ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಗಪದ ಕನ್ವರ್ಟರ್ ಟೂಲ್ - ಇದು ಅರವಿಂದನ ಸಂಕ

ಕಗಪದ ಕನ್ವರ್ಟರ್ ಟೂಲ್ - ಇದು ಅರವಿಂದನ ಸಂಕ - ಇನ್ಸ್ಟಾಲ್ ಮಾಡುವಾಗ ಬರುವ ಒಂದು ಸ್ಕ್ರೀನ್ ನಲ್ಲಿ Thank you Aravinda VK ಎಂದು ಹಾಕುವುದು ಬಿಟ್ಟರೆ, ಮಿಕ್ಕೆಲ್ಲ ಕಡೆ ಅದಕ್ಕೆ ಸಂಬಂ‌ಧಿಸಿದ ಮಾಹಿತಿ ಕನ್ವರ್ಟರ್ ಮುಖ ಪುಟದಲ್ಲಿಲ್ಲ. ‌ HTML ನ ಜಾವಾಸ್ಕ್ರಿಪ್ಟ್ ನಲ್ಲಿ ಹುದುಗಿರುವ ಜಿಪಿಎಲ್ ಲೈಸೆನ್ಸ್ ಮಾಹಿತಿ ತೆಗೆದಿಲ್ಲ ಎನ್ನುವುದೊಂದೇ ಸಮಾಧಾನ. ಆದರೆ ಬರೀ ಇನ್ಸ್ಟಾಲರ್ ಮಾಡಲು - ಇಡೀ ತಂತ್ರಾಂಶದ ಕಾಪಿರೈಟ್ ಕಗಪದು ಎನ್ನುವುದೇತಕ್ಕೆ? ಜೊತೆಗೆ ಇದು ಕಗಪದ ಕನ್ವರ್ಟರ್ ಎಂದು ಹೇಳುವುದು ಎಂತಹ ದೊಡ್ಡತನ‍? http://www.kagapa.in/kannada/sites/default/files/downloads/Kagapa%20Conversion%20Tool.zip

ನಿಜ ಜೀವನದ ಪುಟ್ಟ ಅನಾವರಣ

ಜಡತ್ವದ ಹುಸಿ ಮುನಿಸ ಮೆಲ್ಲ ತಟ್ಟಿ
ಚುಮುಚುಮು ಚಳಿಗೆ ಬಿಸಿ ಕಾಸಿ
ಮೈದೂಡವಿ ನಿಂತು ಟೊಂಕ ಕಟ್ಟಿ
ಆಗತಾನೇ ಸೂರ್ಯ ರಶ್ಮಿಯ ಜಳಪಿಸಿದ
ರವಿಯೂ ನಾಚುವಂತೆ, ಬೆವರು ಸುರಿಸುವ
ದಿನಕೂಲಿಯವನಿವ - ಭಿನ್ನವೇನಿಲ್ಲ ನಮ್ಮ ಬಿಳಿ ಕಾಲರಿನ ಕೆಲಸಕ್ಕಿಂತ..
ಚಳಿ ಕಾಸಲು ಕೆಪೆಚಿನೊ ಇತ್ಯಾದಿ ಆಡಂಬರದ
ತಡೆಗೋಡೆ ಬಿಟ್ಟು ಹೊರ ಬನ್ನಿ, ಕಾದಿದೆ
ಸಿಟಿ ಮಾರ್ಕೆಟ್ಟು, ಹೂವು, ತರಕಾರಿ,
ಹಣ್ಣುಹಂಪಲು - ಪೋಟೋ ಸೆಲ್ಫಿಯ ಜೊತೆ
ನಿಜ ಜೀವನದ ಪುಟ್ಟ ಅನಾವರಣ (...)

ಲೇಖಕಿ ಎ. ಪಿ. ಮಾಲತಿ ಪುಸ್ತಕಗಳ ಡಿಜಿಟಲೀಕರಣದ ಯೋಜನೆ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ. ‌#kannada #digitization#books#apmalathi ಪುಸ್ತಕಗಳ ಕೊಂಡಿ: http://bit.ly/apmalathi-sanchaya #creativecommons CC-by-NC-SA ಅಡಿ‍ಯಲ್ಲಿ ಈ ಪುಸ್ತಕಗಳು ಲಭ್ಯವಾಗಿವೆ. (‌ವಾಣಿಜ್ಯ ಉದ್ದೇಶಗಳನ್ನು ಹೊರತು ಪಡಿಸಿ ಮುಕ್ತವಾಗಿ ಇವನ್ನು ಬಳಸಬಹುದು)‍. ನೀವೂ ಓದಿ, ಇತರ‍ರೊಡನೆ ಹಂಚಿಕೊಳ್ಳಿ. - ಇದರೊಡನೆ ನಮ್ಮ ಯೋಜನೆಯ ಅಡಿ ಡಿಜಿಟಲೀಕರಣಗೊಂಡ ‌ಕನ್ನಡ‍ ಪುಸ್ತಕಗಳ ಸಂಖ್ಯೆ ೯೦೦ರ ಗಡಿ ದಾಟಿದೆ. ಯೋಜನೆ ಪುಟ: https://sanchaya.org/project/kannada-digitization-project/

ಅದೃಶ್ಯನಾಗಬೇಕು

ಅದೃಶ್ಯನಾಗಬೇಕು
ಅನಾಮಿಕನಾಗಬೇಕು
ಅಮೂರ್ತನಾಗಬೇಕು
ಅನಂತನಾಗಬೇಕು
....
ಹೀಗೆ ಒಂದಷ್ಟು...

ಗುಟ್ಟು - ಗಮ್ಮತ್ತು

ಆರಿಸಿ ತೂರಿಸಿ ಆಯ್ದು
ಹರಡಿ ಜರಡಿಯ ಹಿಡಿದು
ಒಪ್ಪ ಮಾಡಿ ಕಾಸಿ ಕಣಜವ
ತುಂಬಿಸಿ, ಕಾದು ಕೊಪ್ಪರಿಗೆ
ಬರಿದಾಗಿಸದೆ ಹೊಟ್ಟೆ ಬಿರಿವಂತೆ
ತಿಂದು, ಮತ್ತಷ್ಟು ಹಂಚಿ
ಇಹದ ಇರುವನ್ನು ಆಯ್ದು
ಆಸ್ವಾದಿಸಿ ನಿಟ್ಟುಸಿರ ಬಟ್ಟರೆ
ಜೀವ ಜಗಮೆಚ್ಚಿ ಅಹುದಹುದೆನ್ನುವುದು...
ರಟ್ಟೆ ಗಟ್ಟಿಗೊಳಿಸುವ ಕಸರತ್ತು
ಕಲಿತು ತಾಲೀಮು ನೆಡೆಸುವುದೇ
ಗುಟ್ಟು - ಗಮ್ಮತ್ತು

ಮಿಂಚು ಹುಳುಗಳ ದಂಡು

ಅಧಿಪತಿಯಆಗಮನನಿರ್ಗಮನದ ಕಸರತ್ತಿಗೆರತ್ನಕವಚದವಸ್ತ್ರ ಮೇಲೂಕೆಳಗೂಮಿನುಗು ‌ಬೆಳಗಿನಅಂಚು… ಮಧ್ಯೆಅವೆರಡನ್ನೂನೋಡಿನಲಿವ ನಾವುಮಿಂಚುಹುಳುಗಳದಂಡು ಕ್ಷಣಮಾತ್ರದಬದುಕು…