ಏರ್ಪೋರ್ಟ್ನಡುರಾತ್ರಿಯೂ ಸೂರ್ಯನ ನಾಚಿಸುವ
ಬೆಳ್ಳಂಬೆಳಕು

ಕತ್ತಲೆಯನ್ನೂ ಕತ್ತಲೆಯಲ್ಲಿ ಹಗಲನ್ನೂ
ಕಳೆದವರ, ಕಳೆದುಕೊಂಡವರ ತವರಿದು
ಗಜಿಬಿಜಿ ಗಜಿಬಿಜಿ ಗೊಣಗುವ ಗೂಡಿದು

ಸುಸ್ತಾಗಿ ಬೇಸ್ತು ಬಿದ್ದವಗೆ, ಚಿಂತೆ ಇಲ್ಲದವಗೆ,
ಕೊಕ್ಕರಿಸಿ ಕೂರಬಲ್ಲವಗೆ, ಹಕ್ಕಿಯಂತೆ ಹಾರುವ 
ಕನಸು ಕಂಡವಗೆ ತಂಗುದಾಣವಿದು

ಅದೋ ಹಕ್ಕಿ ಹಾರುತಿದೆ ಎಂದು ಹೇಳುವರಿಲ್ಲ,
ಇದು ಶಾಂತ ನಿಲ್ದಾಣ... ಎಚ್ಚರದಿಂದೇರುವುದು
ಉಚಿತ ವ್ಯವಧಾನ 
ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು