ಯವಾಚನ‍https://archive.org/details/Bhavishyavaachana001ಆಲ್ಬರ್ಟ್ಐನ್ಸ್‌ಸ್ಟೈನ್‌ನಮಾನವೀಯಮುಖhttps://archive.org/details/Albert_einsteinara_manaveeya_mukha001ಸೂರ್ಯನಸಾಮ್ರಾಜ್ಯ - https://archive.org/details/Suryana_saamraajya001ವಿಜ್ಞಾನಸಪ್ತರ್ಷಿಗಳು - https://archive.org/details/vijnaana_saptarshigalu001ಎನ್.ಸಿ.ಸಿ. ದಿನಗಳು - https://archive.org/details/n_c_c_dinagalu001ಬಾನಬಯಲಾಟ: ಗ್ರಹಣ - https://archive.org/details/baana_bayalaata_grahana001ಕುವೆಂಪುದರ್ಶನಸಂದರ್ಶನ - https://archive.org/details/kuvempu…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು