ವಿಷಯಕ್ಕೆ ಹೋಗಿ

ಬೀದರ್ ಫೋಟೋಗ್ರಫಿ ಸೊಸೈಟಿಯ ಜೊತೆ ವಿಕಿಪೀಡಿಯ ಸುತ್ತ

ವಾರಾಂತ್ಯದಲ್ಲಿ ಬೀದರ್‌ನಲ್ಲಿದ್ದಾಗ ಅಲ್ಲಿನ ಯುವ ಫೋಟೋಗ್ರಫಿ ಸೊಸೈಟಿಯ ಸದಸ್ಯರೊಡನೆ ಮಾತನಾಡುವ ಅವಕಾಶ ಸಿಕ್ಕಿತು. ಅವರಲ್ಲಿ ಕೆಲವರು ಈಗಾಗಲೇ ವಿಕಿಪೀಡಿಯ, ವಿಕಿಮೀಡಿಯ ಕಾಮನ್ಸ್‌ಗೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವುದನ್ನು ಕೇಳಿ ಖುಷಿಯೂ ಆಯಿತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಬೀದರ್ ವಿಕಿಪೀಡಿಯ ಗುಂಪಿನಲ್ಲಿ ಒಂದಾಗುವಂತೆ ಹೇಳುತ್ತಿದ್ದಾಗ ರಿಷಿಕೇಷ್ ಬಹಾದ್ದೂರ್ ದೇಸಾಯಿ ಅವರು ತೆಗೆದ ಚಿತ್ರ. Wikipedians discussing with members of Bidar photography society ಬೀದರ್ ಇತಿಹಾಸ, ಕಲೆ, ಪರಿಸರ ಇತ್ಯಾದಿಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ವಿಕಿ ಕಾಮನ್ಸ್‌ನಲ್ಲಿ ಈ ತಂಡ ಇನ್ಮುಂದೆ ತಮ್ಮ ಕೊಡುಗೆಗಳನ್ನು ನೀಡಲಿದೆ. ಪ್ರಜಾವಾಣಿಯಲ್ಲಿ ಭಾನುವಾರ ೬, ಡಿಸೆಂಬರ್ ೨೦೧೫ ರಂದು ಪ್ರಕಟಗೊಂಡ ಲೇಖನ ‘ಕನ್ನಡದಲ್ಲೇ ಮಾಹಿತಿ ಹಂಚಿಕೊಳ್ಳಿ’ Sun, 12/06/2015 - 15:29 ಬೀದರ್: ಪ್ರತಿಯೊಬ್ಬರು ಇಂದು ತುರ್ತು ಹಾಗೂ ಅಗತ್ಯ ಮಾಹಿತಿಗೆ ವಿಕಿಪಿಡಿಯಾದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಲಭಿಸುವಂತಾಗಲು ಸ್ಥಳೀಯರು ವಿಕಿಪಿಡಿಯಾದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂದು ವಿಕಿಪಿಡಿಯಾದ ಸಂಚಾಲಕ ಓಂಶಿವಪ್ರಕಾಶ ಹೇಳಿದರು. ಶನಿವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಹಿಂದಿ ಹಾಗೂ ಮಳಿಯಾಳಿಯಲ್ಲಿ ಮಾತ್ರ ಹೆಚ್ಚು ಮಾಹಿತಿ ಲಭ್ಯ ಇದೆ. ಕನ್ನಡದಲ್ಲೂ ಎಲ್ಲ ಬಗೆಯ ಹಾಗೂ ಹೆಚ್ಚು ಹೆಚ್ಚು ಮಾಹಿತಿ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಇನ್ನು ಸಾಕಷ್ಟು ಕಾರ್ಯ ಆಗಬೇಕಿದೆ. ಅಂಗೈಯಲ್ಲಿ ಮಾತೃ ಭಾಷೆಯಲ್ಲೇ ಎಲ್ಲ ಬಗೆಯ ಮಾಹಿತಿ ದೊರೆಯುವಂತಾಗಲು ಸ್ಥಳೀಯರು ಸಹಕಾರ ನೀಡಬೇಕು ಎಂದು ಹೇಳಿದರು. ವಿಕಿಪಿಡಿಯಾದಲ್ಲಿ ಎಲ್ಲ ಸಂದರ್ಭದಲ್ಲೂ ಹೆಚ್ಚಿನ ಮಾಹಿತಿ ಸೇರಿಸುವ, ತಪ್ಪು ಮಾಹಿತಿ ತೆಗೆದು ಹಾಕುವ ಹಾಗೂ ವ್ಯಾಕರಣವನ್ನೂ ಸರಿಪಡಿಸುವ ಅವಕಾಶ ಇರುತ್ತದೆ. ಒಂದೇ ವಿಷಯದ ಬಗೆಗೆ ಹೆಚ್ಚು ಜನರು ಮಾಹಿತಿ ಹಂಚಿಕೊಳ್ಳುವುದರಿಂದ ಅಪ್‌ಲೋಡ್‌ ಮಾಡುವುದರಿಂದ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ತಿಳಿಸಿದರು. ವನ್ಯಜೀವಿ ಛಾಯಾಗ್ರಾಹಕರು ಸಹ ಅಪರೂಪದ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ತಮ್ಮ ಹೆಸರಿನಲ್ಲೇ ವಿಕಿಪಿಡಿಯಾದಲ್ಲಿ ಅಪ್‌ಲೋಡ್‌ ಮಾಡಬಹುದು. ವಿಕಿಪಿಡಿಯಾ ವೀಕ್ಷಿಸುವ ಪಕ್ಷಿತಜ್ಞರು ಅವುಗಳ ಬಗೆಗೆ ಉಲ್ಲೇಖಿಸುವುದರಿಂದ ಅಲ್ಲಿ ಮಾಹಿತಿ ಹಂಚಿಕೊಳ್ಳುವ ಸಮೂಹವೇ ನಿರ್ಮಾಣವಾಗುತ್ತದೆ. ಎಲ್ಲ ವಯೋಮಾನವದವರೂ ಪಕ್ಷಿಗಳ ಬಗೆಗೆ ಚಿತ್ರ ಸಹಿತ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.
ಕೃಷ್ಣವಿವರಗಳುhttps://archive.org/details/Krishnavivaragalu00ರಾಮಾನುಜಂಬಾಳಿದರಿಲ್ಲಿhttps://archive.org/details/Ramanujan_Balidarilly001ಸುಬ್ರಹ್ಮಣ್ಯನ್ಚಂದ್ರಶೇಖರ್https://archive.org/details/Subrahmanyan_Chandrasekhar001ಕೋಪರ್ನಿಕಸ್ಕ್ರಾಂತಿhttps://archive.org/details/Copernicus_kranti001ಭವಿಷ್ಯವಾಚನ‍https://archive.org/details/Bhavishyavaachana001ಆಲ್ಬರ್ಟ್ಐನ್ಸ್‌ಸ್ಟೈನ್‌ನಮಾನವೀಯಮುಖhttps://archive.org/details/Albert_einsteinara_manaveeya_mukha001ಸೂರ್ಯನಸಾಮ್ರಾಜ್ಯ - https://archive.org/details/Suryana_saamraajya001ವಿಜ್ಞಾನಸಪ್ತರ್ಷಿಗಳು - https://archive.org/details/vijnaana_saptarshigalu001ಎನ್.ಸಿ.ಸಿ. ದಿನಗಳು - https://archive.org/details/n_c_c_dinagalu001ಬಾನಬಯಲಾಟ: ಗ್ರಹಣ - https://archive.org/details/baana_bayalaata_grahana001ಕುವೆಂಪುದರ್ಶನಸಂದರ್ಶನ - https://archive.org/details/kuvempu…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು