ವಿಷಯಕ್ಕೆ ಹೋಗಿ

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು

ಸೆಂಪ್ಟೆಂಬರ್ ೧೭, ೨೦೧೯‍ 
ಕುತೂಹಲಿ - ಸುದ್ಧಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ‍ (ಸಂಚಿಕೆ ೧ | ಸಂಪುಟ ೧ | ಸೆಪ್ಟೆಂಬರ್ ೨೦೧೯)


ಕನ್ನಡದಲ್ಲಿ ಪ್ರಕಟವಾಗಿರುವ ಹಳೆಯ ಪತ್ರಿಕೆಗಳು, ಪುಸ್ತಕಗಳು, ಈಗಾಗಲೇ ಅನ್ಲೈನ್ ಇರುವ ಪುಸ್ತಕಗಳಲ್ಲಿರುವ ಅಮೂಲ್ಯ ಮಾಹಿತಿಗಳನ್ನು ಗೂಗಲ್ ಸರ್ಚ್ ಮಾದರಿಯಲ್ಲೇ ಹುಡುಕಿ ತೆಗೆಯಲು ಸಾಧ್ಯವಾದರೆ ಹೇಗಿರುತ್ತದೆ ಒಮ್ಮೆ ಊಹಿಸಿಕೊಳ್ಳಿ. ಇದನ್ನು ಕೇವಲ ಊಹೆಯಷ್ಟೇ ಆಗಿ ಉಳಿದಿಲ್ಲ.  ಇಂದು ನೀವಿದನ್ನು ತಾಂತ್ರಿಕವಾಗಿ ಬಳಸಿ ನೋಡಬಹುದು ಕೂಡ. ಇದನ್ನು ಸಾಧ್ಯವಾಗಿಸಿರುವುದೇ  ಆಪ್ಟಿಕಲ್ ಕ್ಯಾರೆಕ್ಟರ್ ರೆಕಾಗ್ನಿಷನ್ ಅಥವಾ . ಸಿ. ಆರ್(‍Optical Character Recognition / OCR) ತಂತ್ರಜ್ಞಾನ

ಚಿತ್ರರೂಪದಲ್ಲಿರುವ ಅಕ್ಷರಗಳ ಗುಣಲಕ್ಷಣಗಳನ್ನುಗುರುತಿಸಿ, ಅವುಗಳನ್ನು ಆಯಾ ಭಾಷೆಯ ಯುನಿಕೋಡ್ ಅಕ್ಷರಗಳಲ್ಲಿ ಮರುರೂಪಿಸುವುದೇ ತಂತ್ರಜ್ಞಾನದ ಮುಖ್ಯ ಕೆಲಸ. ‍ಕನ್ನಡಕ್ಕೆ ತಂತ್ರಜ್ಞಾನವನ್ನು ಒದಗಿಸಿಕೊಡವಲ್ಲಿ ಮುಂಚೂಣಿಯಲ್ಲಿರುವುದು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶವಾಗಿರುವ ಟೆಸೆರಾಕ್ಟ್ (Tesseract).  ಟೆಸೆರಾಕ್ಟ್ ಯೋಜನಾ ಪುಟ ಇಲ್ಲಿದೆ - https://github.com/tesseract-ocr/tesseract ‍. ಭಾರತೀಯ ವಿಜ್ಞಾನ ಸಂಸ್ಥೆ, ಕೇಂದ್ರ ಸರಕಾರದ ಸಿ-ಡ್ಯಾಕ್‌ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹಲವು ಖಾಸಗಿ ಕಂಪೆನಿಗಳೂ ಪ್ರಯತ್ನಿಸುತ್ತಿವೆ. ಇವುಗಳಲ್ಲಿ ಸುಲಭವಾಗಿ ಎಲ್ಲರಿಗೂ ದಕ್ಕುವಂತೆ ಇರುವುದು ಟೆಸೆರಾಕ್ಟ್.

ಅಂತರ್ಜಾಲದಲ್ಲಿ ಇರುವ ಯಾವುದೋ ಒಂದು ಪಿ.ಡಿ.‌ಎಫ್ (P‌DF) ಅಥವಾ ಚಿತ್ರಗಳನ್ನು ಗೂಗಲ್ ಡಾಕ್ಸ್ (Google Docs) ಮೂಲಕ ತೆರೆದಾಗ ಪಿ.ಡಿ.‌ಎಫ್/ಚಿತ್ರಗಳಲ್ಲಿದ್ದ ಅಕ್ಷರಗಳನ್ನು ಯುನಿಕೋಡ್‌ಗೆ ಪರಿವರ್ತಿಸಿ ಕೊಡಲಾಗುತ್ತದೆ. ಇದಕ್ಕೆ ಕಾರಣ ಗೂಗಲ್ ತನ್ನ ಗೂಗಲ್ ಡ್ರೈವ್ ಸಂಬಂಧಿತ ತಂತ್ರಾಂಶಗಳಲ್ಲಿ ತನ್ನ .ಸಿ.‌ಆರ್ ತಂತ್ರಜ್ಞಾನವಾದ ಗೂಗಲ್ ವಿಷನ್ ಅನ್ನು ಬಳಸುತ್ತಿರುವುದು. ಮೇಲೆ ತಿಳಿಸಿದ ಟೆಸೆರಾಕ್ಟ್ ತಂತ್ರಜ್ಞಾನದ ಸೃಷ್ಟಿಕರ್ತ ರೇ ಸ್ಮಿತ್, ಗೂಗಲ್ ವಿಷನ್ ಯೋಜನೆಯ ಮುಂಚೂಣಿ ಡೆವೆಲಪರ್. ಹೀಗಾಗಿ ಟೆಸೆರಾಕ್ಟ್ .ಸಿ.‌ಆರ್ ಗೂಗಲ್‌ನಲ್ಲಿ ತಂತ್ರಾಂಶದ ಸುತ್ತ ನೆಡೆಯುತ್ತಿರುವ ಅಭಿವೃದ್ಧಿಗಳ ಪ್ರಯೋಜನವನ್ನು ಮತ್ತೆ ಹಿಂತಿರುಗಿ ಸಾರ್ವಜನಿಕವಾಗಿಯೂ ಲಭ್ಯವಾಗುವಂತೆ ಮಾಡುತ್ತಿದೆ. ಟೆಸೆರಾಕ್ಟ್ ಕನ್ನಡದ ೨೫ ಫಾಂಟ್‌ಗಳ ಮೇಲೆ ತರಬೇತಿ ಹೊಂದಿದ್ದು, ಅದರ ಟೆಸ್‌ಡೇಟಾ(ತರಬೇತಿ ದತ್ತಾಂಶ) ಬಳಕೆಗೆ ಲಭ್ಯವಿದೆ. ಇದರ ಜೊತೆಗೆ ಟೆಸೆರಾಕ್ಟ್ ಯಾಂತ್ರಿಕ ತರಬೇತಿ  (Machine Learning)  ಸಾಮರ್ಥ್ಯವನ್ನೂ ಹೊಂದಿದ್ದು ಆವೃತ್ತಿ . ರಿಂದ ಈಚೆಗೆಅನೇಕ ಭಾಷೆಗಳ ಅಕ್ಷರ ಗುರುತು ಹಿಡಿಯುವಿಕೆಯನ್ನು ಸುಲಭ ಸಾಧ್ಯವಾಗಿಸಿದೆ. ‍
ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಶಕ್ತಿ ಸಾಮಾನ್ಯನಿಗೂ ಉನ್ನತ ತಂತ್ರಜ್ಞಾನವನ್ನು ಬಳಸಿ, ತನ್ನ ಭಾಷೆಗೂ ಅಳವಡಿಸಿಕೊಳ್ಳಲು ಮುಂದಾಗುವಂತೆ ಪ್ರೇರೇಪಿಸುತ್ತದೆ

ಟೆಸೆರಾಕ್ಟ್‌ ಅನ್ನು ಕನ್ನಡದ ಕಡತಗಳನ್ನು .ಸಿ.‌ಆರ್ಮಾಡಲು ಬಹಳ ಸುಲಭವಾಗಿ ಬಳಸಬಹುದು. ಲಿನಕ್ಸ್ ತಂತ್ರಾಂಶ ಬಳಸಲು ಬರುವವರಿಗೆ ಟೆಸೆರಾಕ್ಟ್‌ ನಿರ್ದೇಶಗಳನ್ನು ಬಳಸುವುದು ಇನ್ನೂ ಸುಲಭ. ಜೊತೆಗೆ ಸುಲಭವಾಗಿ ಪಿ.ಡಿ.ಎಫ್ , ಚಿತ್ರಗಳು ಇತ್ಯಾದಿಗಳನ್ನು ಯುನಿಕೋಡ್ ಪಠ್ಯವಾಗಿ ಬದಲಾಯಿಸಿಕೊಳ್ಳಬಹುದು. ಪಠ್ಯದ ನಿಖರತೆ ಪಿ.ಡಿ.‌ಎಫ್ ಅಥವಾ ಚಿತ್ರದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಪುಸ್ತಕಗಳ ಸ್ಕ್ಯಾನ್‌ ಗಳ ಕಡತದಿಂದಲೂ ಶೇಕಡ ೯೯. ರಷ್ಟು ನಿಖರವಾಗಿರುವ ಪಠ್ಯವನ್ನು ಪಡೆಯಲಾಗಿದೆ.

ಇತ್ತೀಚೆಗೆ ಸಂಚಯ ಜಾಲತಾಣದಲ್ಲಿ ಪುಸ್ತಕಗಳ ಡಿಜಿಟಲೀಕರಣ ಯೋಜನೆಯ ಅಂಗವಾಗಿಸಿ. ಬೆನ್ಸನ್ ದೊರೆಗಳು ಮತ್ತು . . ರಾ. ಸಿ. ಕೆ. ಸುಬ್ಬರಾಯರು ೧೯೦೫ರಲ್ಲಿ ಬರೆದು ಮುದ್ರಿಸಿದ್ದ ಕೃಷಿಶಾಸ್ತ್ರದ ಪುಸ್ತಕವನ್ನು ಡಿಜಿಟಲೀಕರಿಸಲಾಯಿತು. ಅದನ್ನು ಓ.ಸಿ.‌ಆರ್ ಮಾಡಿ ಪಡೆದ ಫಲಿತಾಂಶವನ್ನು ಚಿತ್ರದಲ್ಲಿ  ಕಾಣಬಹುದು


ಪಿ.ಡಿಎಫ್‌ ರೂಪದಲ್ಲಿರುವ ಇಡೀ ಪುಸ್ತಕವನ್ನೂ .ಸಿ.‌ಅರ್ ಮಾಡಿ, ಅದರಲ್ಲಿನ ಕನ್ನಡ ಪದಗಳನ್ನು ಹುಡುಕುವಂತೆ ಕೂಡ ಮಾಡಬಹುದು.

ಭಾಷಾ ತಂತ್ರಜ್ಞಾನಗಳು ಮುದ್ರಿಸಿದ ಚಿತ್ರ ರೂಪದ ಅಕ್ಷರಗಳು ಯಾವ ಭಾಷೆಯದು ಎನ್ನುವುದುನ್ನು ಗುರುತಿಸಲು ನೆರವಾಗುತ್ತವೆ.  ಜೊತೆಗೆ, ಹಿಂದೆ ಪ್ರಕಟವಾಗಿದ್ದ ಎಲ್ಲ ಕೃತಿಗಳನ್ನು ತಂತ್ರಜ್ಞಾನದ ಸಹಾಯದಿಂದ ಹುಡುಕಲು, ಭಾಷೆಯ ಬೆಳವಣಿಗೆಯ ಬಗ್ಗೆ ಅರಿಯಲು, ಅದರಲ್ಲಿನ ಜ್ಞಾನದ ಹರಿವನ್ನು ಜನಸಾಮಾನ್ಯರೂ ತನ್ನದಾಗಿಸಿಕೊಳ್ಳುವುದಕ್ಕೆ ಹೊಸ ಆಯಾಮಗಳನ್ನು ಇವು ಕೊಡುತ್ತಿವೆ

ಇದುವರೆವಿಗೂ ವಿವಿಧ ಮಾಧ್ಯಮಗಳಲ್ಲಿ ಮುದ್ರಿತಗೊಂಡಿರುವ ವಿಜ್ಞಾನ ಲೇಖನಗಳು, ಪುಸ್ತಕಗಳು, ನಿಘಂಟುಗಳು ಯುನಿಕೋಡ್‌ನಲ್ಲಿ ದೊರೆಯುವಂತಾದರೆ ಏನಾಗಬಹುದು? ಈವರೆಗೆ ಬಳಸಿರುವ ವಿಜ್ಞಾನ ಪದಗಳ ಪಟ್ಟಿ ದೊರೆತು, ಅವುಗಳ ಸರಿಯಾದ ಬಳಕೆಯ ಬಗ್ಗೆ ವಿಜ್ಞಾನ ಲೇಖಕರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತಷ್ಟು ಉತ್ತಮ ಲೇಖನಗಳನ್ನು ಕನ್ನಡದಲ್ಲಿ ಒದಗಿಸಲು ಇದು ಸಹಕಾರಿಯಾಗುತ್ತದೆ

ಓ.ಸಿ.ಆರ್‌ ಬಳಸಿದರೆ ಈಗಾಗಲೇ ಇರುವ ನಿಘಂಟುಗಳನ್ನು ತ್ವರಿತವಾಗಿ ಯುನಿಕೋಡ್‌ಗೆ ಪರಿವರ್ತಿಸಲು ಮತ್ತು ಅವುಗಳನ್ನು ಬಳಕೆಗೆ ಅನುವು ಮಾಡಿಕೊಡಲು, ಯುನಿಕೋಡ್‌ ರೂಪಕ್ಕೆ ಪರಿವರ್ತಿಸಲು ತಗಲುವ ಸಮಯ ಕಡಿಮೆ ಆಗುತ್ತದೆ

ಪಿ.ಡಿ.ಎಫ್ನಲ್ಲಿ ಹುಡುಕುವುದು ಸಾಧ್ಯವಾದರೆ ಇಡೀ ಪುಸ್ತಕದಲ್ಲಿ ನಮಗೆ ಬೇಕಿರುವ ಪದ ಎಲ್ಲೆಲ್ಲಿದೆ ಎಂದು ಹುಡುಕಬಹುದು.  ಮುಂದೆ ಇದೇ ಪುಸ್ತಕವನ್ನು  -ಪುಸ್ತಕ ರೂಪಕ್ಕೆ ರೂಪಾಂತರಿಸಿದರೆ,  ಪದವನ್ನು ಹುಡುಕುವುದರ ಜೊತೆಗೆ ನಿಘಂಟುವಿನಿಂದ ಅದರ ಇತರೆ ಅರ್ಥಗಳೂ ಸಿಗುವಂತೆ ಮಾಡಬಹುದು. ಆಗ ವಿಜ್ಞಾನವನ್ನು ಓದುವುದರ ಮಜವೇ ಬೇರೆ ಅಲ್ಲವೇ? ಗೂಗಲ್ ಮಾಡುವಾಗಲೇ ಪುಸ್ತಕಗಳ  ಒಂದು ಮುನ್ನೋಟ (‌preview) ದೊರೆತರೆ, ನಮ್ಮ ಬರೆವಣಿಗೆಗೆ, ಸಂಶೋಧನೆಗೆ ಹೊಸ ಎಂಜಿನ್ ಅಳವಡಿಸಿದಂತಾಗುತ್ತದೆ.

ಮುಂದಿನ ದಿನಗಳಲ್ಲಿ ನೀವು ದಿನನಿತ್ಯ ಧರಿಸುವ ಕನ್ನಡಕಗಳಿಗೂ ‍ ಮಿಥ್ಯಾವಾಸ್ತವ (ಆರ್ಟಿಪಿಷಿಯಲ್ ಇಂಟೆಲಿಜೆನ್ಸ್, ವರ್ಚುಅಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ, ‍ಇಮ್ಮರ್ಸಿವ್ ‍ಟೆಕ್ನಾಲಜಿ ಹೀಗೆ ಹತ್ತು ಹಲವು ಮಿಥ್ಯಾವಾಸ್ತವ ತಂತ್ರಜ್ಞಾನಗಳನ್ನು ಒಳಗೊಂಡ) ತಂತ್ರಜ್ಞಾನ ಬಳಸಿ, ನೀವು ನೋಡಿದ ಬೋರ್ಡ್ ಬರಹವನ್ನು ಚಿತ್ರೀಕರಿಸಿ, ಅದನ್ನು ಆಯಾ ಭಾಷೆಗೆ ಓ.ಸಿ.‌ಆರ್ ಮಾಡಿ, ಅನಂತರ ನಮ್ಮ ಕನ್ನಡಕ್ಕೆ ಅನುವಾದಿಸಿ ಓದಿ ಹೇಳುವ ದಿನಗಳನ್ನು ಕಲ್ಪಿಸಿಕೊಳ್ಳಿ. ಅಂತಹ ಕೆಲವು ತಂತ್ರಾಂಶಗಳನ್ನು ಈಗಾಗಲೇ ಬಳಸಲಿಕ್ಕೂ ಪ್ರಾರಂಭಿಸಿದ್ದೀರಿ.

ಎಲ್ಲವೂ ತ್ವರಿತವಾಗಿ ಪಡೆಯಲು ಹವಣಿಸುವ ಕಾಲದಲ್ಲಿ ಕನ್ನಡದ ವಿಜ್ಞಾನ ಸಾಹಿತ್ಯದ ಇತಿಹಾಸದ ಪುಟಗಳು ಕೂಡ ಎಲ್ಲರಿಗೆ ಸುಲಭವಾಗಿ, ತಂತ್ರಜ್ಞಾನದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ದೊರಕುವಂತಾಗಲಿ ಎನ್ನುವುದು ಎಲ್ಲರ ಹಂಬಲ. ಅದಕ್ಕೆ ಈ ಓಸಿಆರ್‌ ಎನ್ನುವ ತಂತ್ರ ನೆರವಾಗಲಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ನಿರಂಜನ
ಅರವತ್ತರ ದಶಕದಲ್ಲಿ ನಿರಂಜನ ಹುಟ್ಟುಕುಳಕುಂದ ಶಿವರಾಯ
15/06/1924
ಕುಳಕುಂದರಾಷ್ಟ್ರೀಯತೆಭಾರತೀಯವೃತ್ತಿಬರಹಗಾರKnown forಬರಹ, ಸ್ವಾತಂತ್ರ್ಯ ಹೋರಾಟಚಳುವಳಿಭಾರತ ಸ್ವಾತಂತ್ರ್ಯ ಸಂಗ್ರಾಮಸಂಗಾತಿ(ಗಳು)ಅನುಪಮಾ ನಿರಂಜನಮಕ್ಕಳುಸೀಮಂತಿನಿ ಮತ್ತು ತೇಜಸ್ವಿನಿಹೆತ್ತವರುತಾಯಿ ಚೆನ್ನಮ್ಮಪ್ರಶಸ್ತಿಗಳುಸೋವಿಯತ್‍ಲ್ಯಾಂಡ್ ನೆಹರೂ ಪ್ರಶಸ್ತಿಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ.
ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
ನಿರಂಜನರ ಒಟ್ಟು ೫೫ ಕೃತಿಗಳು ಮರುಪ್ರಕಟಗೊಳ್ಳಲಿವೆ. ಇದು CC-BY-SA 4.0 ಪರವಾನಗಿಯೊಂದಿಗೆ ಭಾರತೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿರುವ ಒಬ್ಬನೇ ಲ…

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಮತ್ತೊಂದು ಸುಲಭ ಉಪಾಯ

ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ, ಮತ್ತೆ ಮತ್ತೆ ಕನ್ನಡ ಟೈಪಿಸುವುದು ಹೇಗೆ ಎಂದು ಹೇಳುವುದನ್ನು ಆಗ್ಗಾಗೆ ಮಾಡಿದರೂ, ಅದನ್ನು ಇನ್ನೊಮ್ಮೆ ಬ್ಲಾಗಿಸಲೇ ಬೇಕಿರುವ ಅಗತ್ಯತೆ ಹೆಚ್ಚುತ್ತಿದೆ.

ಕನ್ನಡದ ಪದಗಳನ್ನು ಯುನಿಕೋಡ್‌ನಲ್ಲಿ ಗೂಗಲ್, ಬಿಂಗ್, ಯಾಹೂ ನಂತಹ ಸರ್ಚ್ ಎಂಜಿನ್‌ಗಳು ನೋಡಲು ಸಾಧ್ಯವಾಗದೆ ಇದ್ದಾಗ, ಈ ಕಂಪೆನಿಗಳು ಆಯಾ ಭಾಷೆಗೆ ಬೇಕಿರುವ ಸೌಲಭ್ಯಗಳನ್ನು ತಮ್ಮ ವೆಬ್‌ಸೈಟ್‌ನಿಂದ ಒದಗಿಸಲು ಮುಂದೆ ಬರುವುದಿಲ್ಲ. ಕನ್ನಡದ ಬಳಕೆ ಇಂಟರ್ನೆಟ್ ನಲ್ಲಿ ಹೆಚ್ಚಾಗಲು ನಾವು ಅದನ್ನು ಇಂಗ್ಲೀಷ್‌ನಲ್ಲೇ ಟೈಪಿಸಿದರೆ ಸಾಲದು, ಜೊತೆಗೆ ಎಲ್ಲರು ನೋಡಲು ಇಚ್ಚೆ ಪಡುವ, ನೋಡಲು ಸಾಧ್ಯವಾಗಿಸುವ ಯುನಿಕೋಡ್‌ನಲ್ಲೇ ಟೈಪಿಸಬೇಕು.

ಬರಹ, ನುಡಿ ಇತ್ಯಾದಿಗಳ ತಂತ್ರಾಂಶಗಳು ಲಭ್ಯವಿಲ್ಲದ ಪಕ್ಷದಲ್ಲಿ ಗೂಗಲ್ ಕ್ರೋಮ್‌ನ ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಈ ಕೆಳಗಿನ ಚಿತ್ರದಲ್ಲಿರುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ಅಥವಾ ಇನ್ಯಾವುದೇ ಭಾಷೆಗಳನ್ನು ಟೈಪಿಸಲು ಸಾಧ್ಯವಿದೆ.


ಈ ಎಕ್ಸ್‌ಟೆನ್ಷನ್ ವಿಕಿಪೀಡಿಯವನ್ನು ನೆಡೆಸುತ್ತಿರುವ ವಿಕಿಮೀಡಿಯ ಫೌಂಡೇಷನ್‌ನ …

ಅಂತರ್ಜಾಲದಲ್ಲಿ ಕೋಲಾಹಲ

೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ:


ವ್ಯಂಗ್ಯಚಿತ್ರ ಕೃಪೆ: ಉದಯವಾಣಿ


ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ. ಮುಕ್ತವಾಗಿ, ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಇತ್ಯಾದಿಗಳ ಮುಖೇನ ಕೈಬೆರಳಿನ ಕೆಲವೇ ಕ್ಲಿಕ್‌ಗಳಲ್ಲೇ ಜಗತ್ತಿನ ಎಲ್ಲರ ಕಂಪ್ಯೂಟರ್ ಪರದೆಗಳ ಮೇಲೆ ಮೂಡಿಸಬಹುದು. ಪಠ್ಯ, ಬ್ಲಾಗ್, ಸುದ್ದಿ, ದೃಶ್ಯ, ಶ್ರಾವ್ಯ, ಚಿತ್ರ ಹೀಗೆ ಹತ್ತು ಹಲವು ಮಾದರಿಯಲ್ಲಿ ಇಂಟರ್‌ನೆಟ್‌ನ ಮಾಹಿತಿ ನಮಗೆ ಲಭ್ಯ. ಈ ಮಾಹಿತಿ ಬಂದದ್ದಾದರೂ ಎಲ್ಲಿಂದ? - ನಾವು ದಿನನಿತ್ಯ ಇಂಟರ್‌ನೆಟ್‌ನಲ್ಲಿ ಕಾಣುವ ಎಲ್ಲ ವಿಷಯಗಳು ಆಯಾ ವೆಬ್‌ಸೈಟ್ನದ್ದೇ ಅಥವಾ ‘ಪೈರಸಿ’ಯೋ?
ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಇಂಟರ್‌ನೆಟ್ ಅನ್ನು ಅರಿಯುವ ಒಂದು ಸಣ್ಣ ಪ್ರಯತ್ನ ಮಾಡೋಣ. ಮಿಲಿಟರಿ ಸಂಬಂಧಿತ ವಿಷಯಗಳನ್ನು ಒಂದು ಪ್ರದೇಶದಿಂಡ ಮತ್ತೊಂದು ಪ್ರದೇಶಕ್ಕೆ ರವಾನಿಸುವಾಗ ತಗುಲುತ್ತಿದ್ದ ಸಮಯವನ್ನು ಕಡಿಮೆ ಮಾಡಲು ಅಮೇರಿಕಾದಲ್ಲಿ ಹುಟ್ಟಿದ ‘ಆರ್ಪಾನೆಟ್' (ARPANET) ಎಂಬ ಕಂಪ್ಯೂಟರ್‌ಗಳನ್ನು ಒಂದಕ್ಕೊಂದು ಸಂಪರ್ಕದಲ್ಲಿರುವಂತೆ ಮಾಡುವ ತಂತ್ರಜ್ಞಾನ, ಇಂದು ಬೃಹದಾಕಾರದಲ್ಲಿ ಬೆಳೆದು ನಮಗೆಲ್ಲ ‘ಇಂಟರ್‌ನೆಟ್’ ಅಥವ ‘ಅಂತರ್ಜಾಲ' ಎಂದೇ ಚಿರಪರಿಚಿತವಾಗಿದೆ. ಮಾಹಿತಿ ವಿನಿಮಯವೇ ಮುಖ್ಯವಾದ ಇಂಟರ್‌…