ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಏರ್ಪೋರ್ಟ್

ನಡುರಾತ್ರಿಯೂಸೂರ್ಯನನಾಚಿಸುವ ಬೆಳ್ಳಂಬೆಳಕು
ಕತ್ತಲೆಯನ್ನೂಕತ್ತಲೆಯಲ್ಲಿಹಗಲನ್ನೂ ಕಳೆದವರ, ಕಳೆದುಕೊಂಡವರತವರಿದು ಗಜಿಬಿಜಿಗಜಿಬಿಜಿಗೊಣಗುವಗೂಡಿದು
ಸುಸ್ತಾಗಿಬೇಸ್ತುಬಿದ್ದವಗೆ, ಚಿಂತೆಇಲ್ಲದವಗೆ, ಕೊಕ್ಕರಿಸಿಕೂರಬಲ್ಲವಗೆ, ಹಕ್ಕಿಯಂತೆಹಾರುವ ಕನಸುಕಂಡವಗೆತಂಗುದಾಣವಿದು
ಅದೋಹಕ್ಕಿಹಾರುತಿದೆಎಂದುಹೇಳುವರಿಲ್ಲ, ಇದುಶಾಂತನಿಲ್ದಾಣ... ಎಚ್ಚರದಿಂದೇರುವುದು ಉಚಿತವ್ಯವಧಾನಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍
ನ‍ಗರವಿಡೀ ಹರಡಿಹವು‍
ಮತಭೇದವಿಲ್ಲ ಜೋಕೆ,ಎಚ್ಚರ-ತಪ್ಪಿದಿರೋ ‍
ಬಿದ್ದೀರಿ - ಆ ಕಪ್ಪು ರಂಧ್ರಗಳಲ್ಲಿ ದಸರೆಯ ಆನೆಗಳು ಅಲುಗಿದರೂ
‍ಸಹಿಸಬಹುದೇನೋ
‍ಇಲ್ಲಿ ದಿನವೂ ಮೈ ಜುಮ್ಮೆನಿಸುವ
‍‌ಸ್ವರ್ಗ ಅಲ್ಲಲ್ಲ‍... ನರಕದ ಸವಾರಿ

ಆ ಧರ್ಮರಾಯ‍ನ ಸವಾರಿಯಾದರೂ
‍ಸೇರೀತು ದಡವ - (ಸ್ವರ್ಗಕ್ಕೋ - ನರಕಕ್ಕೋ)
ತೆರಿಗೆ ಪಾವ‍‌ತಿಸಿದರೂ‍ ಬಡವನಿಗೆಲ್ಲಿದೆ‍ ‍
ರ‍ಹದಾರಿಯ ತೆರವು

ನಮ್ಮ ನಮ್ಮಲ್ಲಿಯೇ ಕೋಪ ತಾಪದ
‍‌ನೆವವು - ಬೈದು‍, ಬೈಸಿಕೊಂಡು
ಮೂರನೇ ಕಣ್ಣು ತೆಗೆದು‍ ‍‍ಶಾಪ
ಹಾಕಿ ನೆಡೆವುದಷ್ಟೇ.... ಮಳೆರಾಯನೂ ನಗುವನು ಪ್ರತಿವರ್ಷ‍
‍ಕಪ್ಪು - ಬಿಳುಪು - ಬೂದು ‍
ಮತ್ತೆ ಕಂಡಿದ್ದು, ಮಿಂದದ್ದು
‍ಉಳಿದದ್ದೂ ಮ‍ಣ್ಣು... ಹೇಳ ಬೇಕಷ್ಟೇ....
‍ನಮ್ಮೂರ ರಸ್ತೆಗಳು
‍ಚಂದ್ರ - ಮಂಗಳ ಮುಂದೆ ಬೇರೆ ಲೋಕಕ್ಕೂ
‍ಪಯಣದ ಪ್ರಾರಂಭ ಇಲ್ಲಿಂದಲೇ...

ಭಾಷೆ ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮಾತನಾಡಲಾಗದ ಎಷ್ಟೋ ವಿಷಯಗಳನ್ನು
ತನ್ನದೇ ಅಕ್ಷರಗಳಲ್ಲಿ ಬರೆಯುವ, ಉಸುರುವ
ಗಟ್ಟಿಯಾಗಿ ಉಚ್ಚರಿಸುವ ಅನುಭವಿಸುವ
ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು


‍ಕಾರ್ಪೋರೇಟ್ ಜಗತ್ತಿನ ಅಂಕುಶಕ್ಕೆ ಬಿದ್ದು
ಎತ್ತರದ ದನಿಯಲ್ಲಿ ಮಾತನಾಡಲಾಗದ ಸ್ಥಿತಿ
ತಲುಪಿ - ಅದನ್ನೆದಿರಿಸಲು ಉತ್ತರವಾಗಬಲ್ಲದು
ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮೂರು ಗೋಡೆಗಳ ಮಧ್ಯದ ಹಾಗೂ ಸ್ವಚ್ಚಂದ
ಸ್ವಾತಂತ್ರ್ಯದ ಬದುಕು - ಸಾಮಾಜಿಕವಾಗಿ ಖಾಸಗಿ
ಅಲ್ಲವೇ ಅಲ್ಲ - ಅಲ್ಲಿಯೂ ಹಿಂತಿರುಗಿ ಉತ್ತರಿಸಲು
ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ವಿಶ್ವಕ್ಕೆಲ್ಲ ತಿಳಿಯುವಂತೆ ಬೈದರೂ ತಪ್ಪು,
ಉಸಿರೆತ್ತದಿದ್ದರೆ ಉದರ ದಹಿಸಿ ಕುಸಿಯುವೆ
ಮನದಲ್ಲಿರುವುದನ್ನೆಲ್ಲಾ ಹೊರ ಹಾಕುವ ಕಸುವು
ಭಾಷೆ  - ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ನಿರಂಕುಶಮತಿಗಳಿಗೆ, ದಬ್ಬಾಳಿಕೆ, ದೌರ್ಜನ್ಯದ
ಪರಮಾವಧಿಗೆ, ತುಳಿಯುವ, ಹಳಿಯುವ,
ಬೆಳಕು ಮತ್ತು  ಕಸಿಯುವ ಹುನ್ನಾರಗಳಿಗೆ ಉತ್ತರ ನೀಡಲು
ಭಾಷೆ  - ಆ ಸ್ವಾತಂತ್ರ್ಯವನ್ನು ನೀಡಬಲ್ಲದು